ಹುಬ್ಬಳ್ಳಿ: ಪ್ರತಿ ಬಾರಿಯೂ ಗಣೇಶೋತ್ಸವದ (Ganesh Chaturthi) ವೇಳೆ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದ ಈದ್ಗಾ ಗ್ರೌಂಡ್ (Eidgah Ground) ಅನ್ನು ರಾಣಿ ಚೆನ್ನಮ್ಮ ಮೈದಾನವೆಂದು (Rani Chennamma Ground) ಮಹಾನಗರ ಪಾಲಿಕೆಯ ಉಪಮೇಯರ್ ಸಂತೋಷ ಚೌಹ್ವಾಣ್ ಅಧಿಕೃತವಾಗಿ ಘೋಷಣೆ ಮಾಡಿದರು.
ಈ ಬಾರಿಯ ಗಣೇಶೋತ್ಸವವು ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ನಡೆಯಿತು. ಈ ಗಣೇಶೋತ್ಸವದ ಕಾರ್ಯಕ್ರಮದಲ್ಲಿಯೇ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನೂ ಓದಿ: ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್ ಪ್ರಮುಖ ಪಾಲುದಾರ: ಮೋದಿ ಬಣ್ಣನೆ
ಈ ಬಗ್ಗೆ ಮಹಾನಗರ ಪಾಲಿಕೆಯು ಠರಾವು ಪಾಸ್ ಮಾಡಿದೆ. ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನವೆಂದು ಮರುನಾಮಕರಣ ಮಾಡಿರುವುದು ಹಿಂದೂಪರ ಸಂಘಟನೆಗಳ ಹಾಗೂ ಗಜಾನನ ಉತ್ಸವ ಸಮಿತಿಯವರಲ್ಲಿ ಸಂತಸ ತಂದಿದೆ. ಇದನ್ನೂ ಓದಿ: ಹೆಣ್ಣುಮಕ್ಕಳು ಎಂತಹ ಹೋರಾಟಕ್ಕೂ ತಯಾರಿದ್ದಾರೆ, ಆದ್ರೆ ಅಗತ್ಯವಿಲ್ಲ – ಡಿ.ವೀರೇಂದ್ರ ಹೆಗ್ಗಡೆ
ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಗಣೇಶೋತ್ಸವವು ವಿಸರ್ಜನೆಯ ಮೂಲಕ ಸಂಪನ್ನಗೊಂಡಿದೆ. ವಿವಾದದಲ್ಲೇ ಅಂತ್ಯಗೊಳ್ಳುತ್ತಿದ್ದ ಹುಬ್ಬಳ್ಳಿ ಈದ್ಗಾ ಮೈದಾನ ಗಣೇಶೋತ್ಸವ ಈ ಬಾರಿ ಅತ್ಯಂತ ಶಾಂತಿಪ್ರಿಯವಾಗಿ ನಡೆದಿದೆ.
ಈ ಬಾರಿ ಮುಖ್ಯ ಅತಿಥಿಯಾಗಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಸಕ ಮಹೇಶ್ ಟೆಂಗಿನಕಾಯಿ, ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಾಸ್ಕರ್ ಸೇರಿದಂತೆ ಹಲವರು ಪ್ರತಾಪ್ ಸಿಂಹಗೆ ಸಾಥ್ ನೀಡಿದರು.