ಹಣಗಳಿಸಲು ಇಬ್ಬರು ಮಹಿಳೆಯರ ನರಬಲಿ ಕೊಟ್ಟ ಪಾಪಿಗಳು

Public TV
2 Min Read

ತಿರುವನಂತಪುರಂ: ನಾಪತ್ತೆಯಾಗಿದ್ದ ಮಹಿಳೆಯರಿಬ್ಬರು ಕತ್ತು ಸೀಳಿ ದೇಹಗಳ ಭಾಗವೆಲ್ಲವೂ ಬೇರೆ ಬೇರೆಯಾಗಿ ಹೂತಿದ್ದ ರೀತಿಯಲ್ಲಿ ಪತ್ತೆಯಾಗಿದ್ದು, ಹಣಕ್ಕಾಗಿ ಅವರಿಬ್ಬರನ್ನು ನರಬಲಿ (Human Sacrifice) ಕೊಟ್ಟಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ.

ಪದ್ಮಾ (52) ಮತ್ತು ರೋಸ್ಲಿನ್ (50) ಮೃತ ಮಹಿಳೆಯರು. ಎರ್ಬಾಕುಲಂ ಜಿಲ್ಲೆಯ ಪ್ರತ್ಯೇಕ ಊರಿನವರಾಗಿದ್ದ ರೋಸ್ಲಿನ್ ಹಾಗೂ ಪದ್ಮಾರನ್ನು ಮಾಂತ್ರಿಕ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಸೇರಿ ಹೆಚ್ಚು ಹಣ ಗಳಿಸಲು (Financial Troubles)  ನರಬಲಿ ನೀಡಿದ್ದಾರೆ. ಇದಕ್ಕಾಗಿ ಶಿಹಾಬ್ ಎಂಬಾತನ ಸಹಾಯ ಪಡೆದು ಅವನಿಗೂ ಕೆಲ ಆಮಿಷವೊಡ್ಡಿ ನಂಬಿಸಿದ್ದರು. ಇವರು ಹೇಳಿದ್ದ ಆಮಿಷಕ್ಕೆ ಬಲಿಯಾದ ಶಿಹಾಬ್ ಪದ್ಮಾ ಹಾಗೂ ರೋಸ್ಲಿನ್‍ನ್ನು ಅಪಹರಿಸಿದ್ದ.

ಘಟನೆಗೆ ಸಂಬಂಧಿಸಿ ಸೆ. 26ರಂದು ಕಡವಂತ್ರದಿಂದ ಪದ್ಮಾ ನಾಪತ್ತೆಯಾಗಿದ್ದ ಸಂದರ್ಭದಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಕಾಲಡಿಯಿಂದ ರೋಸ್ಲಿನ್ ಇದೇ ರೀತಿ ನಾಪತ್ತೆ ಆಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಪದ್ಮಾ ಅವರ ಮೊಬೈಲ್ ಸಿಗ್ನಲ್ ತಿರುವಲ್ಲಾನಲ್ಲಿ ಟ್ರ್ಯಾಕ್ ಮಾಡಿದ್ದಾರೆ. ಇದಾದ ಬಳಿಕ ಹೆಚ್ಚಿನ ತನಿಖೆ ಕೈಗೊಂಡ ಪೊಲೀಸರಿಗೆ ತಿರುವಲ್ಲಾದಲ್ಲಿ ಇಬ್ಬರು ಮಹಿಳೆಯರ ದೇಹಗಳು ಕತ್ತು ಸೀಳಿ, ತುಂಡು ತುಂಡಾಗಿ ಕತ್ತರಿಸಿ ಹೂಳಲಾದ ಶವವಾಗಿ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಮತ್ತು ಏಜೆಂಟ್ ಶಿಹಾಬ್‍ನನ್ನು ಬಂಧಿಸಿದ್ದಾರೆ. ಈ ಬಗ್ಗೆ ಕೊಚ್ಚಿ ನಗರ ಪೊಲೀಸ್ ಆಯಕ್ತರು ಮಾತನಾಡಿ, ಇಬ್ಬರು ಮಹಿಳೆಯರನ್ನು ಕೊಂದು ಅವರ ಮನೆಯ ಸಮೀಪ ಹೂಳಲಾಗಿದೆ. ಈ ಕೊಲೆಯು ನರಬಲಿಯ ಭಾಗವಾಗಿತ್ತು. ಇದೇ ರೀತಿ ಮತ್ತೂ ಒಂದು ಪ್ರಕರಣವು ವರದಿಯಾಗಿದೆ. ಅದನ್ನು ಖಚಿತ ಪಡಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: BJP ಸರ್ಕಾರವನ್ನು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ: ಸಿದ್ದರಾಮಯ್ಯ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಡಬಲ್ ಮರ್ಡರ್ ಎಂಬುದು ಮಾನವನ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಆತ್ಮ ಸಾಕ್ಷಿ ಇರುವವರು ಇಂತಹ ಕೃತ್ಯದಲ್ಲಿ ಭಾಗಿಯಾಗಿರಬಾರದು. ಮೂಢನಂಬಿಕೆಗಾಗಿ ಜನರನ್ನು ಕೊಲ್ಲುವುದು ಕೇರಳದಲ್ಲಿ ಯೋಚಿಸಲಾಗದ ಅಪರಾಧವಾಗಿದೆ ಎಂದರು. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತೆಗೆ ಬೆಂಕಿಯಿಟ್ಟ ಆರೋಪಿ ತಾಯಿ, ಸಹೋದರಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *