ಹುಬ್ಬಳ್ಳಿ: ಹವಾಲಾ ಮತ್ತು ಕ್ಯಾಸಿನೋ ಕಿಂಗ್ ಪಿನ್ ಸಮುಂದರ್ ಸಿಂಗ್ (Samundar Singh) ಅವರ ಹುಬ್ಬಳ್ಳಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ (ED Raid) ನಡೆಸಿದ್ದಾರೆ. ಅಧಿಕಾರಿಗಳು ಎಷ್ಟೇ ಮನವಿ ಮಾಡಿದ್ರೂ ಕುಟುಂಬಸ್ಥರು ಬಾಗಿಲು ತೆರೆಯಲಿಲ್ಲ. ಈ ವೇಳೆ ಬಾಗಿಲು ಒಡೆದು ಮನೆ ಒಳಗೆ ಅಧಿಕಾರಿಗಳು ನುಗ್ಗಿದ್ದಾರೆ.
ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿನ ಕಾಮಾಕ್ಷಿ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯ 401, 402 ಸಮುಂದರ್ ಸಿಂಗ್ ಹಾಗೂ ಅವರ ಸಹೋದರನ ಫ್ಲಾಟ್ ಮೇಲೆ ಈ ದಾಳಿ ನಡೆದಿದೆ. ಮೂಲತಃ ರಾಜಸ್ಥಾನ ಮೂಲದ ಸಮುಂದರ್ ಸಿಂಗ್, ಗೋವಾದಲ್ಲಿ ಮೆಜೆಸ್ಟಿಕ್ ಫ್ರೈಡ್ ಕ್ಯಾಸಿನೋ, ಕೋಟ್ಯಂತರ ರೂಪಾಯಿ ಗೇಮ್ ಆಫ್ ಹಾಗೂ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದಾರೆ. ಇದರ ಜೊತೆಗೆ ಶ್ರೀಲಂಕಾ, ದುಬೈನಲ್ಲಿ ಕ್ಯಾಸಿನೊ ಉದ್ಯಮ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಜಯಪುರ | 27 ರೌಡಿಶೀಟರ್‌ಗಳ ಗಡಿಪಾರಿಗೆ ಜಿಲ್ಲಾ ಪೊಲೀಸ್ ಸಜ್ಜು
ಇತ್ತೀಚಿಗೆ ನೂರಾರು ಕೋಟಿ ಖರ್ಚು ಮಾಡಿ ಬಹಳಷ್ಟು ಅದ್ದೂರಿಯಾಗಿ ರಾಜಾಸ್ಥಾನದಲ್ಲಿ ಪುತ್ರನ ವಿವಾಹ ಮಾಡಿದ್ದರು. ಈ ಮದುವೆ ಬಹಳಷ್ಟು ಅದ್ದೂರಿಯಾಗಿ ನಡೆದಿತ್ತು. ಬಾಲಿವುಡ್ ನಟ-ನಟಿಯರು ಭಾಗಿಯಾಗಿದ್ದರು. ಇನ್ನೂ ಮದುವೆಗೆ ಹೋಗುವ ಅತಿಥಿಗಳಿಗೆ ವಿಶೇಷ ಹೆಲಿಕಾಪ್ಟರ್ ಮೂಲಕ ಕರೆತರಲಾಗಿತ್ತು ಎನ್ನಲಾಗಿದೆ. ಇದರ ಅನುಮಾನ ಬೆನ್ನಲ್ಲೇ ಈ ದಾಳಿ ನಡೆದಿದೆ ಎನ್ನಲಾಗಿದೆ.
ಇಡಿ ಭಯದಿಂದ ಬಾತ್ ರೂಮ್‌ನಲ್ಲಿ ಅಡಗಿ ಕುಳಿತ್ತಿದ್ದ ಎನ್ನಲಾಗಿದೆ. ದಾಳಿಯಲ್ಲಿ ಮೂವರು ಇಡಿ ಅಧಿಕಾರಿಗಳು ಹಾಗೂ 4 ಜನ ಸಿಆರ್‌ಪಿಎಫ್ ಅಧಿಕಾರಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ- ಸಂಚಾರಕ್ಕೆ ಕಂಪ್ಲಿ ಸೇತುವೆ ಮುಕ್ತ