ರಕ್ತದಾನ ಮಾಡಿದ ಹೃತಿಕ್ ರೋಷನ್

By
2 Min Read

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ನಗರದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ.

ಹೃತಿಕ್ ರೋಷನ್ ಅವರ ರಕ್ತದ ಗುಂಪು ಬಿ-ನೆಗೆಟಿವ್ ಬಹಳ ಅಪರೂಪವಾಗಿದ್ದು, ವೈದ್ಯಕೀಯ ಕೇಂದ್ರಗಳು ಆಗಾಗ್ಗೆ ಅದರ ಕೊರತೆಯನ್ನು ಎದುರಿಸುತ್ತಿರುತ್ತವೆ. ಅವರು ಮಾಡುತ್ತಿರುವ ರಕ್ತದಾನ ಆಸ್ಪತ್ರೆಯ ಕೆಲ ರೋಗಿಗಳಿಗೆ ಸಹಾಯವಾಗಲೆಂದು ಹೃತಿಕ್ ರಕ್ತದಾನ ಮಾಡಲು ನಿರ್ಧರಿಸಿದ್ದರು.

 

View this post on Instagram

 

A post shared by Hrithik Roshan (@hrithikroshan)

ಹೃತಿಕ್ ಅವರು ಆಸ್ಪತ್ರೆಯಲ್ಲಿ, ವೈದ್ಯರೊಂದಿಗೆ ರಕ್ತದಾನ ಮಾಡುತ್ತಿರುವ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ರಕ್ತದ ಗುಂಪು ಬಿ-ನೆಗೆಟಿವ್ ಅಪರೂಪದ ಗುಂಪಾಗಿದೆ. ಆಸ್ಪತ್ರೆಗಳು ಆಗಾಗ್ಗೆ ಅದರ ಕೊರತೆಯನ್ನು ಅನುಭವಿಸುತ್ತವೆ. ಬಿ-ನೆಗಟಿವ್ ರಕ್ತದ ಗುಂಪು ಇರುವ ಹೆಚ್ಚಿನ ಜನರಿಗೆ ರಕ್ತದಾನ ಮಾಡಲು ಬ್ಲಡ್ ಬ್ಯಾಂಕಗಳು ಅನುಮತಿ ನೀಡುವುದಿಲ್ಲ.

ಆದರೆ ನನಗೆ ಅನುಮತಿಸಿದ್ದಕ್ಕಾಗಿ ಕೋಕಿಲಾಬೆನ್ ಆಸ್ಪತ್ರೆಗೆ ಧನ್ಯವಾದಗಳು. ಡಾ. ರಾಜೇಶ್ ಸಾವಂತ್, ಡಾ. ರಯೀಸ್ ಅಹ್ಮದ್ ಮತ್ತು ಡಾ. ಪ್ರದ್ನ್ಯಾ ಅವರ ವೃತ್ತಿಪರತೆಗೆ ಧನ್ಯವಾದಗಳು. ರಕ್ತದಾನ ಮಾಡುವುದು ದಾನಿಗಳ ಆರೋಗ್ಯಕ್ಕೆ ಒಳ್ಳೆಯದು ಅಂತ ನಿಮಗೆ ತಿಳಿದಿದೆಯೇ? ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಲು ಖಡಕ್ ಸುತ್ತೋಲೆ

Hrithik Roshan

ಹೃತಿಕ್ ಸುಸಾನೆ ಖಾನ್ ಜೊತೆಗಿನ ವಿಚ್ಛೇದನದ ಬಳಿಕ ಹೃತಿಕ್ ರೋಷನ್ ಹೆಸರು ಯಾರೊಂದಿಗೂ ತಳುಕು ಹಾಕಿಕೊಂಡಿರಲಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೃತಿಕ್ ರೋಷನ್ ಹೊಸ ಗರ್ಲ್ ಫ್ರೆಂಡ್ ವಿಚಾರವಾಗಿ ಸಖತ್ ವೈರಲ್ ಆಗಿದ್ದಾರೆ. ಅವರು ಸಿನಿಮಾ ನಟಿ ಸಬಾ ಆಜಾದ್ ಅವರೊಂದಿಗೆ ಮುಂಬೈನ ಹೊಟೇಲ್‍ವೊಂದರಿಂದ ಕೈ ಕೈ ಹಿಡಿದುಕೊಂಡು ಬರುತ್ತಿರುವ ದೃಶ್ಯ ಲಭ್ಯವಾಗಿದೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನುವ ಗುಸುಗುಸು ಬಾಲಿವುಡ್‍ನಲ್ಲಿ ಹಬ್ಬಿದೆ. ಇದನ್ನೂ ಓದಿ: ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್

ಹೃತಿಕ್ ಕೈಯಲ್ಲಿ ಈಗಾಗಲೇ ಮೂರು ಚಿತ್ರಗಳಿವೆ. ಅವರು ದೀಪಿಕಾ ಪಡುಕೋಣೆ ಒಳಗೊಂಡಿರುವ ಪ್ರಸ್ತುತ ಚಿತ್ರವಾದ ‘ಫೈಟರ್’ ಚಿತ್ರೀಕರಣದಲ್ಲಿದ್ದಾರೆ. ‘ವಿಕ್ರಮ್ ವೇದ’ದ ಹಿಂದಿ ರಿಮೇಕ್‍ನಲ್ಲಿ ಸಹ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ಸೈಫ್ ಅಲಿ ಖಾನ್ ಕೂಡ ನಟಿಸಲಿದ್ದಾರೆ. ಹೃತಿಕ್ ಅವರು ‘ಕ್ರಿಶ್ 4’ ಮೂಲಕ ಮತ್ತೆ ಬಾಲಿವುಡ್ ಅಂಗಳದಲ್ಲಿ ಮಿಂಚಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *