– ಹುಬ್ಬಳ್ಳಿ ಲವ್ ಜಿಹಾದ್ ಕೇಸ್ – ಅಜ್ಞಾತ ಸ್ಥಳದಿಂದ ಸಂತ್ರಸ್ತೆ ವಿಡಿಯೋ ರಿಲೀಸ್
ಹುಬ್ಬಳ್ಳಿ: ಇಲ್ಲಿನ ಲವ್ ಜಿಹಾದ್ ಪ್ರಕರಣಕ್ಕೆ (Hubballi Love Jihad Case) ಸ್ಫೋಟಕ ತಿರುವು ಸಿಕ್ಕಿದೆ. ಅಜ್ಞಾತ ಸ್ಥಳದಿಂದ ಸಂತ್ರಸ್ತ ಯುವತಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು, ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಈಗ ʻಪಬ್ಲಿಕ್ ಟಿವಿʼಗೆ (PUBLiC TV) ಲಭ್ಯವಾಗಿದೆ.
ಜಿಮ್ ಟ್ರೈನರ್ (Gym Trainer) ಸಮೀರ್ ವಿರುದ್ಧ ರೇಪ್ ಆರೋಪ ಮಾಡಿರುವ ಸಂತ್ರಸ್ತೆ ಸಮೀರ್ ಅತ್ಯಾಚಾರದ ಬಗ್ಗೆ ಎಳೆಎಳೆಯಾಗಿ ಬಿಟ್ಟಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಗಲಾಟೆ – ಜಿಮ್ ಟ್ರೈನರ್ ವಿರುದ್ಧ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ವಿಡಿಯೋನಲ್ಲಿ ಸಂತ್ರಸ್ತೆ ಹೇಳಿರುವುದೇನು?
ಸಮೀರ್ ಅಕ್ಕ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆ ಆಕೆಯಿಂದ ಸಮೀರ್ ಪರಿಚಯವಾಗಿತ್ತು. ತೈಸೀಮ್ ಜೊತೆಗೆ ಸ್ನೇಹಿತೆಯಾಗಿ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಬರ್ತ್ ಡೇ ಪಾರ್ಟಿ, ವಿಕೇಂಡ್ ಪಾರ್ಟಿಗೆ ಹೋಗಿದ್ದೆವು. ಸಮೀರ್ ಸಹ ಅಲ್ಲಿಗೆ ಬಂದಿದ್ದ, ಇದಾದ ಮೇಲೆ ಸಮೀರ್ ಆತ್ಮೀಯನಾದ. ಒಂದು ದಿನ ಸಮೀರ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆಗ ನನಗೆ ಮತ್ತು ಜ್ಯೂಸ್‌ನಲ್ಲಿ ಬರುವ ಔಷಧ ಬೆರಸಿ ಕೊಟ್ಟು ನನ್ನ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡಿದ್ದ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ ಸಂತ್ರಸ್ತೆ.
ಸಮೀರ್ ವಿಡಿಯೋ ಮಾಡಿದ್ದು ನನಗೆ ಗೊತ್ತಿರಲಿಲ್ಲ, ವಿಡಿಯೋ ತೋರಿಸಿದ ಮೇಲೆ ನನಗೆ ಗೊತ್ತಾಯಿತು. ಆ ಮೇಲೆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ನನಗೆ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ. ಇದನ್ನೂ ಓದಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೊರಟಿದ್ದ ಮಹಿಳೆ ನಾಪತ್ತೆ
ಜಿಮ್ ಟ್ರೈನರ್ ವಿರುದ್ಧ ಘೋಷಣೆ, ಆಕ್ರೋಶ
ಲವ್ ಜಿಹಾದ್ ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ 2 ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಒಂದೆಡೆ ಯುವಕನನ್ನ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಯುವಕನ ಕುಟುಂಬಸ್ಥರು ಯುವತಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಹುಬ್ಬಳ್ಳಿ ನಗರದ ವಿಕಾಸ ನಗರದಲ್ಲಿರೋ ಯುವತಿ ಮನೆ ಬಳಿ ಗಲಾಟೆ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಎರಡು ಕಡೆಯವರು ಕಿಮ್ಸ್‌ಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಮ್‌ಗಳು ಲವ್ ಜಿಹಾದ್ ಕೇಂದ್ರಗಳಾಗ್ತಿವೆ. ಜಿಮ್‌ಗೆ ಹೋಗುವ ಹಿಂದೂ ಹುಡುಗಿಯರನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮತ್ತೊಂದೆಡೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಜಿಮ್ ಟ್ರೈನರ್ ಸಮೀರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯ್ತು. ಸ್ಥಳಕ್ಕೆ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿ ಹಿಂದೂ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಿದ್ರು. ಮಾತುಕತೆಗೆ ಜಗ್ಗದ ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಯುವತಿ ಜೊತೆಗೆ ಇರುವ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡಿ ಬ್ಲಾಕ್ ಮೇಲ್ ಮಾಡಲಾಗ್ತಿದೆ ಎಂದು ಯುವತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.


