ವಲಸೆ ವಿರೋಧಿಸಿ 1 ಲಕ್ಷಕ್ಕೂ ಅಧಿಕ ಜನರಿಂದ ಲಂಡನ್​ನಲ್ಲಿ ಮೆರವಣಿಗೆ – ಪ್ರತಿಭಟನೆ ಪೊಲೀಸರ ಮೇಲೆ ಹಲ್ಲೆ

Public TV
2 Min Read

– ಪೊಲೀಸರ ಮೇಲೆ ಹಲ್ಲೆ; 20ಕ್ಕೂ ಹೆಚ್ಚು ಪೊಲೀಸರಿಗೆ ಗಂಭೀರ ಗಾಯ
– ಹಿಂಸಾಚಾರ ನಡೆಸಲೆಂದೇ ಕೆಲವರು ಹೊಂಚುಹಾಕಿದ್ದರು

ಲಂಡನ್‌: ಯುನೈಟೆಡ್ ಕಿಂಗ್‌ಡಮ್ ಇತಿಹಾಸದಲ್ಲೇ ಅತಿದೊಡ್ಡ ಬಲಪಂಥೀಯ (ರೈಟ್-ವಿಂಗ್) ಪ್ರತಿಭಟನೆಗೆ ಶನಿವಾರ ಲಂಡನ್‌ ಸಾಕ್ಷಿಯಾಯಿತು. ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ (Tommy Robinson) ನೇತೃತ್ವದಲ್ಲಿ ನಡೆದ ಬೃಹತ್‌ ʻವಲಸೆ ವಿರೋಧಿʼ ಮೆರವಣಿಗೆಯಲ್ಲಿ ಸುಮಾರು 1,00,000ಕ್ಕೂ ಹೆಚ್ಚು ಪ್ರತಿಭಟನಾಕಾರರು (Protester) ಭಾಗವಹಿಸಿದ್ದರು. ಈ ವೇಳೆ ಹಲವಾರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಪ್ರತಿಭಟನಾಕಾರರನ್ನು ಚದುರಿಸುತ್ತಿದ್ದ ವೇಳೆ ಸಣ್ಣ ಗುಂಪೊಂದು ಪೊಲೀಸ್‌ ಅಧಿಕಾರಿಗಳೊಂದಿಗೆ ಘರ್ಷಣೆಗೆ ಇಳಿದಿದೆ. ಈ ವೇಳೆ ರ‍್ಯಾಲಿಯ ಅಂಚಿನಲ್ಲಿದ್ದ ಕೆಲವರು ಖಾಲಿ ಬಾಟಲಿಗಳನ್ನು ಪೊಲೀಸರ (London Cops) ಮೇಲೆ ಎಸೆದಿದ್ದಾರೆ. ಇದರಿಂದ ಕರ್ತವ್ಯದಲ್ಲಿದ್ದ 1,000ಕ್ಕೂ ಹೆಚ್ಚು ಪೊಲೀಸರ ಪೈಕಿ 26 ಮಂದಿ ಗಾಯಗೊಂಡಿದ್ದಾರೆ. ಕೆಲವರಿಗೆ ಹಲ್ಲು ಮುರಿದಿದೆ, ಮೂಗು ಗಾಯವಾಗಿದೆ ಇನ್ನೂ ಕೆಲವರಿಗೆ ಬೆನ್ನು ಮೂಳೆಯಲ್ಲಿ ಸಮಸ್ಯೆಯಾಗಿರುವುದು ಕಂಡುಬಂದಿದೆ. ಪ್ರತಿಭಟನೆ ವೇಳೆ ಹಿಂಸಾತ್ಮಕ ಕೃತ್ಯಕ್ಕೆ ಮುಂದಾದ ಕನಿಷ್ಠ 25 ಜನರನ್ನ ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾ ಮೇಲೆ 50-100% ಸುಂಕ ವಿಧಿಸಲು ಟ್ರಂಪ್‌ ಕರೆ

ಈ ಪ್ರತಿಭಟನೆಯನ್ನು ಫಾರ್-ರೈಟ್ ಅಕ್ಟಿವಿಸ್ಟ್ ಟಾಮಿ ರಾಬಿನ್ಸನ್ (ಸ್ಟೀಫನ್ ಯ್ಯಾಕ್ಷಿ-ಲೆನ್ನನ್) ನೇತೃತ್ವದಲ್ಲಿ ಯುನೈಟ್ ದಿ ಕಿಂಗ್‌ಡಮ್ ಎಂಬ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಇಂಗ್ಲಿಷ್ ಡಿಫೆನ್ಸ್ ಲೀಗ್‌ ಸಂಸ್ಥಾಪಕನಾದ ರಾಬಿನ್ಸನ್‌, ಬ್ರಿಟನ್‌ನ ಪ್ರಭಾವಶಾಲಿ ಬಲಪಂಥೀಯ ನಾಯಕರಲ್ಲಿ ಒಬ್ಬರು. ಪ್ರತಿಭಟನಾಕಾರರು ಇಂಗ್ಲೆಂಡ್ (England) ಮತ್ತು ಬ್ರಿಟನ್ ಧ್ವಜಗಳನ್ನ ಹಿಡಿದು, ವೆಸ್ಟ್‌ಮಿನ್‌ಸ್ಟರ್‌ ಕಡೆಗೆ ಮೆರವಣಿಗೆ ಹೊರಟಿದ್ದರು. ಇದೇ ವೇಳೆ ರಾಬಿನ್ಸನ್ ಪ್ರತಿಭಟನೆಗೆ ಪ್ರತಿಯಾಗಿ ಸ್ಟ್ಯಾಂಡ್ ಅಪ್ ಟು ರೇಸಿಸಂ ಗುಂಪು ನೇತೃತ್ವದಲ್ಲಿ 5,000 ಮಂದಿ ಪ್ರತಿಭಟನೆ ನಡೆಸಿದರು. ʻಮಾರ್ಚ್ ಅಗೈನ್‌ಸ್ಟ್ ಫ್ಯಾಸಿಸಂʼ ಎಂಬ ಹೆಸರಿನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಜಾರಾ ಸುಲ್ತಾನಾ ಮತ್ತು ಡಯಾನ್‌ ಅಬ್‌ಬಟ್‌ನಂತಹ ಸಂಸದರು ಕೂಡ ಭಾಗವಹಿಸಿದರು. ಈ ಎರಡು ಗುಂಪುಗಳ ನಡುವಿನ ಘರ್ಷಣೆ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ: ರಷ್ಯಾದ ತೈಲ ಖರೀದಿ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು G7 ದೇಶಗಳಿಗೆ ಅಮೆರಿಕ ಕರೆ

ಹಿಂಸಾಚಾರಕ್ಕೆಂದೇ ಹೊಂಚು ಹಾಕಿದ್ದ ಗುಂಪು
ಇನ್ನೂ ವಲಸೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನ ಹೊರತುಪಡಿಸಿ, ಹಿಂಸಾಚಾರವನ್ನೇ ಗುರಿಯಾಗಿಸಕೊಂಡು ಕೆಲವರು ಬಂದಿದ್ದರು. ಅವರು ಪೊಲೀಸರ ಮೇಲೆ ಹಲ್ಲೆಗೆ ಮುಂದಾದರು. ಪೊಲೀಸರೊಂದಿಗೆ ಗುದ್ದಾಟವನ್ನೂ ನಡೆಸಿದ್ರು ಎಂದು ಸಹಾಯಕ ಆಯುಕ್ತ ಮ್ಯಾಟ್ ಟ್ವಿಸ್ಟ್ ಹೇಳಿದರು.

ಪ್ರತಿಭಟನೆಗೆ ಕಾರಣ ಏನು?
ಬ್ರಿಟನ್‌ನ ಗಡಿಗಳನ್ನು ಬಲಪಡಿಸುವುದು ಮತ್ತು ಅಕ್ರಮ ವಲಸೆ ನಿಲ್ಲಿಸಬೇಕೆಂಬುದು ಯುನೈಟ್ ದಿ ಕಿಂಗ್‌ಡಮ್ ಪ್ರತಿಭಟನೆಗೆ ಮುಖ್ಯ ಕಾರಣ. ಇದನ್ನೂ ಓದಿ: 50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು: ಟ್ರಂಪ್‌

Share This Article