Kantara: Chapter 1ಗೆ ಭರ್ಜರಿ ರೆಸ್ಪಾನ್ಸ್ – ಮೊದಲ ದಿನವೇ 55 ಕೋಟಿ ಗಳಿಕೆ

Public TV
2 Min Read

– ಭಾರತದಲ್ಲಿ 45 ಕೋಟಿ, ವಿದೇಶಗಳಲ್ಲಿ 10 ಕೋಟಿ ಕಲೆಕ್ಷನ್

ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದ `ಕಾಂತಾರ ಚಾಪ್ಟರ್ 1′ (Kantara: Chapter 1) ಸಿನಿಮಾ ಅ.2ರಂದು ವಿಶ್ವಾದ್ಯಂತ ತೆರೆಕಂಡಿದೆ. ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಬಂದಿದ್ದು, 55 ಕೋಟಿ ರೂ.ಗೂ ಹೆಚ್ಚಿನ ಗಳಿಗೆ ಮಾಡಿದೆ. ಈ ಮೂಲಕ ದಾಖಲೆ ನಿರ್ಮಾಣವಾಗಿದೆ.

ಭಾರತದಲ್ಲಿ ಒಟ್ಟು 6,500 ಸ್ಟೀನ್‌ಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಂಡಿದ್ದು, ಎಲ್ಲಾ ಭಾಷೆಗಳೂ ಸೇರಿ ಭಾರತದಲ್ಲಿ ಅಂದಾಜು 45 ಕೋಟಿ ರೂ.ಗಳಷ್ಟು ಕಲೆಕ್ಷನ್ ಆಗಿದೆ. ರಿಲೀಸ್‌ಗೂ ಒಂದು ದಿನ ಮೊದಲೇ ಅಂದರೆ ಅ.1ರಂದು ದೇಶದ ವಿವಿಧೆಡೆ ಪ್ರೀಮಿಯರ್ ಶೋಗಳು ನಡೆದಿದ್ದು, ಈ ಶೋಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡಿದ್ದವು. ಇದರಿಂದ ಸಿನಿಮಾಗೆ ಉತ್ತಮ ಪ್ರಚಾರ ಸಿಕ್ಕಿದ್ದು, ಬಿಡುಗಡೆ ದಿನ ಉತ್ತಮ ಪ್ರದರ್ಶನ ಕಂಡಿದೆ. ಇನ್ನೂ ಅ.3 ರಾತ್ರಿ ಹೊತ್ತಿಗೆ ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಆಗುವ ನಿರೀಕ್ಷೆಯಿದೆ.ಇದನ್ನೂ ಓದಿ: ಕಾಂತಾರ ದೃಶ್ಯ ವೈಭೋಗ ಕಣ್ತುಂಬಿಕೊಂಡ ಪ್ರೇಕ್ಷಕರು ಹೇಳಿದ್ದೇನು?

ಇನ್ನೂ ಭಾರತದ ಹೊರತಾಗಿ ಅಮೆರಿಕ ಒಂದರಲ್ಲೇ ಅಂದಾಜು 4.20 ಕೋಟಿ ರೂ. ಗಳಿಕೆಯಾಗಿದೆ. ಒಟ್ಟು 30 ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, 10 ಕೋಟಿ ರೂ.ವರೆಗೂ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಈಗಾಗಲೇ 10 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದು, ಅ.2ರಂದು ಪ್ರತಿ ಗಂಟೆಗೆ 60,000 ಟಿಕೆಟ್ ಸೋಲ್ಡ್ ಆಗಿದೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಒಂದು ಟಿಕೆಟ್ ದರ 2,400 ರೂ.ಗೆ ಮಾರಾಟವಾಗಿದ್ದು, ಬೆಂಗಳೂರಿನಲ್ಲಿ ಗರಿಷ್ಠ 1,200 ರೂ. ಇತ್ತು. ಆಂಧ್ರ ಮತ್ತು ತೆಲಂಗಾಣದಲ್ಲಿ ಬಾಯ್ಕಾಟ್ ಬೆದರಿಕೆ ಇದ್ದರೂ ಕೂಡ ಸಿನಿಮಾ ಪ್ರದರ್ಶನ ಮೇಲೆ ಪರಿಣಾಮ ಬೀರಿಲ್ಲ, ಚೆನ್ನೈ, ಕೊಚ್ಚಿ, ಮುಂಬೈ ಸೇರಿ ಮಹಾನಗರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೂ ಉತ್ತರ ಭಾರತ ಒಂದರಲ್ಲೇ ಈ ಚಿತ್ರ ಅಂದಾಜು 8 ರಿಂದ 10 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಉಳಿದಂತೆ ಕರ್ನಾಟಕದಲ್ಲಿ ಅಂದಾಜು 20 ಕೋಟಿ ರೂ., ಆಂಧ್ರದಲ್ಲಿ ಅಂದಾಜು 5.3 ಕೋಟಿ ರೂ., ತಮಿಳುನಾಡಿನಲ್ಲಿ 3 ಕೋಟಿ ರೂ., ಮಲಯಾಳಂನಲ್ಲಿ ಸುಮಾರು 65 ಲಕ್ಷ ರೂ.ಗಳಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ.ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕ – ಅಪ್ಪಿಕೊಂಡು ಸಮಾಧಾನಪಡಿಸಿದ ರಿಷಬ್‌

 

Share This Article