ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ‘ಮಾನವ ಜಿಪಿಎಸ್’ ಎಂದೇ ಕುಖ್ಯಾತಿ ಪಡೆದಿದ್ದ ಬಾಗು ಖಾನ್ ಹತ್ಯೆ

Public TV
2 Min Read
Bagu Khan

ಶ್ರೀನಗರ: ಕಳೆದ ವಾರ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಮೃತ ಇಬ್ಬರ ಪೈಕಿ ‘ಮಾನವ ಜಿಪಿಎಸ್’ (Human GPS)ಎಂದೇ ಕುಖ್ಯಾತಿ ಪಡೆದಿರುವ ಬಾಗು ಖಾನ್ (Bagu Khan) ಹತ್ಯೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸಮಂದರ್ ಚಾಚಾ’ ಎಂದೂ ಕರೆಯಲ್ಪಡುವ ಬಾಗು ಖಾನ್, 1995ರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದ. ಭಾರತದ ಒಳಗೆ ಉಗ್ರರನ್ನು ಕಳುಹಿಸಲು ಸಹಾಯ ಮಾಡುವ ಅತ್ಯಂತ ಹಳೇ ಹಾಗೂ ಪ್ರಮುಖ ಮಾಸ್ಟರ್ ಮೈಂಡ್ ಆಗಿದ್ದ. ಭದ್ರತಾ ಮೂಲಗಳ ಪ್ರಕಾರ, ಗುರೇಜ್ ವಲಯದ ವಿವಿಧ ಪ್ರದೇಶಗಳಿಂದ 100ಕ್ಕೂ ಹೆಚ್ಚು ನುಸುಳುಕೋರತನದ ಯತ್ನಗಳಿಗೆ ಬಾಗು ಖಾನ್ ಕಾರಣನಾಗಿದ್ದ. ಇಲ್ಲಿನ ಕಠಿಣ ಭೂಪ್ರದೇಶ ಮತ್ತು ರಹಸ್ಯ ಮಾರ್ಗಗಳ ಬಗ್ಗೆ ಆತನಿಗೆ ಇದ್ದ ಆಳವಾದ ಜ್ಞಾನದಿಂದ ಹೆಚ್ಚಿನ ಉಗ್ರರನ್ನು ಭಾರತಕ್ಕೆ ಕಳುಹಿಸಲು ಯಶಸ್ವಿಯಾಗಿದ್ದ. ಇದೇ ಕಾರಣಕ್ಕೆ ಆತ ಎಲ್ಲಾ ಉಗ್ರಗಾಮಿ ಗುಂಪುಗಳಿಗೂ ವಿಶೇಷ ವ್ಯಕ್ತಿಯಾಗಿದ್ದ. ಇದನ್ನೂ ಓದಿ: ಪಾಕ್‌ ಹುಟ್ಟಡಗಿಸಲು ಐಎಎಫ್‌ ಬಳಸಿದ್ದು 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರ: ವಾಯುಪಡೆಯ ಉಪಮುಖ್ಯಸ್ಥ ಮಾಹಿತಿ

ಬಾಗು ಖಾನ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದರೂ, ನಿಯಂತ್ರಣ ರೇಖೆಯುದ್ದಕ್ಕೂ ಇರುವ ಗುರೇಜ್ ಮತ್ತು ಅದರ ನೆರೆಯ ವಲಯಗಳಿಂದ ಉಗ್ರರ ಒಳನುಸುಳಿವಿಕೆ ಯಶಸ್ವಿಯಾಗಲು ಪ್ರತಿಯೊಂದು ಉಗ್ರ ಸಂಘಟನೆಗೂ ಸಹಾಯ ಮಾಡುತ್ತಿದ್ದ. ಬಾಗು ಖಾನ್ ಭಯೋತ್ಪಾದಕ ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೆ ಸಹ ಸಂಬಂಧ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 7 ವರ್ಷಗಳ ನಂತರ ಚೀನಾಗೆ ಪ್ರಧಾನಿ ಮೋದಿ ಭೇಟಿ

ಒಳನುಸುಳುವಿಕೆ ಪ್ರಯತ್ನದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರೆಜ್ ಸೆಕ್ಟರ್‌ನಲ್ಲಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ವೇಳೆ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿದಾಳಿಯಾಗಿ ಭದ್ರತಾ ಪಡೆ ಕೂಡ ಗುಂಡಿನ ದಾಳಿ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಚಿನಾರ್ ಕಾರ್ಪ್ಸ್ ಎಕ್ಸ್ನಲ್ಲಿ ತಿಳಿಸಿದೆ. ಬಾಗು ಖಾನ್ ಜೊತೆ ಹತ್ಯೆಯಾದ ಇನ್ನೊಬ್ಬ ಭಯೋತ್ಪಾದಕ ಕೂಡ ಪಾಕಿಸ್ತಾನಿ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ 85%ಗೆ ಏರಿಕೆ: ತೇಜಸ್ವಿ ಯಾದವ್

Share This Article