ಕನ್ನಡದ ನಟಿ ದಿವ್ಯಾ ಶ್ರೀಧರ್ ಲವ್ ಜಿಹಾದ್ ಆರೋಪಕ್ಕೆ ಪತಿ ಅಮ್ಜಾದ್ ಖಾನ್ ಪ್ರತಿಕ್ರಿಯೆ

Public TV
2 Min Read

ತಿ ಅರ್ನವ್ ಅಲಿಯಾಸ್ ಅಮ್ಜಾದ್ ಖಾನ್ ತಮಗೆ ದೈಹಿಕವಾಗಿ ಹಿಂಸೆ ನೀಡಿದ್ದು, ಇದರಿಂದಾಗಿ ತಮ್ಮ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆ ಆಗಿದೆ. ನನ್ನ ಮಗುವನ್ನು ನಾನು ಉಳಿಸಿಕೊಳ್ಳಬೇಕಿದೆ ಎಂದು ನಿನ್ನೆಯಷ್ಟೇ ಕನ್ನಡದ ಖ್ಯಾತ ನಟಿ ದಿವ್ಯಾ ಶ್ರೀಧರ್ (Divya Sridhar) ವಿಡಿಯೋವೊಂದರಲ್ಲಿ ಮಾತನಾಡಿದ್ದರು. ತಾವೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ತಿಳಿಸಿದ್ದರು.

ಈ ಕುರಿತಂತೆ ದಿವ್ಯಾ ಪತಿ ಅಮ್ಜಾದ್ ಖಾನ್ (Amjad Khan) ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಹಲ್ಲೆ ಮಾಡುವಂತಹ ಹುಡುಗ ಅಲ್ಲ. ನನ್ನ ಮನೆಯಲ್ಲಿ ಸಿಸಿಟಿವಿ ಇದೆ. ಯಾರು ಬೇಕಾದರೂ ಬಂದು ನೋಡಬಹುದು. ದಿವ್ಯಾಗೆ ಕೆಲ ಕೆಟ್ಟ ಸ್ನೇಹಿತರ ಸಹವಾಸವಿದೆ. ಅವರೆಲ್ಲ ಸೇರಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಗರ್ಭಪಾತ ಮಾಡಿಸಿಕೊಳ್ಳಲು ದಿವ್ಯಾ ಈ ರೀತಿಯಲ್ಲಿ ನಾಟಕವಾಡುತ್ತಿರಬೇಕು. ನನಗೆ ನನ್ನ ಮಗು ಬೇಕು. ನಾನು ಕೂಡ ಕಮಿಷ್ನರ್ ಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:‘ಅರ್ಧಂಬರ್ಧ ಪ್ರೇಮಕಥೆ’ಯಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ

ಅರ್ನವ್ (Arnav) ಅಲಿಯಾಸ್ ಅಮ್ಜದ್ ಖಾನ್ ಕೂಡ ಖ್ಯಾತ ಕಿರುತೆರೆಯ ನಟ. 2017ರಲ್ಲಿ ಅರ್ನವ್ ಮತ್ತು ದಿವ್ಯಾ ಒಂದೇ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ್ದರು. ದಿನವೂ ಶೂಟಿಂಗ್ ನಲ್ಲಿ ಸಿಗುತ್ತಿದ್ದರಿಂದ ಸ್ನೇಹವಾಗಿ, ಆನಂತರ ಪ್ರೀತಿ ಬೆಳೆದಿದೆ. ಐದು ವರ್ಷಗಳ ಕಾಲ ಇಬ್ಬರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ. ಆನಂತರ ಮದುವೆ ಆಗಿದ್ದಾರೆ. ಈ ವಿಷಯವನ್ನು ಸ್ವತಃ ದಿವ್ಯಾ ಶ್ರೀಧರ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು, ‘ತಮ್ಮಿಬ್ಬರದ್ದು ಬೇರೆ ಬೇರೆ ಸಂಪ್ರದಾಯವಾಗಿದ್ದರೂ, ತಾವು ಅದೃಷ್ಟವಂತ ಜೋಡಿಗಳು’ ಎಂದು ಬರೆದುಕೊಂಡಿದ್ದರು.

ಇದೀಗ ಇಬ್ಬರ ನಡುವೆ ಮನಸ್ತಾಪ ಬಂದು, ‘ನಿನ್ನೆ ನನ್ನ ಗಂಡ ಹಲ್ಲೆ ಮಾಡಿದ್ದಾನೆ. ಕೆಳಗೆ ಬಿದ್ದು ಹೊಟ್ಟೆಯ ಭಾಗಕ್ಕೆ ನೋವಾಗಿದೆ. ಕೈಕಾಲಿನ್ನೆಲ್ಲಾ ತುಳಿದು ನೋವು ತಡೆಯಲಾಗದೇ ಪೇಚಾಡಿದ್ದೇನೆ. ಆಗ ಲೋ ಬಿಪಿಯಾಗಿ ಅಸ್ವಸ್ಥಳಾಗಿದ್ದೆ. ತುಂಬಾ ಸಮಯವಾದ ಮೇಲೆ ನನಗೆ ಪ್ರಜ್ಞೆ ಬಂತು. ನನ್ನ ಗಂಡ ಮನೆಯಲ್ಲೇ ಇದ್ದ. ಆದರೂ ನನ್ನನ್ನು ಆಸ್ಪತ್ರೆಗೆ ಸೇರಿಸಿಲ್ಲ. ನನಗೆ ಪ್ರಜ್ಞೆ ಬಂದ ಮೇಲೆ ಮನೆಯಿಂದ ಹೊರಗಡೆ ಹೋದ. ಅಲ್ಲದೇ ಹೊಟ್ಟೆ ನೋವಿನಿಂದ ನಾನು ನರಳಿದೆ. ಮರುದಿನ ಬೆಳಗ್ಗೆ ಅತೀವ ರಕ್ತಸ್ರಾವ ವಾಯ್ತು. ನನ್ನ ಗಂಡನಿಗೆ ಕರೆ ಮಾಡಿದೆ. ಅವನು ಬೇರೆ ಅಪಾರ್ಟ್‍ಮೆಂಟ್‍ನಲ್ಲಿ ಇದ್ದಾನೆ ಎಂದು ಹೇಳಿದ್ರು’ ಎನ್ನುತ್ತಾರೆ ದಿವ್ಯಾ ಶ್ರೀಧರ್.

ಈಗ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆಗೆ ತುಂಬಾ ಪೆಟ್ಟಾಗಿರೋದ್ರಿಂದ ಯಾವಾಗ ಬೇಕಿದ್ದರು ಗರ್ಭಪಾತವಾಗಬಹುದು ಎಂದು ವೈದ್ಯರು ಹೇಳಿದ್ದಾರಂತೆ.  ‘ಅವನಿಗಾಗಿ ನಾನು ಎಲ್ಲವನ್ನೂ ಮಾಡಿದ್ದೇನೆ. ಆದ್ರೆ ಅವನು ನನ್ನ ನಂಬರ್ ಬ್ಲಾಕ್ ಮಾಡಿದ್ದಾನೆ. ನನ್ನ ಮೆಸೇಜ್‍ಗೆ ರಿಪ್ಲೈ ಕೂಡ ಮಾಡ್ತಿಲ್ಲ. ನನಗೆ ನನ್ನ ಗಂಡ ಬೇಕು. ನನ್ನ ಮಗುವಿಗೆ ಏನೂ ಆಗಬಾರದು ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ ದಿವ್ಯಾ ಶ್ರೀಧರ್.

ದಿವ್ಯಾ ಶ್ರೀಧರ್ ವಿಚಿತ್ರ ಪ್ರೇಮಿ, ಹುಚ್ಚುಡುಗಿ, ಹೀಗೂ ಉಂಟಾ, ಸಾಚಾ ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದು, ಆಕಾಶ ದೀಪ ಧಾರಾವಾಹಿಯ ಮೂಲಕ ಸಖತ್ ಫೇಮಸ್ ಆಗಿದ್ದವರು. ಇದೀಗ ತಮಿಳಿನ ಧಾರಾವಾಹಿವೊಂದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೀಗ ದಿವ್ಯಾ ಶ್ರೀಧರನ್ ಕಿರುಕುಳಕ್ಕೆ (Harassment) ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *