ಕಾಂತಾರಾ ಕ್ಲೈಮ್ಯಾಕ್ಸ್‌ ಶೂಟಿಂಗ್‌ ತಯಾರಿ ಹೇಗಿತ್ತು? – ಸ್ಕ್ರಿಪ್ಟ್‌ ಸಮೇತ ಉತ್ತರ ಕೊಟ್ಟ ಅರವಿಂದ್ ಕಶ್ಯಪ್

Public TV
2 Min Read

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡ್ತಿದೆ. ಈಗಾಗಲೇ ಈ ಚಿತ್ರದ ಒಟ್ಟಾರೆ ಗಳಿಕೆ 800 ಕೋಟಿ ರೂ. ಸಮೀಪ ಇದೆ. ಚಿತ್ರಮಂದಿರಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಕಾಂತಾರಾ ಚಾಪ್ಟರ್-1ನ ಕ್ಲೈಮ್ಯಾಕ್ಸ್‌ ಚಿತ್ರೀಕರಣಕ್ಕೆ ಚಿತ್ರತಂಡದ ಸಿದ್ಧತೆ ಹೇಗಿತ್ತು? ಎಂಬುದಕ್ಕೆ ಸಿನಿ ಛಾಯಾಗ್ರಾಹಕ ಅರವಿಂದ್ ಕಶ್ಯಪ್ (Arvind Kashyap) ಉತ್ತರ ಕೊಟ್ಟಿದ್ದಾರೆ.

 

View this post on Instagram

 

A post shared by Arvind S Kashyap, ISC (@arvindskash)

ಕಾಂತಾರ ಚಾಪ್ಟರ್‌-1ನ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಬಗ್ಗೆ ಪ್ರೇಕ್ಷಕರಿಗೆ ಒಂದಷ್ಟು ಕುತೂಹಲವಂತೂ ಇದ್ದೇ ಇತ್ತು. ಇತ್ತೀಚೆಗೆ ರಿಷಬ್‌ ಶೆಟ್ಟಿ (Rishab Shetty) ತಮ್ಮ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ʻClimax shootingನ ಸಮಯ … ಊದಿಕೊಂಡಿದ್ದ ಕಾಲು , ನಿತ್ರಾಣವಾಗಿದ್ದ ದೇಹ..ʼ ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವಹಾಗೆ ಆಗಿದೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯʼ ಎಂದು ಬರೆದುಕೊಂಡಿದ್ದರು. ಅಲ್ಲದೇ ಕ್ಲೈಮ್ಯಾಕ್ಸ್‌ ಶೂಟಿಂಗ್‌ಗಾಗಿ ಯಾವು ಪಟ್ಟ ಕಟ್ಟಗಳನ್ನು ಬಿಂಬಿಸುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಸ್ಕ್ರಿಪ್ಟ್‌ನೊಂದಿಗೆ ಕ್ಲೈಮ್ಯಾಕ್ಸ್‌ ಚಿತ್ರೀಕರಣಕ್ಕೆ ತಯಾರಿ ಹೇಗಿತ್ತು ಅನ್ನೋದನ್ನ ಅರವಿಂದ್ ಕಶ್ಯಪ್ ತಿಳಿಸಿದ್ದಾರೆ.

ಕ್ಲೈಮ್ಯಾಕ್ಸ್‌ ಚಿತ್ರೀಕರಣದ ಮೂರು ಪುಟಗಳ ಸ್ಕ್ರಿಪ್ಟ್‌ವೊಂದನ್ನ ಹಂಚಿಕೊಂಡಿದ್ದು, ಹೇಗೆ ಚಿತ್ರೀಕರಣ ಮಾಡಲಾಯ್ತು ಅನ್ನೋದನ್ನ ತಿಳಿಸಿದ್ದಾರೆ. ನಿಮ್ಮಲ್ಲಿ ಕೇಳುವವರಿಗೆ ಅಂತ ಬರೆದಿದ್ದು, ʻಸಾಮಾನ್ಯವಾಗಿ ನಮ್ಮ ಸಿಂಡಿಕೇಟ್‌ ಫೈಟ್‌ ಸೀಕ್ವೆನ್ಸ್‌ಗಳಿಗೆ ಹೇಗೆ ಸ್ಕ್ರಿಪ್ಟ್‌ ಮಾಡುತ್ತದೆ ಎಂಬುದು ಇಲ್ಲಿದೆʼ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅಂತಿಮ ಆವೃತ್ತಿಯಲ್ಲಿ ಏನು ಬದಲಾಗಿದೆ ಅಂತ ನೀವು ಗುರುತಿಸಬಹುದಾ? ಅಂತ ಪ್ರಶ್ನೆ ಮಾಡಿದ್ದು, ಕಾಗುಣಿತ, ವ್ಯಾಕರಣ ದೋಷವನ್ನು ಕಡೆಗಣಿಸಿ ಅಂತ ಬರೆದುಕೊಂಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಜಸ್ಟ್‌ ಇಮ್ಯಾಜಿನ್‌ ಮಾಡ್ಕೊಳಿ, ಇಂದು ಒಂದು ಸೀನ್‌ ಅಷ್ಟೇ. ಇನ್ನೂ ಇಡೀ ಸಿನಿಮಾಗೆ ಹೇಗೆ ಮಾಡಿರಬಹುದು? ನಿಜಕ್ಕೂ ತುಂಬಾ ಎಫರ್ಟ್‌ ಹಾಕಿದ್ದೀರಿ ಅಂತ ಭೇಶ್‌ ಎಂದಿದ್ದಾರೆ. ಇನ್ನೂ ಕೆಲವರು ʻದಯವಿಟ್ಟು ಕಾಂತಾರದ ಸಂಪೂರ್ಣ ಪೌರಾಣಿಕ ಸ್ಕ್ರಿಪ್ಟ್ ನಮಗೆ ಒದಗಿಸಿ… ಇದು ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರಿಗೆ ಬರವಣಿಗೆಯ ಬಗ್ಗೆ ಬಹಳಷ್ಟು ಕಲಿಯಲು ಸಹಾಯವಾಗುತ್ತದೆ ಅಂತ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಈಗಾಗಲೇ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ವರ್ಷನ್‌ಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆರೆಕಂಡು, ಎಲ್ಲಾ ಭಾಷೆಗಳಲ್ಲೂ ಅದ್ವಿತೀಯ ಸಾಧನೆ ಮಾಡಿದೆ. ವಿತರಕರು ಲಾಭದ ಕಡೆ ಮುಖ ಮಾಡಿದ್ದಾರೆ. ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇದೀಗ ಇಂಗ್ಲಿಷ್ ಭಾಷೆಯಲ್ಲೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಡಬ್‌ ಮಾಡ್ತಿದ್ದು, ಇದು ಯಾವ ರೀತಿ ಸಕ್ಸಸ್‌ ಕಾಣಲಿದೆ ಅನ್ನೋದನ್ನ ಕಾದುನೋಡಬೇಕಿದೆ.

Share This Article