ನಂದಿನಿ ತುಪ್ಪಕ್ಕೆ ಭಾರೀ ಬೇಡಿಕೆ – ಹೆಚ್ಚುವರಿ 1 ಸಾವಿರ ಮೆಟ್ರಿಕ್ ಟನ್ ತುಪ್ಪಕ್ಕೆ ಟಿಟಿಡಿ ಆರ್ಡರ್

2 Min Read

– ಪ್ರತಿನಿತ್ಯ 3-3.5 ಟನ್ ಕೆಜಿ ತುಪ್ಪ ಸಪ್ಲೈ
– ತಿರುಮಲಕ್ಕೆ ಲಾಕ್ ಸಿಸ್ಟಮ್‌ನಲ್ಲಿ ತುಪ್ಪ ರವಾನೆ

ಬೆಂಗಳೂರು: ಶನಿವಾರವಷ್ಟೇ ಬೆಂಗಳೂರಲ್ಲಿ (Bengaluru) ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವನ್ನು ಪೋಲಿಸರು ಹೆಡೆಮುರಿ ಕಟ್ಟಿದ್ದಾರೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲ ತಿರುಪತಿಯಲ್ಲೂ ನಕಲಿ ತುಪ್ಪದ ವಾಸನೆ ಬಂದಿತ್ತು. ನಕಲಿ ತುಪ್ಪಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಟಿಟಿಡಿ ನಂದಿನಿ (Nandini Ghee) ಖರೀದಿಗೆ ಮುಂದಾಗಿತ್ತು. ಇದೀಗ ಮತ್ತೆ ಟಿಟಿಡಿಯಿಂದ (TTD) ನಂದಿನಿ ತುಪ್ಪಕ್ಕೆ ಭಾರೀ ಬೇಡಿಕೆ ಬಂದಿದೆ.

ನಮ್ಮ ರಾಜ್ಯದ ರೈತರ ಬೆನ್ನೆಲುಬು ನಮ್ಮ ಕೆಎಂಎಫ್‌ನ ನಂದಿನಿ ಬ್ರ‍್ಯಾಂಡ್. ರಾಷ್ಟ್ರ ಮಟ್ಟದಲ್ಲಿ ನಂದಿನಿ ಹಾಲು ಫೇಮಸ್ ಆಗಿದೆ. ನಂದಿನಿ ಹಾಲಿನಂತೆ ನಮ್ಮ ನಂದಿನಿ ತುಪ್ಪ ಸಹ ಪ್ರಸಿದ್ಧವಾಗಿದೆ. ಆಂಧ್ರದ ತಿರುಪತಿಯಲ್ಲಿ ನಕಲಿ ತುಪ್ಪದ ಹಾವಳಿ ಬೆಳಕಿಗೆ ಬಂದ ನಂತರ 2024 ಆಗಸ್ಟ್ನಿಂದ ಟಿಟಿಡಿಯವರು ನಮ್ಮ ನಂದಿನಿ ತುಪ್ಪವನ್ನು ತಿರುಪತಿ ಲಾಡು ತಯಾರಿಕೆಗೆ ಬಳಸುತ್ತಿದ್ದಾರೆ. ಇದೀಗ ನಂದಿನಿ ತುಪ್ಪಕ್ಕೆ ಭಾರೀ ಬೇಡಿಕೆ ಬಂದಿದ್ದು, ಹಿಂದಿಗಿಂತ ಒಂದು ಸಾವಿರ ಮೆಟ್ರಿಕ್ ಟನ್ ತುಪ್ಪಕ್ಕೆ ಹೆಚ್ಚುವರಿಯಾಗಿ ಕೇಳಿದೆ. ಅದ್ರಂತೆ ನಮ್ಮ ಕೆಎಂಎಫ್‌ನಿಂದ ಪ್ರತಿನಿತ್ಯ 3 ರಿಂದ 3.5 ಟನ್ ತುಪ್ಪ, ತಿಂಗಳಿಗೆ ಸುಮಾರು 300 ಟನ್‌ನಷ್ಟು ತುಪ್ಪ ತಿರುಮಲಕ್ಕೆ ಸಪ್ಲೈ ಮಾಡುತ್ತಿದೆ. ಇದನ್ನೂ ಓದಿ: ಬೆಂಗಳೂರಿಗೆ ಕಾಲಿಟ್ಟಿದ್ದಾಳೆ ನಕಲಿ ನಂದಿನಿ – 1.5 ಕೋಟಿ ಮೌಲ್ಯದ 8 ಸಾವಿರ ಲೀಟರ್ ತುಪ್ಪ ಸೀಜ್

ಇನ್ನೂ ಪ್ರತಿನಿತ್ಯ ಟಿಟಿಡಿ ಸಿಬ್ಬಂದಿ, ಕೆಎಂಎಫ್ ನಂದಿನಿ ತುಪ್ಪ ಉತ್ಪಾದನಾ ಘಟಕಗಳಿಗೆ ಸ್ವತಃ ತೆರಳಿ, ವಾಹನವನ್ನು ಲಾಕ್ ಮಾಡಿಕೊಂಡು ತೆಗೆದುಕೊಂಡು ಹೋಗುತ್ತಾರೆ. ತಿರುಪತಿ ತಲುಪಿದ ನಂತರವೇ ಲಾಕ್ ಓಪನ್ ಮಾಡಲಾಗುತ್ತದೆ. ಜಿಪಿಎಸ್ ಸಿಸ್ಟಮ್ ಸಹ ಅಳವಡಿಕೆ ಮಾಡಿದ್ದು, ಬಿಗಿ ಭದ್ರತೆಯಲ್ಲಿ ತುಪ್ಪ ಹೋಗುತ್ತಿದೆ. ಹೀಗಾಗಿ ಟಿಟಿಡಿ ನಂದಿನಿ ತುಪ್ಪವನ್ನೇ ಪದೇ ಪದೇ ಕೇಳುತ್ತಿದೆ. ಒಟ್ಟಿನಲ್ಲಿ ನಮ್ಮ ನಂದಿನಿ ತುಪ್ಪ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗುತ್ತಿದ್ದು, ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಇದನ್ನೂ ಓದಿ: ಬಿಹಾರ ಸೋಲಿನ ಬೆನ್ನಲ್ಲೇ ರಾಜಕೀಯಕ್ಕೆ ಲಾಲು ಪುತ್ರಿ ಗುಡ್‌ಬೈ – ಕುಟುಂಬದ ಜೊತೆಯೂ ಸಂಬಂಧ ಕಡಿದುಕೊಳ್ಳುತ್ತಿದ್ದೇನೆ ಎಂದ ರೋಹಿಣಿ

Share This Article