ಮಂಡ್ಯ: ಶಾಸಕ ಅಂಬರೀಶ್ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದರೂ ಚುನಾವಣಾ ಪ್ರಚಾರದಲ್ಲಿ ಅವರನ್ನು ಬಳಸಿಕೊಳ್ಳಲು ಮಂಡ್ಯ ರಾಜಕಾರಣದಲ್ಲಿ ಎಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ.
ಈಗಾಗಲೇ ಚುನಾವಣೆಯಲ್ಲಿ ಅಂಬರೀಶ್ ಸಹಕಾರ ಕೇಳಲು ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಮುಂದಾಗಿದ್ದು, ಅದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಫೋನ್‍ನಲ್ಲಿ ಮಾತನಾಡಿ ಸಹಕಾರ ಕೇಳುವುದು ಸೌಜನ್ಯವಲ್ಲ. ಹೀಗಾಗಿ ಅಂಬರೀಶ್ ಅವರನ್ನು ನೇರವಾಗಿ ಭೇಟಿ ಮಾಡಿ ಸಹಕಾರ ಕೇಳುತ್ತೇನೆ ಎಂದು ಮಾಜಿ ಶಾಸಕ, ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಹೇಳಿದ್ದಾರೆ. ಇದನ್ನೂ ಓದಿ: ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ ಅಂಬಿ ಆಪ್ತ – ರಮ್ಯಾಗೆ ಎಂಪಿ ಟಿಕೆಟ್ ಸಿಕ್ಕ ಗುಟ್ಟು ಬಹಿರಂಗಗೊಳಿಸಿದ್ರು!
ಕಳೆದ ಬಾರಿ ಎಂ.ಶ್ರೀನಿವಾಸ್ ಅವರು ಅಂಬರೀಶ್ ವಿರುದ್ಧ ಸ್ಪರ್ಧಿಸಿ ಸುಮಾರು 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನುಭವಿಸಿದ್ರು. ಈಗ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿರುವ ಎಂ.ಶ್ರೀನಿವಾಸ್ ಈ ಬಾರಿ ಅಂಬರೀಶ್ ಅವರ ಸಹಕಾರ ಕೇಳಲು ಮುಂದಾಗಿದ್ದಾರೆ. ಅಂಬರೀಶ್ ಅವರು ಸೇರಿದಂತೆ ಎಲ್ಲರ ಸಹಕಾರ ಕೇಳುವುದು ಮುಖ್ಯವಾಗಿದೆ. ಸದ್ಯದಲ್ಲೇ ಅಂಬರೀಶ್ ಅವರ ಸಹಕಾರ ಕೇಳಲಾಗುವುದು ಅಂತ ಹೇಳಿದ್ದಾರೆ. ಇದನ್ನೂ ಓದಿ: ಪಾಪ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಅಂತ ಹಿಂದೆ ಸರಿದಿದ್ದಾರೆ- ಅಂಬಿಯನ್ನು ಹಾಡಿಹೊಗಳಿದ ಡಿಕೆಶಿ
ಆದ್ರೆ ಕಳೆದ ಬಾರಿ ತಮ್ಮ ಎದುರಾಳಿಯಾಗಿದ್ದ ಶ್ರೀನಿವಾಸ್‍ಗೆ ಅಂಬರೀಶ್ ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವ ಕುತೂಹಲ ಮಂಡ್ಯ ಕ್ಷೇತ್ರದಲ್ಲಿ ಮೂಡಿದೆ. ಇನ್ನು ನಾಳೆಯಿಂದ ಮಂಡ್ಯ ಕ್ಷೇತ್ರದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಆರಂಭಿಸಲಿರುವ ಎಂ.ಶ್ರೀನಿವಾಸ್ ಪರ ಪ್ರಚಾರ ಮಾಡಲು, ಸ್ವತಃ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಆಗಮಿಸಲಿದ್ದು, ಮಂಡ್ಯ ಕ್ಷೇತ್ರ ಕುತೂಹಲದ ಕಣವಾಗಿ ಮಾರ್ಪಟ್ಟಿದೆ. ಇದನ್ನೂ ಓದಿ: ಅಂಬರೀಶ್ ಅವರನ್ನು ನಾನು ನಂಬಿದ್ದೆ, ಆದ್ರೂ ಟಿಕೆಟ್ ತಪ್ತು: ಭಾವುಕರಾದ ಅಮರಾವತಿ ಚಂದ್ರಶೇಖರ್