ರೀಲ್ಸ್‌ ರಾಜನಿಗೆ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಪೊಲೀಸ್‌ – ನಿಮಗೂ ಈ ಅನುಭವ ಆಗಿರಬೇಕಲ್ವಾ?

By
3 Min Read

ಹುಬ್ಬಳ್ಳಿ/ಧಾರವಾಡ: ಸೋಷಿಯಲ್‌ ಮೀಡಿಯಾದಲ್ಲೀಗ (Social Media) ರೀಲ್ಸ್‌ ಹವಾ ಜಾಸ್ತಿಯಾಗಿದೆ. ಯುವಕ-ಯುವತಿಯರು ಟ್ರೆಂಡ್‌ ಸೃಷ್ಟಿಸಲು ಹೊಸ ಹೊಸ ಮಾರ್ಗ ಹುಡುಕುತ್ತಲೇ ಇರ್ತಾರೆ. ಬಹುಶಃ ಇದು ನಿಮ್ಮ ಗಮನಕ್ಕೂ ಬಂದಿರಬಹುದು. ನೀವು ಬಸ್ಸಿನಲ್ಲಿ ಕೂತಿರುತ್ತೀರಿ… ನಿಮ್ಮ ಹಿಂದಿನ ಸೀಟಿನಲ್ಲೊ ಪಕ್ಕದ ಸೀಟಿನಲ್ಲೊ ಯಾರೋ ಒಬ್ಬ ತನ್ನ ಮೊಬೈಲ್ ಫೋನ್‌ನಲ್ಲಿ ಜೋರು ದನಿ ಇಟ್ಟುಕೊಂಡು ತುಣುಕು ಹಾಡೊ, ಕುಹಕ ನಗುವೊ, ವಿಚಿತ್ರ ಮಾತುಗಳನ್ನೂ ಕೇಳ್ತಿರ್ತಾನೆ. ಅದನ್ನ ಕೇಳಿಸಿಕೊಳ್ಳಲು ನಿಮಗೆ ಹಿಂಸೆಯೆನಿಸಬಹುದು. ಮನಸ್ಸಿಗೆ ಕಿರಿಕಿರಿ ಆಗಬಹುದು. ‘ಆಫ್ ಮಾಡಿ’ ಅಂತ ಜೋರು ಮಾಡುತ್ತೀರಿ… ಬೆಳಿಗ್ಗೆ ಕೆಲಸಕ್ಕೆ ಹೊರಟವರಿಗಂತೂ ಆ ದಿನ ದಿನಪೂರ್ತಿ ನಿರುತ್ಸಾಹ.

ಈ ಹುಚ್ಚು ರೀಲ್ಸ್‌ ಕಾಟದಿಂದ ಇತ್ತೀಚೆಗೆ ಒಂದೆರಡು ಕ್ಷಣ ನಾವು ನಮ್ಮಷ್ಟಕ್ಕೆ ಕೂರಲು ಸಾಧ್ಯವಾಗುತ್ತಿಲ್ಲ. ಜೋರು ದನಿಯ ಹಿಂಸೆ, ತರಲೆ ಆಟಕ್ಕೆ ಬೇಸತ್ತು ಅವರೊಂದಿಗೆ ಜಗಳ ಮಾಡಲಾಗದೇ, ಅತ್ತ ಅದನ್ನು ಕೇಳಿಸಿಕೊಳ್ಳಲಾಗದೇ ಅಸಹನೆಯಿಂದ ಒದ್ದಾಡುವಂತಹ ಸ್ಥಿತಿ. ನಾವು ಕೇಳುವ ಹಾಡಿನ ತುಣುಕು, ಜೋಕು, ಹರಟೆ… ಇವೆಲ್ಲ ನಮ್ಮ ಖಾಸಗಿ ಸಂಗತಿಗಳು. ಅವು ನಮಗೆ ಮಾತ್ರ ಬೇಕಾದಂತಹವು, ಇಡೀ ಲೋಕಕ್ಕೆ ಅಲ್ಲ. ಅವು ನಮಗೆ ಮಾತ್ರ ಕೇಳಿಸಿದರೆ ಸಾಕು. ಆ ಹಾಡನ್ನೋ ಹರಟೆಯನ್ನೋ ಪಕ್ಕದವರು ಏಕೆ ಕೇಳಿಸಿಕೊಳ್ಳಬೇಕು? ಅದರಿಂದ ಅವರಿಗೆ ಕಿರಿಕಿರಿಯಾದ್ರೆ ಅವರು ನಮ್ಮ ಬಗ್ಗೆ ಏನಂದುಕೊಳ್ತಾರೊ? ಇಂತಹ ಸಣ್ಣಪುಟ್ಟ ಸೂಕ್ಷ್ಮಗಳನ್ನೂ ರೂಢಿಸಿಕೊಳ್ಳದಿದ್ದರೆ ಹೇಗೆ? ಇತ್ತೀಚೆಗಂತೂ ಇದು ಅತಿಯಾಗುತ್ತಿದೆ. ಹೀಗೆ ರೀಲ್ಸ್‌ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡ್ತಿದ್ದ ಹುಬ್ಬಳ್ಳಿ ಯುವಕನೊಬ್ಬನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಅಣ್ಣ ಶ್ರೀಮಂತ ಆಗ್ಬಿಟ್ಟ ಅಂತ ತಮ್ಮ ಮಾಡಿದ್ದೆಂತ ನೀಚ ಕೆಲ್ಸ ಗೊತ್ತಾ? – ಹಂತಕ ಸಿಕ್ಕಿಬಿದ್ದಿದ್ದೇ ರೋಚಕ!

ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಟಪಾನ್ಗುಚ್ಚಿ ಡಾನ್ಸ್‌ ಮಾಡ್ತಾ ಸಾರ್ವಜನಿಕರಿಗೆ ತೊಂದ್ರೆ ಕೊಡ್ತಿದ್ದ ಯುವಕನೊಬ್ಬನಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ. ಬಳಿಕ ಎಚ್ಚೆತ್ತ ಯುವಕನಿಗೆ ತಪ್ಪಿನ ಅರಿವಾಗಿದ್ದು, ಕ್ಷಮೆ ಕೇಳಿದ್ದಾನೆ. ಇದನ್ನೂ ಓದಿ: ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

ಹುಬ್ಬಳ್ಳಿ ದುರ್ಗದ ಬೈಲು ಮೂಲದ ನವೀನ್‌ ಉಪ್ಪಾರ್‌ ಇನ್ಮುಂದೆ ರೀಲ್ಸ್‌ ಮಾಡಲ್ಲ ಅಂತ ಹೇಳಿದ್ದಾನೆ. ನಾನು ಸಾರ್ವಜನಿಕ ಸ್ಥಳಗಳಲ್ಲಿ ಅಸಹ್ಯಕರ, ಫನ್ನಿ ಡಾನ್ಸ್‌ ಮಾಡಿ ತೊಂದ್ರೆ ಕೊಡ್ತಿದ್ದೆ. ನಮ್ಮ ಹುಬ್ಬಳ್ಳಿ ಟೌನ್‌ ಪೊಲೀಸರು ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿದ್ರು. ಇನ್ಮುಂದೆ ನಾನು ಈ ರೀತಿ ನೃತ್ಯ ಮಾಡಲ್ಲ. ನೀವೂ ಮಾಡಬೇಡಿ ಅಂತ ಮನವಿ ಮಾಡಿಕೊಂಡಿದ್ದಾನೆ. ಈ ವಿಡಿಯೋವನ್ನ ಹುಬ್ಬಳ್ಳಿ ನಗರ ಪೊಲೀಸರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನೀವು ಮಾಡುವ ಮನೋರಂಜನೆಗಳು ಸಾರ್ವಜನಿಕರಿಗೆ ಕಿರಿಕಿರಿ/ತೊಂದರೆ ಉಂಟುಮಾಡದಿರಲಿ ಎಂದು ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಅಂಗದ ಮೇಲೆ ಕಾದ ಕಬ್ಬಿಣದಿಂದ ಬರೆ ಹಾಕಿ ಚಿತ್ರಹಿಂಸೆ – ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

ಇದು ಕೇವಲ ಹುಬ್ಬಳ್ಳಿಯ ಮಾರುಕಟ್ಟೆಯೊಂದರ ಸಮಸ್ಯೆಯಲ್ಲ. ಬಸ್ಸುಗಳಲ್ಲೂ ಈ ಬಗ್ಗೆ ಸೂಚನಾಫಲಕ ಹಾಕಿದರೂ ಅದನ್ನು ಪಾಲಿಸುವುದಿಲ್ಲ. ಕೆಲವೊಮ್ಮೆ ಬಸ್ ಕಂಡಕ್ಟರ್ ಕೂಡ ಜೋರಾಗಿ ರೀಲ್ಸ್ ನೋಡುತ್ತಾ ಕೂತಿರುವುದುಂಟು. ಗರಿಗರಿ ದಿರಿಸು ಧರಿಸಿ ಸುಶಿಕ್ಷಿತರಂತೆ, ಸಭ್ಯರಂತೆ ಕಾಣುವವರು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ರೀಲ್ಸ್ ನೋಡುತ್ತಾ ಮೈಮರೆತಿರುತ್ತಾರೆ. ಯಾವ ಸಂದರ್ಭದಲ್ಲಿ, ಯಾವ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಅರಿತು, ಅದರಂತೆ ವರ್ತಿಸುವುದು ನಾಗರಿಕತೆಯ ಮೊದಲ ಪಾಠ. ಅದನ್ನು ಎಲ್ಲರೂ ಕಲಿಯಬೇಕಿದೆ.

Share This Article