ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡ ‘ಹುಡುಗರು’ ಚಿತ್ರದ ನಟಿ ಅಭಿನಯ

Public TV
1 Min Read

ನ್ನಡದ ‘ಹುಡುಗರು’ (Hudugaru Film) ಸಿನಿಮಾದಲ್ಲಿ ನಟಿಸಿದ್ದ ವಿಶೇಷ ಚೇತನ ನಟಿ ಅಭಿನಯ (Abhinaya) ಕೊನೆಗೂ ಎಂಗೇಜ್‌ಮೆಂಟ್ ಫೋಟೋವನ್ನು ರಿವೀಲ್ ಮಾಡಿದ್ದಾರೆ. ತಾವು ಮದುವೆಯಾಗುತ್ತಿರುವ ಹುಡುಗ ಯಾರು ಎಂಬುದನ್ನು ಫ್ಯಾನ್ಸ್‌ಗೆ ಪರಿಚಯಿಸಿದ್ದಾರೆ.ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಲಂಚ್ ಡೇಟ್- ಮತ್ತೆ ಡೇಟಿಂಗ್‌ ಬಗ್ಗೆ ಶುರುವಾಯ್ತು ಚರ್ಚೆ

ಅಭಿನಯ ತಮ್ಮ ಭಾವಿ ಪತಿಯ ಫೋಟೋವನ್ನು ಇನ್ಸ್ಟಾಗ್ರಾಂ ಶೇರ್ ಮಾಡಿಕೊಂಡಿದ್ದಾರೆ. ಅಭಿನಯ ಭಾವಿ ಪತಿಯ ಹೆಸರು ವೆಗೆಶನಾ ಕಾರ್ತಿಕ್. ಕಾರ್ತಿಕ್  (Vegesana Karthik) ಅವರ ಹಿನ್ನೆಲೆ ಏನು ಎಂಬುದರ ಬಗ್ಗೆ ರಿವೀಲ್ ಆಗಿಲ್ಲ. ಮಾರ್ಚ್ 9ರಂದು ಎಂಗೇಜ್ ಆದ ಈ ಜೋಡಿ, ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ. ಕಾರ್ತಿಕ್ ಅವರ ಜೊತೆ ಅಭಿನಯ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಸ್ಟಾರ್ ನಟ-ನಟಿಯರು, ಅಭಿಮಾನಿಗಳು ಅಭಿನಯಗೆ ಶುಭ ಕೋರಿದ್ದಾರೆ. ಇದನ್ನೂ ಓದಿ: ಸೆಟ್ಟೇರಿತು ಚಿರಂಜೀವಿ 157ನೇ ಸಿನಿಮಾ- ಕ್ಲಾಪ್ ಮಾಡಿ ಶುಭ ಹಾರೈಸಿದ ವಿಕ್ಟರಿ ವೆಂಕಟೇಶ್

 

View this post on Instagram

 

A post shared by M.g Abhinaya (@abhinaya_official)

ಅಭಿನಯಗೆ ಮಾತು ಬಾರದೇ ಇದ್ದರೂ, ಕಿವಿ ಕೇಳದೇ ಇದ್ದರೂ ಇವರ ನಟನೆಗೆ ಮನಸೋಲದ ಅಭಿಮಾನಿಗಳೇ ಇಲ್ಲ. ತೆಲುಗು, ತಮಿಳು, ಕನ್ನಡದಲ್ಲಿ ಅವರು ಸಕ್ರಿಯರಾಗಿದ್ದಾರೆ. ಸದ್ಯ ನಯನತಾರಾ ನಟನೆಯ ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲಿ ಅಭಿನಯ ನಟಿಸುತ್ತಿದ್ದಾರೆ.

Share This Article