ಹೆಚ್‌ಎಸ್‌ಆರ್ ಲೇಔಟ್ ಲೈಂಗಿಕ ದೌರ್ಜನ್ಯ ಕೇಸ್‌ – ಸಂತ್ರಸ್ತ ಯುವತಿ ವಿರುದ್ಧವೇ ಎಫ್‌ಐಆರ್‌

Public TV
1 Min Read

ಬೆಂಗಳೂರು: ಹೆಚ್‌ಎಸ್‌ಆರ್ ಲೇಔಟ್ (HSR Layout) ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ (Sexual Assault Case) ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಈಗ ಸಂತ್ರಸ್ತ ಯುವತಿ ವಿರುದ್ಧವೇ ಎಫ್‌ಐಆರ್‌ (FIR) ದಾಖಲಾಗಿದೆ.

ಆಟೋ ಡ್ರೈವರ್ ನೀಡಿದ ದೂರಿನ ಮೇಲೆ ಅಜಾಗರೂಕ ಚಾಲನೆ ಆರೋಪದ ಅಡಿ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಟ್ಟಾಗಿದ್ದರೂ ನಿಗದಿತ ತೂಕ ಹೊಂದಿರಬೇಕು, ತೂಕದ ಮಾಪಕದಲ್ಲಿ ದೋಷವಿಲ್ಲ: ಫೋಗಟ್‌ ಅನರ್ಹತೆಗೆ ಕಾರಣ ನೀಡಿದ CAS

 

ಘಟನಾ ದಿನಕ್ಕೂ ಮುನ್ನ ಆ.17 ರಾತ್ರಿ ಸ್ನೇಹಿತರ ಜೊತೆ ಯುವತಿ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದಳು. ಪಾರ್ಟಿ ಮುಗಿಸಿ ಗೆಳೆಯನ ಜೊತೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ತಾನೇ ಕಾರು ಚಾಲನೆ ಮಾಡಿದ್ದಾಳೆ.

ಟಾನಿಕ್ ಬಳಿಯ ಮಂಗಳ ಜಂಕ್ಷನ್ ಬಳಿ 2 ಆಟೋ, 1 ಬೈಕ್‌ಗೆ ಡಿಕ್ಕಿ ಹೊಡೆದಿದ್ದಾಳೆ. ಜಖಂಗೊಳಿಸಿದ ಬಳಿಕ ಕಾರನ್ನು ನಿಲ್ಲಿಸದೇ ಹೋಗಿದ್ದಾಳೆ. ನಂತರ ರಿಕ್ಷಾ ಚಾಲಕರು ಕಾರನ್ನು ಫಾಲೋ ಮಾಡಿ ನಿಲ್ಲಿಸಿ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಯುವತಿ ರಿಕ್ಷಾ ಚಾಲಕರ ಜೊತೆ ಜಗಳ ಮಾಡಿದ್ದಾಳೆ. ಇದನ್ನೂ ಓದಿ: ನನ್ನ ಅಳಿಯನನ್ನು ಗಲ್ಲಿಗೆ ಹಾಕಿ, ಬೇಕಾದದ್ದು ಮಾಡಿ – ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಆರೋಪಿಯ ಅತ್ತೆಯ ಆಕ್ರೋಶ

ಆಗ ಸ್ಥಳಕ್ಕೆ ಆಡುಗೋಡಿ ಠಾಣೆಯ ಹೊಯ್ಸಳ ವಾಹನ ಬಂದಿದೆ. ಪೊಲೀಸರು ಬರುತ್ತಿದ್ದಂತೆ ಅಲ್ಲಿಂದ ಯುವತಿಯನ್ನ ಸ್ನೇಹಿತ ಕಳುಹಿಸಿದ್ದ. ಮುಂದೆ ಹೋದ ಯುವತಿ ಬೈಕ್ ನಲ್ಲಿ ಡ್ರಾಪ್‌ ತೆಗೆದುಕೊಂಡಿದ್ದಳು. ಈ ವೇಳೆ ಅಪರಿಚಿತ ವ್ಯಕ್ತಿ ಮುಕೇಶ್ವರನ್‌ನಿಂದ ಯುವತಿ ಡ್ರಾಪ್‌ ಕೇಳಿದಾಗ ಲೈಂಗಿಕ ದೌರ್ಜನ್ಯ ನಡೆದಿದೆ.

Share This Article