ಕಲ್ಲತ್ತಗಿರಿ | ಪ್ರವಾಸಿಗರ ಕಾರಿನ ಮೇಲೆ ಬಿದ್ದ ಬೃಹತ್ ಮರ – ತಪ್ಪಿದ ಅನಾಹುತ

Public TV
1 Min Read

ಚಿಕ್ಕಮಗಳೂರು: ಕಲ್ಲತ್ತಗಿರಿ ಫಾಲ್ಸ್‌ಗೆ (Kallatthagiri Falls) ಬಂದಿದ್ದ ಪ್ರವಾಸಿಗರ ಕಾರಿನ (Car) ಮೇಲೆ ಬೃಹತ್ ಮರವೊಂದು ಬಿದ್ದಿದ್ದು, ಕಾರು ಸಂಪೂರ್ಣ ಜಖಂ ಆಗಿದೆ.

ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಫಾಲ್ಸ್‌ಗೆ ಪ್ರವಾಸಿಗರು ಬಂದಿದ್ದರು. ಈ ವೇಳೆ, ಕಾರು ನಿಲ್ಲಿಸಿ ಫಾಲ್ಸ್ ನೋಡಲು ತೆರಳಿದ್ದಾಗ ಗಾಳಿ ಮಳೆಗೆ ಮರ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಇದನ್ನೂ ಓದಿ: ಮಲೆನಾಡಿನಲ್ಲಿ ಮಳೆಗೆ 4ನೇ ಬಲಿ – ಮರ ಬಿದ್ದು ವ್ಯಕ್ತಿ ಸಾವು

ಸ್ಥಳಕ್ಕೆ ಲಿಂಗದಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗಾಳಿ-ಮಳೆಗೆ ಧರೆಗುರುಳಿದ ಮರ; ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಬಂದ್

Share This Article