3 ವರ್ಷಗಳಿಂದ ನಡೀತಿಲ್ಲ ಘಟಿಕೋತ್ಸವ- ಕಾನೂನು ಪದವೀಧರರಿಂದ ಆಕ್ರೋಶ

Public TV
1 Min Read

ಹುಬ್ಬಳ್ಳಿ: ವಿಶ್ವ ವಿದ್ಯಾಲಯಗಳಲ್ಲಿ ಪ್ರತಿ ವರ್ಷ ಘಟಿಕೋತ್ಸವ ಆಚರಿಸಲಾಗುತ್ತದೆ. ಆದರೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿಶ್ವವಿದ್ಯಾಲಯದಲ್ಲಿ ಮಾತ್ರ ಕಳೆದ ಮೂರು ವರ್ಷಗಳಿಂದ ಘಟಿಕೋತ್ಸವ ನಡೆಯದಿರುವುದು ಕಾನೂನು ಪದವೀಧರರ ಆಕ್ರೋಶಕ್ಕೆ ಗುರಿಯಾಗಿದೆ.

ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿಶ್ವವಿದ್ಯಾಲಯ ಕಳೆದ ಮೂರು ವರ್ಷಗಳಿಂದ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಪಟ್ಟಿ ಪ್ರಕಟಗೊಳಿಸಿಲ್ಲ. ರ‍್ಯಾಂಕ್ ವಿದ್ಯಾರ್ಥಿ ಎನ್ನುವ ಅಂಶವನ್ನು ಪ್ರಕಟಸದಿರುವುದು ಪದವೀಧರರ ಅಸಮಾಧಾನಕ್ಕೆ ಕಾರಣವಾಗಿದೆ.

ರ‍್ಯಾಂಕ್ ಪಡೆದು ಘಟಿಕೋತ್ಸವದಲ್ಲಿ ಚಿನ್ನದ ಪದಕವನ್ನ ಕೊರಳಿಗೆ ಹಾಕಿಕೊಳ್ಳಬೇಕು ಅನ್ನೋದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಆದರೆ ಘಟಿಕೋತ್ಸವ ಆಯೋಜನೆ, ರ‍್ಯಾಂಕ್ ಪಟ್ಟಿ ಪ್ರಕಟಿಸಲು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿಯ ಅನುಮೋದನೆ ಸಿಕ್ಕಿಲ್ಲ. ಸಿಂಡಿಕೇಟ್ ಸದಸ್ಯರಿದ್ದಾಗ ಶೈಕ್ಷಣಿಕ ಮಂಡಳಿಗೆ ಸದಸ್ಯರಿಲ್ಲ ಪರಿಣಾಮ ಘಟಿಕೋತ್ಸವ ಆಯೋಜನೆ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

2014ರಲ್ಲೊ ಶೈಕ್ಷಣಿಕ ಮಂಡಳಿ ನೇಮಕವಾಗಿತ್ತು. ಅದರ ಅವಧಿ ಮುಗಿದರು ಇದೂವರೆಗೂ ಮಂಡಳಿಗೆ ನೂತನ ಸದಸ್ಯರ ನೇಮಕವಾಗಿಲ್ಲ. ಹೀಗಾಗಿ ಸಿಂಡಿಕೇಟ್ ಸದಸ್ಯ ಮಂಡಳಿ ಸಹ ಘಟಿಕೋತ್ಸವ ಆಯೋಜನೆ ಮಾಡಲು ಸಾಧ್ಯವಾಗಿಲ್ಲ.

ಕಾನುನು ಪದವೀಧರರು ಅರ್ಜಿ ಶುಲ್ಕ ತುಂಬಿ ಪದವಿ ಪ್ರಮಾಣ ಪತ್ರ ಪಡೆಯಬಹುದಾಗಿದ್ದರು. ಘಟಿಕೋತ್ಸವ ನಡೆಯದಿರುವುದು ವಿದ್ಯಾರ್ಥಿಗಳ ಸಂಭ್ರಮಕ್ಕೆ ಹಿನ್ನಡೆಯುಂಟು ಮಾಡಿದೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಕಾನೂನು ಪದವೀಧರರು ಘಟಿಕೋತ್ಸವ ಇಲ್ಲದೇ ಪದವಿ ಪ್ರಮಾಣ ಪತ್ರ ಪಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ಈ ವರ್ಷವಾದರೂ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಕಾನೂನು ವಿಶ್ವ ವಿದ್ಯಾಲಯಕ್ಕೆ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರ ನೇಮಕ ಮಾಡಿ ಘಟಿಕೋತ್ಸವ ಆಯೋಜನೆ ಮಾಡಲಿ ಅಂತ ಕಾನೂನು ಪದವೀಧರರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *