ಮೋದಿ ಸುಶಿಕ್ಷಿತ ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತಾರೆ. ಆದರೆ ಇಲ್ಲಿ ಮೀಸಲಾತಿ ತೆಗೆಯಲಾಗಿದೆ? – ಪ್ರಶ್ನೆಗೆ ಅಮಿತ್‌ ಶಾ ಉತ್ತರ ನೀಡಿದ್ದು ಹೀಗೆ

By
1 Min Read

ಬೆಂಗಳೂರು: ಮುಸ್ಲಿಮರನ್ನು (Musilms)ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಯಾವ ತಕರಾರೂ ಇಲ್ಲ. ಆದರೆ ಮೀಸಲಾತಿ (Reservation) ಕೊಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ.

ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ (HR Ranganath) ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸುಶಿಕ್ಷಿತ ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಎಂದು ಹೇಳುತ್ತಾರೆ. ಇನ್ನೊಂದು ಕಡೆ ನೀವು ಅವರ ಮೀಸಲಾತಿ ರದ್ದು ಮಾಡುತ್ತೀರಿ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದನ್ನೂ ಓದಿ: ಕಾಂಗ್ರೆಸ್‌, ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರದ ಯೋಜನೆ ಸರಿಯಾಗಿ ಜಾರಿಯಾಗಿರಲಿಲ್ಲ: ಅಮಿತ್‌ ಶಾ

ಯಾರಿಗೆ ಮೀಸಲಾತಿ ನೀಡಬೇಕೆಂಬುದು ಸಂವಿಧಾನದಲ್ಲಿ ನಿಗದಿಯಾಗಿದೆ. ಸಂವಿಧಾನ ರಚಿಸಿದ್ದು ಬಿಜೆಪಿ ಅಲ್ಲ. ಸಂವಿಧಾನ ಅಸ್ತಿತ್ವಕ್ಕೆ ಬಂದಾಗ ಬಿಜೆಪಿ ಇರಲೇ ಇಲ್ಲ. ಸುಪ್ರೀಂಕೋರ್ಟ್ ಮೀಸಲಾತಿ ಅರ್ಜಿಯನ್ನು ಪರಿಶೀಲಿಸಿ ವಿಚಾರಣೆ ಬಗ್ಗೆ ವಿಚಾರಣೆ ಮಾಡಲಿ. ನಮಗೇನೂ ಅಭ್ಯಂತರವಿಲ್ಲ. ನಾವು ನಮ್ಮ ವಾದ ಮಂಡಿಸುತ್ತೇವೆ. ಸುಪ್ರೀಂ ಕೋರ್ಟ್‍ಗೆ ಮನದಟ್ಟು ಮಾಡಿಕೊಡುತ್ತೇವೆ ಎಂದು ಹೇಳಿದರು.

ಸಂವಿಧಾನ ಬಾಹಿರ ಮೀಸಲಾತಿ ಕೊಡಲು ಬರುವುದಿಲ್ಲ ಅನ್ನೋದು ನಿಮ್ಮ ವಾದವೇ ಎಂಬ ಪ್ರಶ್ನೆಗೆ ಹೌದು. ನೂರು ಪರ್ಸೆಂಟ್ ಕರೆಕ್ಟ್ ಎಂದರು.

ಇಷ್ಟಾದ ಮೇಲೂ ಮುಸ್ಲಿಮರು ನಿಮ್ಮ ಮೇಲೆ ನಂಬಿಕೆ ಇಟ್ಟು ಬಿಜೆಪಿಗೆ ಮತ ಹಾಕಬೇಕೆಂದು ಬಯಸುತ್ತೀರಾ ಎಂದು ಕೇಳಿದ್ದಕ್ಕೆ ನಾನು ಆ ರೀತಿ ಹೇಳಿಯೇ ಇಲ್ಲ. ಕರ್ನಾಟಕದ ಸತ್‌ ಪ್ರಜೆಗಳು ಬಿಜೆಪಿಗೆ ವೋಟ್ ಹಾಕಬೇಕೆಂಬುದಷ್ಟೇ ನಮ್ಮ ಮನವಿ. ಮುಸ್ಲಿಮರೂ ಸೇರಿದಂತೆ ಎಲ್ಲ ಉತ್ತಮ ನಾಗರಿಕರಿಗೂ ಇದು ಅನ್ವಯವಾಗುತ್ತದೆ. ಮತ ಕೊಡಿ ಎಂದು ನಾವಂತೂ ಮನವಿ ಮಾಡುತ್ತೇವೆ ಎಂದು ಉತ್ತರಿಸಿದರು.

Share This Article