ಸೀಸನ್ ಮುಗಿಯೋದ್ರೊಳಗೆ ಮನೆಯಲ್ಲೇ ಟ್ರೈ ಮಾಡಿ ಮ್ಯಾಂಗೋ ಐಸ್‌ ಕ್ರೀಂ

Public TV
1 Min Read

ಷ್ಟೊಂದು ಬಿಸಿಲು.. ತಣ್ಣಗೆ ಏನಾದ್ರೂ ತಿನ್ಬೇಕು ಅನ್ಸುತ್ತಾ..? ಹಾಗಾದ್ರೆ ಈಗ ಮಾವಿನ ಹಣ್ಣಿನ ಸೀಜನ್‌ ಅಲ್ವಾ? ಮ್ಯಾಂಗೋ ಐಸ್‌ಕ್ರೀಮ್‌ನ ನೀವೇ ಮನೆಯಲ್ಲೇ ಮಾಡ್ಕೊಂಡು ತಿನ್ನಿ.. ಮಾಡೋದು ಹೇಗೆ ಅಂತ ಯೋಚನೇನಾ..? ರೆಸಿಪಿ ನಾನು ಹೇಳ್ಕೊಡ್ತಿನಿ, ಮುಂದೆ ಓದಿ..

ಮ್ಯಾಂಗೋ ಐಸ್‌ಕ್ರೀಮ್‌ ಮಾಡೋಕೆ ಏನೇನು ಬೇಕು?
2-3 ಮಾವಿನ ಹಣ್ಣು, ಹಾಲಿನ ಪುಡಿ, ಮಿಲ್ಕ್‌ಮೇಡ್‌, ವ್ಹಿಪ್ಪಿಂಗ್‌ ಕ್ರೀಮ್

ಮ್ಯಾಂಗೋ ಐಸ್‌ಕ್ರೀಮ್ ಮಾಡೋದು ಹೇಗೆ?
ಮಾವಿನ ಹಣ್ಣಿನ ಸಿಪ್ಪೆ ಸುಲಿದು ತಿರುಳನ್ನು ಸಣ್ಣ ಸಣ್ಣ ತುಂಡುಗಳನ್ನು ಮಾಡಿಕೊಳ್ಳಿ. ನಂತರ ಅದನ್ನು 2 ಕಪ್‌ ಆಗುವಷ್ಟು ಪೇಸ್ಟ್ ರೀತಿ ಮಾಡಿ, ಅದಕ್ಕೆ ಅರ್ಧ ಕಪ್‌ ಹಾಲಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮಿಕ್ಸ್ ಮಾಡುವಾಗ ಅದು ಗಂಟು ಕಟ್ಟಬಾರದು. ಅದಕ್ಕೆ ಅರ್ಧ ಕಪ್ ಮಿಲ್ಕ್‌ಮೇಡ್‌ (ಮಿಲ್ಕ್‌ಮೇಡ್ ಇಲ್ಲದಿದ್ದರೆ ನೀವು ಸಕ್ಕರೆ ಬಳಸಬಹುದು) ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಡ್ಜ್‌ನಲ್ಲಿಡಿ.

ಈಗ ನೀವು ವ್ಹಿಪ್ಪಿಂಗ್ ಕ್ರೀಮ್‌ ಹಾಕಿ 6-7 ನಿಮಿಷ ಕದಡಬೇಕು. ತುಂಬಾ ಮೃದುವಾದ ಮೇಲೆ ಕದಡಬಾರದು. ವ್ಹಿಪ್ಪಿಂಗ್‌ ಕ್ರೀಮ್‌ನ್ನು ಮಾವಿನಹಣ್ಣಿನ ಮಿಶ್ರಣದ ಜೊತೆಗೆ ಹಾಕಿ ಹಗುರ ಮಿಕ್ಸ್ ಮಾಡಬೇಕು. ಬಳಿಕ ಕ್ರೀಮ್ ರೀತಿಯಾದಾಗ ಮೆಟಲ್‌ ಟ್ರೇಗೆ ಹಾಕಿ 4 ಗಂಟೆ ಕಾಲ ಇಡಬೇಕು. ಬಳಿಕ ತೆಗೆದು ಮತ್ತೆ 8 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಬೇಕು. ನಂತರ ತೆಗೆದರೆ ಐಸ್‌ಕ್ರೀಂ ತಿನ್ನೋಕೆ ರೆಡಿಯಾಗಿರುತ್ತದೆ.

Share This Article