ಕ್ಯೂಆರ್ ಕೋಡ್‌ಗೆ ಭರ್ಜರಿ ರೆಸ್ಪಾನ್ಸ್ – ಬಿಎಂಟಿಸಿಗೆ ಒಂದು ದಿನಕ್ಕೆ 1 ಕೋಟಿ ರೂ. ಆದಾಯ

Public TV
1 Min Read

– 16 ದಿನಗಳಲ್ಲಿ 16 ಕೋಟಿ ರೂ. ಆದಾಯ

ಬೆಂಗಳೂರು: ಈಗೇನಿದ್ದರೂ ಡಿಜಿಟಲ್ ಜಮಾನ. ಅದರಂತೆ ಬಿಎಂಟಿಸಿ ಸಹ ಡಿಜಿಟಲ್ ಪೇಮೆಂಟ್ (Digital Payment) ಮೊರೆ ಹೋಗಿದ್ದು, ಬಿಎಂಟಿಸಿಯ ಆರು ಸಾವಿರ ಬಸ್‌ಗಳಲ್ಲೂ ಕ್ಯೂಆರ್ ಸಿಸ್ಟಮ್ ಮೂಲಕ ಟಿಕೆಟ್ ಪೇಮೆಂಟ್ ನೀಡುವ ವ್ಯವಸ್ಥೆ ಜಾರಿ ಮಾಡಿದೆ. ಈ ಕ್ಯೂಆರ್ ಕೋಡ್ (QR Code) ಸಿಸ್ಟಮ್‌ಗೆ ಬಿಎಂಟಿಸಿ (BMTC) ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಒಂದು ದಿನಕ್ಕೆ ಕ್ಯೂಆರ್ ಕೋಡ್ ಮೂಲಕ ಬಿಎಂಟಿಸಿಗೆ ಒಂದು ಕೋಟಿ ರೂ. ಆದಾಯ ಗಳಿಸುತ್ತಿದೆ. ಆನ್‌ಲೈನ್ ಕ್ಯೂಆರ್ ಕೋಡ್ ಮೂಲಕ ಬಿಎಂಟಿಸಿ ಫೆಬ್ರವರಿ 1-16ರವರೆಗೆ 16 ಕೋಟಿ ರೂ. ಆದಾಯ ಪಡೆದಿದೆ. ಕೋವಿಡ್ ನಂತರ 2021ರಿಂದ ಬಿಎಂಟಿಸಿ ಬಸ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ಜಾರಿ ಮಾಡಿದ್ದು, ವಾಯುವಜ್ರ ಹಾಗೂ ವಜ್ರ ಬಸ್‌ಗಳ ಪ್ರಯಾಣಿಕರು ಹೆಚ್ಚು ಡಿಜಿಟಲ್ ಪೇಮೆಂಟ್ ಬಳಸುತ್ತಿದ್ದಾರೆ. 2024ರಲ್ಲಿ ಕ್ಯೂಆರ್ ಕೋಡ್‌ನಿಂದ 100 ಕೋಟಿ ರೂ. ಆದಾಯ ಬಂದಿದೆ. ಇದನ್ನೂ ಓದಿ: ಸ್ಯಾಮ್‌ ಪಿತ್ರೋಡಾ ಮತ್ತೊಮ್ಮೆ ವಿವಾದ – ಬಿಜೆಪಿಯಿಂದ ಖಂಡನೆ.. ಅಂತರ ಕಾಯ್ದುಕೊಂಡ ಕಾಂಗ್ರೆಸ್

ಇತ್ತೀಚೆಗೆ ಜನವರಿ 5ರಿಂದ ಬಸ್ ದರ ಏರಿಕೆಯಾದಾಗಿನಿಂದ ಚಿಲ್ಲರೆ ಸಮಸ್ಯೆ ತಪ್ಪಿಸಲು ಹೆಚ್ಚು ಜನ ಡಿಜಿಟಲ್ ಪೇಮೆಂಟ್ ಗೆ ಮೊರೆ ಹೋಗಿದ್ದಾರೆ. ಇದ್ರಿಂದ ಕಂಡಕ್ಟರ್ & ಪ್ರಯಾಣಿಕರು ಇಬ್ಬರೂ ನಿರಾಳವಾಗಿದ್ದಾರೆ.ಕ್ಯೂ ಆರ್ ಕೋಡ್ ಮೂಲಕ ಬಿಎಂಟಿಸಿಯ ಒಟ್ಟು ಆದಾಯದಲ್ಲಿ ಶೇಕಡಾ 35% ಆದಾಯ ಬರುತ್ತಿದೆ ಅಂತಾ ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿ ವಿವಾದ ಮೈಮೇಲೆ ಎಳೆದುಕೊಂಡ ರಾಹುಲ್ ಗಾಂಧಿ

Share This Article