ಕಾರವಾರ: ಆ ಅರಣ್ಯದಲ್ಲಿ ನೂರಾರು ಬುರುಡೆಗಳು, ಸಾವಿರಾರು ಎಲುಬುಗಳು (Cow Bones) ಪತ್ತೆಯಾಗಿವೆ. ಪೊಲೀಸರು ಇದೀಗ ಇದರ ರಹಸ್ಯ ಹೊರಗೆಳೆಯಲು ತನಿಖೆಗಿಳಿದಿದ್ದಾರೆ.
ಉತ್ತರ ಕನ್ನಡ (Uttara kannada) ಜಿಲ್ಲೆಯ ಭಟ್ಕಳದ ಮುಗ್ದಮ್ ಕಾಲೋನಿ ಬಳಿಯ ಅರಣ್ಯ ಇಲಾಖೆಗೆ ಸೇರಿದ ಬೆಳ್ನೆ ಅರಣ್ಯದ ಸರ್ವೇ ನಂಬರ್ 74ರ ಜಾಗದಲ್ಲಿ ನೂರಾರು ಗೋವುಗಳ ಕಳೇಬರದ ರಾಶಿಯೇ ಪತ್ತೆಯಾಗಿದೆ. ಸ್ಥಳೀಯರು ಈ ಕಾಡಿನ ಭಾಗದಲ್ಲಿ ರಾಶಿ ರಾಶಿ ಬಿದ್ದ ಗೋವುಗಳ ಅಸ್ಥಿಪಂಜರವನ್ನು ನೋಡಿ ಹಿಂದೂ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇದು ತಿಳಿಯುತ್ತಿದ್ದಂತೆ ರಾಶಿ ರಾಶಿ ಬಿದ್ದಿದ್ದ ಅಸ್ಥಿಪಂಜರಗಳನ್ನ ಆ ಸ್ಥಳದಿಂದ ಅನಾಮಿಕ ವ್ಯಕ್ತಿಗಳು ಬೇರೆಡೆ ಸಾಗಿಸಿದ್ದಾರೆ. ಸಾಗಿಸುವ ವೇಳೆ ಅವಸರದಲ್ಲಿ ಪಕ್ಕದಲ್ಲಿದ್ದ ಪುರಸಭೆಯ ವೇಸ್ಟ್ ಡಂಪಿಂಗ್ ಟ್ಯಾಂಕ್‌ಗೂ ಅಸ್ಥಿಪಂಜರಗಳನ್ನು ಹಾಕಲಾಗಿದೆ.
ಇನ್ನು ಭಟ್ಕಳದಲ್ಲಿ ನಿರಂತರ ಗೋವಧೆ ನಡೆಯುತ್ತಿರುವ ಬಗ್ಗೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ರಮವಾಗಿ ಗೋವುಗಳನ್ನು ಭಟ್ಕಳಕ್ಕೆ ತಂದು ವಧಿಸಲಾಗುತ್ತಿದೆ, ಇದಕ್ಕೆ ಪೊಲೀಸ್ ಇಲಾಖೆಯೂ ಸೇರಿಕೊಂಡಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮೇಲೆ ಬಂದಿರುವ ಅಪವಾದಗಳು ಓಡಿ ಹೋಗುತ್ತವೆ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
ಇನ್ನು ಮೊದಲು ಪೊಲೀಸರು ಇದು ಹಳೆಯ ವಿಡಿಯೋ ಎಂದು ಘಟನೆಯನ್ನು ತಳ್ಳಿಹಾಕಿದ್ದರು. ಆದರೆ ಘಟನೆಯ ಸೂಕ್ಷ್ಮತೆ ಅರಿತ ಪೊಲೀಸರು, ಅರಣ್ಯ ಇಲಾಖೆ, ಪುರಸಭೆ ಅಧಿಕಾರಿಗಳು, ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಇನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೋವುಗಳ ವಧೆಯಾಗಿರುವುದನ್ನು ಮನಗಂಡು ಭಟ್ಕಳ ಶಹರ ಠಾಣೆಯಲ್ಲಿ ಉಪ ಅವಲಯ ಅರಣ್ಯಾಧಿಕಾರಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಕೇಸ್ – ಪಾತ್ರವೇ ಇಲ್ಲದ ಪೊಲೀಸ್ ಅಧಿಕಾರಿ ವರ್ಗಾವಣೆ