60 ಸೆಕೆಂಡ್‍ನಲ್ಲಿ ರಾಯಲ್ ಎನ್‍ಫೀಲ್ಡ್ ಕದಿಯೋದನ್ನು ತೋರಿಸಿಕೊಟ್ಟ ಖತರ್ನಾಕ್ ಕಳ್ಳ..!

By
1 Min Read

ನವದೆಹಲಿ: ರಾಯಲ್ ಎನ್‍ಫೀಲ್ಡ್ ಬೈಕ್ ಅನ್ನು ಕೇವಲ 60 ಸೆಕೆಂಡುಗಳಲ್ಲಿ ಕದಿಯುವುದು ಹೇಗೆ? ಎಂಬುವುದನ್ನು ಕಳ್ಳನೊಬ್ಬ ತನ್ನ ಕೈಚಳಕವನ್ನು ವೀಡಿಯೋವೊಂದರಲ್ಲಿ ತೋರಿಸಿದ್ದಾನೆ.

2009ರಲ್ಲಿ ಪರಿಚಯಿಸಲಾದ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಶ್ರೀಮಂತರ ಬೈಕ್ ಎಂದೇ ಪ್ರತೀತಿ ಪಡೆದಿದೆ. ಎಲ್ಲಾ ವಯಸ್ಸಿನ ಜನರಲ್ಲಿ ಜನಪ್ರಿಯವಾದ ಈ ಬೈಕ್‍ಗೆ ಮಾರುಕಟ್ಟೆಯಲ್ಲೂ ಸಹ ಸಾಕಷ್ಟು ಬೇಡಿಕೆಯಿದೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಏಕಕಾಲದಲ್ಲಿ ಎಸಿಬಿ ದಾಳಿ

ರಾಯಲ್ ಎನ್‍ಫೀಲ್ಡ್ ಮೋಟಾರ್ ಸೈಕಲ್‍ಗಳು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿಂದಾಗಿ ಕಳ್ಳರ ನಡುವೆ ಜನಪ್ರಿಯ ಆಯ್ಕೆಯಾಗಿವೆ. ಈ ವೀಡಿಯೊದಲ್ಲಿರುವ ಕಳ್ಳನು ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್‍ನ ಬೀಗವನ್ನು 60 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಹೇಗೆ ಒಡೆಯುವುದು ಎಂಬುದನ್ನು ತೋರಿಸಿದ್ದಾನೆ. ಇದನ್ನೂ ಓದಿ: ಮದ್ಯದ ಜೊತೆಗೆ ನೀರಿನ ಬಾಟ್ಲಿಗೆ ನಡೆದ ಗಲಾಟೆ ಕ್ಯಾಶಿಯರ್ ಕೊಲೆಯಲ್ಲಿ ಅಂತ್ಯ

 ವೀಡಿಯೋದಲ್ಲಿ ಏನಿದೆ..?
ಕಳ್ಳ ಲಾಕ್ ಆಗಿರುವ ಕ್ಲಾಸಿಕ್ 350 ಅನ್ನು ಕದಿಯಲು 60 ಸೆಕೆಂಡ್‍ಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿದ್ದಾನೆ. ಕ್ಲಾಸಿಕ್ 350 ಅನ್ನು ಕೀ ಇಲ್ಲದೆ ಎಂಜಿನ್ ಅನ್ನು ಹೇಗೆ ಪ್ರಾರಂಭಿಸುವುದನ್ನು ಪೊಲೀಸರಿಗೆ ತೋರಿಸುತ್ತಿದ್ದಾನೆ. ಶಂಕಿತ ಕಳ್ಳನು ಪೊಲೀಸ್ ಕಸ್ಟಡಿಯಲ್ಲಿದ್ದು, ರಾಯಲ್ ಎನ್‍ಫೀಲ್ಡ್‌ನ ಬೀಗವನ್ನು ಹೇಗೆ ಭೇದಿಸುವಲ್ಲಿ ಯಶಸ್ವಿಯಾಗಿದ್ದಾನೆ ಎಂಬುದನ್ನು ತನಿಖಾಧಿಕಾರಿಗಳು ಕುತೂಹಲದಿಂದ ನೋಡುತ್ತಿದ್ದಾರೆ.

ಬೈಕ್‍ನ ಹ್ಯಾಂಡಲ್‍ನ್ನು ಯಾವ ದಿಕ್ಕಿನಲ್ಲಿ ಸವಾರ ಲಾಕ್ ಮಾಡಿರುತ್ತಾನೆಯೋ ಅದರ ವಿರುದ್ಧ ದಿಕ್ಕಿನಲ್ಲಿ ಕಳ್ಳನು ಬಲವಾಗಿ ಹ್ಯಾಂಡಲ್‌ಗೆ ಒದೆಯುತ್ತಾನೆ. ಹ್ಯಾಂಡಲ್ ಲಾಕ್ ಮುರಿದ ನಂತರ ಬ್ಯಾಟರಿ ಟರ್ಮಿನಲ್‍ಗಳಿಗೆ ಲಗತ್ತಿಸಲಾದ ಹೆಡ್‍ಲೈಟ್‍ನ ಹಿಂದೆ ಮರೆಮಾಡಲಾಗಿರುವ ಇಗ್ನಿಷನ್ ವೈರ್‌ನ್ನು ಮತ್ತು ಫ್ಯೂಸ್ ಕನೆಕ್ಟರ್ ಅನ್ನು ಕಳ್ಳನು ಕತ್ತರಿಸುತ್ತಾನೆ. ನಂತರದಲ್ಲಿ ಕತ್ತರಿಸಿದ ಆ ಎರಡು ಕೇಬಲ್‍ಗಳನ್ನು ಮರುಸಂಪರ್ಕಿಸಿದ ನಂತರ, ಕಳ್ಳನು ಬ್ಯಾಟರಿ ಚಾಲಿತ ಸ್ಟಾರ್ಟರ್‌ನೊಂದಿಗೆ ಬೈಕ್ ಅನ್ನು ಪ್ರಾರಂಭಿಸಿದನು. ಕೀ ಇಲ್ಲದೇ ಬೈಕ್ ಸ್ಟಾರ್ಟ್ ಮಾಡಿದ ಕಳ್ಳನ ಕೈಚಳಕವನ್ನು ನೋಡಿ ಪೊಲೀಸ್ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *