ಶಾಕಿಂಗ್ ಲುಕ್‌ನಲ್ಲಿ ಎಂಟ್ರಿ ಕೊಟ್ರು ‘ಹುಚ್ಚ’ ನಾಯಕಿ- ಅಷ್ಟಕ್ಕೂ ರೇಖಾಗೆ ಏನಾಯ್ತು?

Public TV
1 Min Read

ಕಿಚ್ಚ ಸುದೀಪ್ (Kichcha Sudeep) ಜೊತೆ ‘ಹುಚ್ಚ’ (Huchcha Film) ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್ (Rekha Vedavyas) ಇದ್ದಕ್ಕಿಂತೆಯೇ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಮುಖ ನಿಜಕ್ಕೂ ಬೆಚ್ಚಿಸುವಂತಿದೆ. ಕಾರಣ ಕಣ್ಣು ಬತ್ತಿವೆ ಕೆನ್ನೆ ಬಾಡಿದೆ. ಅನಾರೋಗ್ಯದ ನೆರಳು ಹೊಯ್ದಾಡಿದೆ. ಏನಾಯಿತು ರೇಖಾಗೆ ? ಅದ್ಯಾವ ಸತ್ಯ ಬಿಚ್ಚಿಟ್ಟರು ರೇಖಾ?

ರೇಖಾ ಈ ಹೆಸರನ್ನು ಕನ್ನಡಿಗರು ಮರೆಯಲು ಸಾಧ್ಯ ಇಲ್ಲ. ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನದ ತುಂಟಾಟ ಚಿತ್ರಕ್ಕೆ ಇವರೇ ನಾಯಕಿ. ಅದು ಹಿಟ್. ಚಿತ್ರಾ ಚಿತ್ರದಲ್ಲಿ ಬಂಪರ್ ಜಾಕ್‌ಪಾಟ್ ಹೊಡೆದರು. ಅದಕ್ಕಿಂತ ಹೆಚ್ಚಾಗಿ ಸುದೀಪ್ (Sudeep) ಜೊತೆ ‘ಹುಚ್ಚ’ದಲ್ಲಿ ನಟಿಸಿದ್ದು ಎಲ್ಲರನ್ನೂ ಕಾಡಿತು. ಅವರ ಚೆಲುವು ಹಾಗೂ ಅಭಿನಯ ನೆನಪಲ್ಲಿ ಇಟ್ಟುಕೊಳ್ಳುವಂತಾಯಿತು. ಆದರೆ ಅದೇ ಸುಂದರಿ ಸುಮಾರು 10 ವರ್ಷದ ನಂತರ ತೆಲುಗು ರಿಯಾಲಿಟಿ ಶೋದಲ್ಲಿ ಕಾಣಿಸಿದ್ದು ಬೆಚ್ಚಿ ಬೀಳಿಸಿದೆ.

ಅಷ್ಟೊಂದು ಮುದ್ದು ಮುದ್ದು ಮುಖ, ಹೊಳೆಯುತ್ತಿದ್ದ ಕಣ್ಣು ಮಿನುಗುತ್ತಿದ್ದ ಕೆನ್ನೆ ಎಲ್ಲಿ ಹೋದವು? ಈ ರೇಖಾ ಆ ರೇಖಾಳಾಗಿ ಉಳಿದಿಲ್ಲ ಅನ್ನೋದು ಮೊದಲ ನೋಟಕ್ಕೆ ಗೊತ್ತಾಯಿತು. ಹತ್ತು ವರ್ಷದ ಹಿಂದೆ ಬಣ್ಣದ ಲೋಕದಿಂದ ದೂರವಾದರು. ಈಗ ಹೀಗೆ ಕಾಣಿಸಿದ್ದಾರೆ. ಇವರ ಬದುಕಿನಲ್ಲಿ ಏನಾಯಿತು? ಅದು ಈ ಕಾರ್ಯಕ್ರಮ ಪ್ರಸಾರವಾದ ನಂತರ ಗೊತ್ತಾಗುತ್ತದೆ. ಏನಾದರೂ ಕನ್ನಡದ ಈ ಹುಡುಗಿ ಮತ್ತೆ ನಳನಳಿಸಲಿ ಅಲ್ಲವೆ? ಇದನ್ನೂ ಓದಿ:ಟಾಪ್‌ಲೆಸ್ ವಿಡಿಯೋ ಹಂಚಿಕೊಂಡ ಮಾಜಿ ‌’ಬಿಗ್ ಬಾಸ್’ ಸ್ಪರ್ಧಿ

ಗುಂಡು ಗುಂಡಾಗಿದ್ದ ರೇಖಾರನ್ನ (Rekha) ನೋಡಿದ್ದ ಫ್ಯಾನ್ಸ್ ಈಗ ಸಣ್ಣಗೇ ಆಗಿರೋದನ್ನ ನೋಡಿ ಶಾಕ್ ಆಗಿದ್ದಾರೆ. ಶೋ ಪ್ರೋಮೋ ಸಖತ್ ವೈರಲ್ ಆಗುತ್ತಿದೆ. ಅಸಲಿಗೆ ರೇಖಾಗೆ ಏನಾಗಿದೆ ಎಂದು ತಿಳಿಯಬೇಕಾದ್ರೆ ಈ ಶೋ ನೋಡಲೇಬೇಕಿದೆ. ಈ ವಾರಾಂತ್ಯ ಭಾನುವಾರ (ಸೆ.17) ಪ್ರಸಾರವಾಗಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್