ನವದೆಹಲಿ: ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್25 ಆಲ್ಟ್ರಾ, ಎಸ್24 ಆಲ್ಟ್ರಾ, ಎಸ್23 ಆಲ್ಟ್ರಾ ಸ್ಮಾರ್ಟ್‌ಫೋನಿನ (Smartphone) ಬೆಲೆ ಭಾರೀ ಕಡಿತವಾಗಿದೆ.
ಗೆಲಾಕ್ಸಿ ಎಸ್ 25 ಆಲ್ಟ್ರಾ (Samsung Galaxy S25 Ultra) 1,29,999 ರೂ. ದರದಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್ ಅಮೆಜಾನ್ ಇಂಡಿಯಾದಲ್ಲಿ ಹೆಚ್‌ಡಿಎಫ್‌ಸಿ ಕಾರ್ಡ್ ಮೂಲಕ 1,18,999 ರೂ.ಗೆ ಲಭ್ಯವಿದೆ. ಅಷ್ಟೇ ಅಲ್ಲದೇ ಹಳೆಯ ಫೋನ್ ನೀಡುವ ಮೂಲಕ ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್ 12 ಜಿಬಿ ರ‍್ಯಾಮ್, 256 ಜಿಬಿ ಆಂತರಿಕ ಮೆಮೊರಿ, ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಇದನ್ನೂ ಓದಿ: 25 ವರ್ಷದ ಬಳಿಕ ಪಾಕ್ ತೊರೆದ ಮೈಕ್ರೋಸಾಫ್ಟ್
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 24 ಆಲ್ಟ್ರಾ (8GB RAM + 256GB) ಫೋನ್ 1,29,999 ರೂ.ಗೆ ಬಿಡುಗಡೆಯಾಗಿತ್ತು. ಈಗ ಈ ಫೋನ್ ದರ 38% ಕಡಿಮೆಯಾಗಿದ್ದು 83,999 ರೂ.ಗೆ ಅಮೇಜಾನ್‌ನಲ್ಲಿ ಲಭ್ಯವಿದೆ. ಆಯ್ದ ಕ್ರೆಡಿಟ್ ಕಾರ್ಡ್‌ನಲ್ಲಿ 1,500 ರೂ. ಡಿಸ್ಕೌಂಟ್ ಇದೆ.
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 23 ಆಲ್ಟ್ರಾ (8GB RAM + 256GB ) ಫೋನ್ 1,24,999 ರೂ. ದರದಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್ 84,999 ರೂ.ಗೆ ಲಭ್ಯವಿದೆ.