ರಜನಿಕಾಂತ್ (Rajanikanth) ನಟನೆಯ ಕೂಲಿ (Coolie) ಸಿನಿಮಾಗೆ ದೇಶದಾದ್ಯಂತವಷ್ಟೇ ಅಲ್ಲದೇ ವಿದೇಶದಲ್ಲೂ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಹೈಪ್ ಕ್ರಿಯೇಟ್ ಮಾಡಿರೋ ಕೂಲಿ ಸಿನಿಮಾ ನಾರ್ತ್ ಅಮೆರಿಕಾದ (America) ಪ್ರೀಮಿಯರ್‌ಗೆ ಭರ್ಜರಿ ಹವಾ ಸೃಷ್ಟಿಸಿದೆ. ನಾರ್ತ್ ಅಮೆರಿಕಾದಲ್ಲಿ ಪ್ರೀಮಿಯರ್‌ಗೆ ಬುಕ್ಕಿಂಗ್ ಓಪನ್ ಆಗಿ ಕೆಲವೇ ಗಂಟೆಯಲ್ಲೇ 35 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿದೆ. ಈ ಮೂಲಕ ಹೊಸ ದಾಖಲೆಯತ್ತ ಸಾಗಿದೆ ಕೂಲಿ.
ಲೊಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬಂದ ವಿಜಯ್ ದಳಪತಿ ನಟನೆಯ ಲಿಯೋ ಸಿನಿಮಾ ಇದೇ ನಾರ್ತ್ ಅಮೆರಿಕಾದ ಪ್ರೀಮಿಯರ್‌ಗೆ 30 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿತ್ತು. ಇದೀಗ ಕೂಲಿ ಸಿನಿಮಾ, ವಿಜಯ್ ದಳಪತಿ ಸಿನಿಮಾಕ್ಕಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಆಗಷ್ಟ್ 13ರಂದು ನಡೆಯಲಿರುವ ಪ್ರೀಮಿಯರ್‌ಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗ್ತಿದೆ.
ಸೂಪರ್‌ಸ್ಟಾರ್ ರಜನಿಕಾಂತ್, ರಿಯಲ್‌ಸ್ಟಾರ್ ಉಪೇಂದ್ರ, ಅಮಿರ್ ಖಾನ್, ಸತ್ಯರಾಜ್, ಶೃತಿ ಹಾಸನ್, ರಚಿತಾ ರಾಮ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಪೂಜಾ ಹೆಗ್ಡೆ ಈ ಸಿನಿಮಾದ ಸ್ಪೆಷಲ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾಗೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಲೊಕೇಶ್ ಕನಗರಾಜ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷಗಳಿವೆ. ಆಗಷ್ಟ್ 14ರಂದು ತೆರೆಗೆ ಬರಲಿರುವ ಸಿನಿಮಾವನ್ನ ನೋಡಲು ಕಾದು ಕುಳಿತಿದ್ದಾರೆ ತಲೈವ ಫ್ಯಾನ್ಸ್.