ಬಿಹಾರ ಮೂಲದ ಸೈಕೋ ಎನ್‌ಕೌಂಟರ್: ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹೊಡೆದಿದ್ದಾರೆ – ಪರಮೇಶ್ವರ್

Public TV
1 Min Read

– ಹೊರ ರಾಜ್ಯದವರಿಗೆ ರಾಜ್ಯದಲ್ಲಿ ಕಾನೂನಿನ ಭಯ ಇಲ್ಲ ಎಂದ ಸಚಿವ

ಬೆಂಗಳೂರು: ಬಿಹಾರ (Bihar) ಮೂಲದ ವ್ಯಕ್ತಿ ಐದು ವರ್ಷದ ಮಗುವನ್ನ ಎತ್ತಿಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಆತನನ್ನ ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾನೆ. ಪೊಲೀಸರು ಅವರ ಆತ್ಮ ರಕ್ಷಣೆ ಮಾಡಿಕೊಳ್ಳಬೇಕು ಅಲ್ಲವಾ ಅಂತಾ ಗೃಹ ಸಚಿವ ಪರಮೇಶ್ವರ್ (G Parameshwar) ಎನ್ ಕೌಂಟರ್ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಆತ್ಮರಕ್ಷಣೆಗಾಗಿ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ, ಅದು ಬೆನ್ನಿಗೆ ಬಿದ್ದಿದೆ. ‌ಆತನನ್ನ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದ್ರೆ ಆತ ಆಸ್ಪತ್ರೆಗೆ ಹೋಗುವಾಗಲೇ ತೀರಿಕೊಂಡಿದ್ದಾನೆ ಎಂದು ರಿಪೋರ್ಟ್ ಇದೆ ಅಂತೇಳಿದ್ರು. ನಾನು ತಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ತನಿಖೆ ಮಾಡಿದ ನಂತರದಲ್ಲಿ ಸತ್ಯಾಂಶ ಗೊತ್ತಾಗುತ್ತದೆ ಅಂತಾ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಹುಬ್ಬಳ್ಳಿ | ಬಾಲಕಿ ಕೊಲೆ ಕೇಸ್ – ಆರೋಪಿಗೆ ಗುಂಡಿಟ್ಟ `ಲೇಡಿ ಸಿಂಗಂ’ಗೆ ಮುಂದಿನ ತಿಂಗಳಲ್ಲೇ ಮದುವೆ!

ಇನ್ನು ಹೊರ ರಾಜ್ಯದವರಿಗೆ ರಾಜ್ಯದಲ್ಲಿ ಕಾನೂನಿನ ಭಯ ಇಲ್ಲ ಎಂಬ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಹೊರ ರಾಜ್ಯದಿಂದ ಸಾಕಷ್ಟು ಜನ ಬೆಂಗಳೂರಿಗೆ ಬರುತ್ತಾರೆ. ಬಂದಂತವರಿಗೆ ಇಲ್ಲಿನ ಸಂಸ್ಕೃತಿ ಜನರ ಭಾವನೆ ಅರ್ಥ ಆಗುವುದಿಲ್ಲವೋ ಗೊತ್ತಿಲ್ಲ. ಅವರು ಆ ರೀತಿ ವರ್ತನೆ ಮಾಡುತ್ತಾರೆ. ಹೊರ ರಾಜ್ಯದಿಂದ ಬಂದವರದ್ದೇ ಹೆಚ್ಚು ಪ್ರಕರಣಗಳನ್ನು ನೋಡುತ್ತಿದ್ದೇವೆ. ಸುಮಾರು ಕಡೆ ಕಟ್ಟಡ ಕಾರ್ಮಿಕರಿಂದ ಕ್ರೈಮ್ ಗಳು ಆಗಿದ್ದಾವೆ. ಇದರ ಬಗ್ಗೆ ಕ್ರಮಕ್ಕೆ ಕಾರ್ಮಿಕ ಇಲಾಖೆ ಮತ್ತು ನಾವು ಜಂಟಿಯಾಗಿ ಸಭೆ ಮಾಡುತ್ತೇವೆ ಅಂತೇಳಿದ್ರು.  ಇದನ್ನೂ ಓದಿ: ಹೊರ ರಾಜ್ಯದ ಕಟ್ಟಡ ಕಾರ್ಮಿಕರಿಂದ ಕ್ರೈಮ್ – ಕಾರ್ಮಿಕ ಇಲಾಖೆ ಜೊತೆ ಸಭೆ ನಡೆಸಿ ಕ್ರಮ: ಪರಮೇಶ್ವರ್‌

Share This Article