ಬಾಂಗ್ಲಾದಲ್ಲಿ 2026ರ ಐಪಿಎಲ್‌ ಪ್ರಸಾರ ಬಂದ್‌ – RCB ಬ್ರ್ಯಾಂಡ್‌ಗೂ ಸಮವಿಲ್ಲ ಕ್ರಿಕೆಟ್‌ನ ಆದಾಯ!

2 Min Read

ಢಾಕಾ: ದುಬಾರಿ ಬೆಲೆಗೆ ಬಿಕರಿಯಾಗಿದ್ದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್‌ (Mustafizur Rahman) ಅವರನ್ನ ಐಪಿಎಲ್‌ನಿಂದ ಹೊರದಬ್ಬಿದ ಬಳಿಕ ಬಾಂಗ್ಲಾದೇಶ (Bangladesh) ಹೊಸ ಕ್ಯಾತೆ ಶುರು ಮಾಡಿದೆ. ತನ್ನ ದೇಶಾದ್ಯಂತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಪ್ರಸಾರ ನಿಷೇಧಿಸುವಂತೆ ಆದೇಶ ಹೊರಡಿಸಿದೆ.

ಅನಿರ್ದಿಷ್ಟಾವಧಿವರೆಗೆ ಐಪಿಎಲ್‌ ಪ್ರಸಾರ ನಿಷೇಧಿಸುವಂತೆ ಬಾಂಗ್ಲಾದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ಟಿವಿ ಚಾನೆಲ್‌ಗಳಿಗೆ ಸುತ್ತೋಲೆ ಹೊರಡಿಸಿದೆ. ಬಿಸಿಸಿಐ ನಿರ್ಧಾರದ ಹಿಂದೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ. ಮುಸ್ತಾಫಿಜುರ್‌ ರೆಹಮಾನ್‌ ಅವರನ್ನ ಐಪಿಎಲ್‌ನಿಂದ ಹೊರಗೆ ಕಳಿಸಿದ್ದು, ದೇಶದ ಜನರಿಗೆ ಅತೀವ ನೋವುಂಟು ಮಾಡಿದೆ. ಹೀಗಾಗಿ 2026 ರ ಮಾರ್ಚ್‌ 26 ರಿಂದ ಆರಂಭವಾಗಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಪ್ರಸಾರ ನಿಲ್ಲಿಸಲಾಗುತ್ತಿದೆ ಎಂಧು ಸಚಿವಾಲಯ ಹೇಳಿದೆ. ಇದನ್ನೂ ಓದಿ: IPL 2026 | ಬೆಂಗಳೂರಿನಿಂದ ಐಪಿಎಲ್‌ ಎತ್ತಂಗಡಿ..? – ಟ್ವಿಸ್ಟ್‌ ಕೊಟ್ಟ ಎಂಸಿಎ ಟ್ವೀಟ್‌!

ಮುಂದಿನ ಸೂಚನೆ ಬರುವವರೆಗೆ ಐಪಿಎಲ್‌ನ ಎಲ್ಲಾ ಪಂದ್ಯಗಳು ಹಾಗೂ ಕಾರ್ಯಕ್ರಮಗಳ ಪ್ರಸಾರ ನಿಲ್ಲಿಸುವಂತೆ ಸೂಚಿಸಲಾಗಿದೆ. ಬಿಸಿಸಿಐ ತನ್ನ ನಿರ್ಧಾರಕ್ಕೆ ಸೂಕ್ತ ಕಾರಣ ತಿಳಿಸಿಲ್ಲ. ಆದ್ರೆ ರೆಹಮಾನ್‌ ವಿಚಾರದಲ್ಲಿ ಕೈಗೊಂಡ ನಿರ್ಧಾರವು ಬಾಂಗ್ಲಾ ವಿರೋಧಿ ಭಾವನೆಗೆ ಪುಷ್ಠಿ ಕೊಟ್ಟಂತಾಗಿದೆ ಎಂದು ಅನ್ನೋದು ಬಾಂಗ್ಲಾದ ಆರೋಪ. ಇದನ್ನೂ ಓದಿ: IPL ನಿಂದ ಮುಸ್ತಾಫಿಜುರ್ ಔಟ್‌ – ವಿಶ್ವಕಪ್‌ ಆಡಲು ಭಾರತಕ್ಕೆ ಬರಲ್ಲ; ಪಾಕ್‌ ರೀತಿ ಕ್ಯಾತೆ ತೆಗೆದ ಬಾಂಗ್ಲಾ

RCB ಫ್ರಾಂಚೈಸಿಗೂ ಸಮವಿಲ್ಲದ ಆದಾಯ
ಬಾಂಗ್ಲಾದಲ್ಲಿ ಐಪಿಎಲ್‌ ಪ್ರಸಾರ ನಿಷೇಧಿಸಿರೋದ್ರಿಂದ ಆದಾಯದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಏಕೆಂದ್ರೆ ಬಾಂಗ್ಲಾದ‌ ಕ್ರಿಕೆಟ್‌ನ ವಾರ್ಷಿಕ ಆದಾಯ 423 ಕೋಟಿ ಇದ್ದರೆ, ಆರ್‌ಸಿಬಿ ಫ್ರಾಂಚೈಸಿಯ ಬ್ರ್ಯಾಂಡ್‌ವ್ಯಾಲ್ಯೂ 2,259 ಕೋಟಿ ರೂ. ಇದೆ. ಅಲ್ಲದೇ ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿರುವ ಐಪಿಎಲ್‌ನ‌ ಬ್ರ್ಯಾಂಡ್‌ ವ್ಯಾಲ್ಯೂ 2024 ರಿಂದ 76,100 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಹೀಗಾಗಿ ಐಪಿಎಲ್‌ ಪ್ರಸಾರ ನಿಷೇಧದಿಂದ ಫ್ರಾಂಚೈಸಿಗಳಿಗಾಗಲಿ, ಬಿಸಿಸಿಐ ಆದಾಯದ ಮೇಲಾಗಲಿ ಯಾವುದೇ ಪರಿಣಾಮ ಬೀರೋದಿಲ್ಲ.

ಟಿ20 ವಿಶ್ವಕಪ್‌ ಪಂದ್ಯ ಸ್ಥಳಾಂತರಕ್ಕೆ ಮನವಿ
ಇದಕ್ಕೂ ಒಂದು ದಿನ ಮುಂಚೆ, 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಪಂದ್ಯಗಳಿಗೆ ಸ್ಥಳ ಬದಲಾವಣೆ ಮಾಡುವಂತೆ ಕೋರಲು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಬಾಂಗ್ಲಾ ಕ್ರಿಕೆಟ್‌ ಮಂಡಳಿಗೆ ಸೂಚಿಸಿದೆ. ಭಾರತದಲ್ಲಿ ನಿಯೋಜನೆಗೊಂಡಿರುವ ತನ್ನ ದೇಶದ ಎಲ್ಲಾ ಲೀಗ್‌ ಪಂದ್ಯಗಳನ್ನ ಭಾರತದಿಂದ ಹೊರಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡುವಂತೆ ಹೇಳಿದೆ. ಇದನ್ನೂ ಓದಿ: 6,6,6,6,6,4 – ಒಂದೇ ಓವರ್‌ನಲ್ಲೇ 34 ರನ್‌ ಚಚ್ಚಿ ಶತಕ; ಪಾಂಡ್ಯ ಬೆಂಕಿ ಆಟಕ್ಕೆ ವಿದರ್ಭ ಸುಸ್ತು!

mustafizur rahman 3

ಈ ಕುರಿತು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್‌ ನಜ್ರುಲ್‌ (Asif Nazrul), ಈ ನಿರ್ಧಾರ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ದೃಢಪಡಿಸಿದ್ದಾರೆ. ಭಾರತದಲ್ಲಿ ನಿಗದಿಪಡಿಸಿರುವ ಬಾಂಗ್ಲಾದ ಎಲ್ಲಾ ಪಂದ್ಯಗಳನ್ನ ಶ್ರೀಲಂಕಾಗೆ (Sri Lanka) ಸ್ಥಳಾಂತರಿಸಲು ಐಸಿಸಿಗೆ ಮನವಿ ಮಾಡುವಂತೆ ಮಧ್ಯಂತರ ಸರ್ಕಾರ ನಿರ್ದೇಶನ ನೀಡಿದೆ. ಸರ್ಕಾರದ ಸೂಚನೆ ಬಳಿಕ ಶನಿವಾರವೇ ಬಾಂಗ್ಲಾ ಕ್ರಿಕೆಟ್‌ ಮಂಡಳಿ ತುರ್ತು ಸಭೆ ನಡೆಸಿದ್ದು, ಈ ವಿಷಯವನ್ನ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ದಾಖಲೆ ಬೆಲೆಗೆ ಬಿಕರಿಯಾಗಿದ್ದ ರೆಹಮಾನ್‌
2026ರ ಐಪಿಎಲ್‌ ಟೂರ್ನಿಗಾಗಿ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್‌ ಅವರನ್ನ ಕೆಕೆಆರ್‌ ಫ್ರಾಂಚೈಸಿಯು 9.20 ಕೋಟಿ ರೂ. ನೀಡಿ ಖರೀದಿಸಿತ್ತು. ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಾಂಗ್ಲಾ ಆಟಗಾರ ಎಂಬ ಹೆಗ್ಗಳಿಕೆಗೂ ಮುಸ್ತಾಫಿಜುರ್ ಪಾತ್ರವಾಗಿದ್ದರು. ಆದ್ರೆ ಶೇಖ್‌ ಹಸೀನಾ ಸರ್ಕಾರ ಪತನದ ಬಳಿಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಾಳಾಗಿದೆ. ಈಗ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಕಾರಣ ಬಾಂಗ್ಲಾದೇಶದ ಆಟಗಾರರು ಐಪಿಎಲ್‌ನಲ್ಲಿ (IPL) ಆಡಬಾರದು ಎಂಬ ಆಕ್ರೋಶ ಕ್ರಿಕೆಟ್‌ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಒತ್ತಡ ಜಾಸ್ತಿಯಾಗುತ್ತಿದ್ದಂತೆ ಬಿಸಿಸಿಐ ಮಧ್ಯಪ್ರವೇಶಿಸಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್‌ನಿಂದ ಕೈಬಿಡುವಂತೆ ಫ್ರಾಂಚೈಸಿಗೆ ಸೂಚಿಸಿತ್ತು.

Share This Article