– ತಡರಾತ್ರಿ 12:30ಕ್ಕೆ ಹೇಗೆ ಹೊರಗೆ ಬಂದಳು?
ಕೋಲ್ಕತ್ತಾ: ವೈದ್ಯಕೀಯ ವಿದ್ಯಾರ್ಥಿನಿ (MBBS student) ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಕುರಿತು ಮೊದಲ ಬಾರಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅಚ್ಚರಿ ಹೇಳಿಕೆ ನೀಡಿದ್ದಾರೆ. ತಡರಾತ್ರಿ 12:30ಕ್ಕೆ ಹೇಗೆ ಅವಳು ಹೊರಗೆ ಬಂದಳು? ಅಂತ ರೇಪ್ ಸಂತ್ರಸ್ತೆ ಕುರಿತು ಪ್ರಶ್ನೆ ಮಾಡಿದರಲ್ಲದೇ, ಹುಡುಗಿಯರನ್ನ ರಾತ್ರಿ ಹೊತ್ತು ಹೊರಗೆ ಬಿಡದಂತೆ ಖಾಸಗಿ ಕಾಲೇಜುಗಳು ಜವಾಬ್ದಾರಿ ವಹಿಸಬೇಕು ಎಂದು ತಾಕೀತು ಮಾಡಿದರು.
ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ಬಳಿ ಒಡಿಶಾದ (Odisha) ಜಲೇಶ್ವರ ಮೂಲದ ವಿದ್ಯಾರ್ಥಿನಿಯ ಮೇಲೆ ಶುಕ್ರವಾರ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಘಟನೆ ಕುರಿತು ಪ್ರತಿಕ್ರಿಯಿಸಿದ ದೀದಿ, ಕತ್ತಲಾದ ನಂತ್ರ ಹೆಣ್ಣುಮಕ್ಕಳು (Girls) ಹೊರಗೆ ಹೋಗುವುದನ್ನ ತಡೆಯಬೇಕು ಎಂದು ಹೇಳಿದ್ರು. ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಬಿಜೆಪಿ ಸೇರಿದಂತೆ ವಿಪಕ್ಷಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ವಿದ್ಯಾರ್ಥಿನಿ ಖಾಸಗಿ ಖಾಲೇಜಿನಲ್ಲಿ ಓದುತ್ತಿದ್ದಳು, ಹಾಗಾದ್ರೆ ಅದು ಯಾರ ಜವಾಬ್ದಾರಿ? ತಡರಾತ್ರಿ 12.30ಕ್ಕೆ ಅವಳು ಹೇಗೆ ಹೊರಬಂದಳು? ಎಂದು ಕಳವಳ ವ್ಯಕ್ತಪಡಿಸಿದರಲ್ಲದೇ, ಈಗ ಕೃತ್ಯ ಎಸಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಯಾರನ್ನೂ ಕ್ಷಮಿಸುವ ಮಾತೇ ಇಲ್ಲ, ಪೊಲೀಸರು ಎಲ್ಲ ಕಡೆ ಹುಡುಕುತ್ತಿದ್ದಾರೆ ಎಂದು ತಿಳಿಸಿದ್ರು.
ಮುಂದುವರಿದು.. ಖಾಸಗಿ ವೈದ್ಯಕೀಯ ಕಾಲೇಜುಗಳು ತಮ್ಮ ತಮ್ಮ ವಿದ್ಯಾರ್ಥಿಗಳ ಬಗ್ಗೆ ಜವಾಬ್ದಾರಿ ವಹಿಸಬೇಕು, ರಾತ್ರಿ ಸಂಸ್ಕೃತಿಯ ಬಗ್ಗೆ ಎಚ್ಚರ ವಹಿಸಬೇಕು. ಹೆಣ್ಣುಮಕ್ಕಳನ್ನ ರಾತ್ರಿಯಲ್ಲಿ ಹೊರಗೆ ಹೋಗಲು ಬಿಡಬಾರದು. ಮೊದಲು ತಮ್ಮನ್ನ ತಾವು ರಕ್ಷಿಸಿಕೊಳ್ಳಬೇಕು. ಏಕೆಂದ್ರೆ ಇದು ಅರಣ್ಯ ಪ್ರದೇಶ ಎಂದು ಹೇಳಿದ್ರು.
ಸಂತ್ರಸ್ತೆ ತಂದೆ ಹೇಳಿದ್ದೇನು?
ತಿನ್ನಲು ಏನಾದ್ರೂ ಬೇಕು ಅಂತ ತರೋದಕ್ಕೆ ಹೊರಗೆ ಸಹಪಾಠಿಯೊಂದಿಗೆ ಹೋಗಿದ್ದಳು. ಈ ವೇಳೆ ಮೂರು ಪುರುಷರು ಬಂದು ಅತ್ಯಾಚಾರ ಎಸಗಿದ್ದಾರೆ. ಕೃತ್ಯ ನಡೆಯುವಾಗ ಜೊತೆಯಲ್ಲಿದ್ದವನು ಆಕೆಯನ್ನ ಬಿಟ್ಟು ಓಡಿಹೋಗಿದ್ದಾನೆ ಎಂದು ಹೇಳಿದರು.
ರಾತ್ರಿ 10 ಗಂಟೆ ಸುಮಾರಿಗೆ ಮಗಳ ಸ್ನೇಹಿತೆ ನಮಗೆ ಕರೆ ಮಾಡಿ, ನಿಮ್ಮ ಮಗಳ ಮೇಲೆ ಅತ್ಯಾಚಾರ ಆಗಿದೆ ಎಂದು ಹೇಳಿದಳು. ನಾವು ಒಡಿಶಾದ ಜುಲೇಶ್ವರದಲ್ಲಿ ವಾಸಿಸುತ್ತಿದ್ದೇವೆ. ಆಕೆಯನ್ನ ಹೊರಗೆ ತಿನ್ನಲು ಕರೆದುಕೊಂಡು ಹೋಗಿದ್ದ, ಮೂವರು ಪುರುಷರು ಬರುತ್ತಿದ್ದಂತೆ ಸ್ನೇಹಿತ ಆಕೆಯನ್ನ ಬಿಟ್ಟು ಓಡಿಹೋದ. ರಾತ್ರಿ 8 ರಿಂದ 9 ಗಂಟೆ ನಡುವೆ ಘಟನೆ ಸಂಭವಿಸಿದೆ. ಅಂತಹ ಗಂಭೀರ ಘಟನೆ ನಡೆದಿದ್ರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಲವತ್ತುಕೊಂಡಿದ್ದಾರೆ.