ಮಲ್ನಾಡ್‌ ಸ್ಪೆಷಲ್‌ ತವಾ ಫ್ರೈ ಮಾಡಿ.. ಸವಿಯಿರಿ

By
1 Min Read

ಕೆಲವೊಮ್ಮೆ ವೆಜ್‌ ತಿಂದು ಬೇಜಾರಾದಾಗ ನಾನ್‌ ವೆಜ್‌ ಊಟದ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರುಬಿಡುತ್ತೆ. ಅದರಲ್ಲೂ ಮಲ್ನಾಡ್‌ ಕಡೆಯ ನಾನ್‌ ವೆಜ್‌ ಅಂತೂ ಮೃಷ್ಟಾನ್ನ ಸವಿದಂತೆ. ಇನ್ನೂ ಹೆಚ್ಚು ಹೇಳಬೇಕೆಂದರೆ ಮೀನಿದ್ದರಂತೂ ಆಹಾ…!  ಅದಕ್ಕೆ ಸುಲಭವಾಗಿ ತವಾ ಫ್ರೈ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಿಗಳು: 
ಮೀನು
ಮಸಾಲಾಗಳು
ಕೆಂಪು ಮೆಣಸಿನ ಪುಡಿ
ಅರಿಶಿನ ಪುಡಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ನಿಂಬೆ ರಸ
ಉಪ್ಪು
ಎಣ್ಣೆ

ಮಾಡುವ ವಿಧಾನ:
ಮೊದಲಿಗೆ ಮೀನು ಚೆನ್ನಾಗಿ ತೊಳೆದು ಅದನ್ನು ಎರಡು ಭಾಗವಾಗಿ ಕತ್ತರಿಸಿಕೊಳ್ಳಬೇಕು. ಬಳಿಕ ಮಸಾಲೆ ಪದಾರ್ಥಗಳಾದ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ನಂತರ ಕತ್ತರಿಸಿದ ಮೀನಿನ ಮೇಲೆ ಅಡ್ಡದಾಗಿ ಚಾಕುವಿನಿಂದ ಕೂಯ್ಯಿರಿ. ಅದಕ್ಕೆ ತಯಾರಿಸಿದ ಪೇಸ್ಟ್‌ ಚೆನ್ನಾಗಿ ಮೆತ್ತಿಕೊಳ್ಳಿ.

ಇನ್ನೊಂದು ತವಾ ಅಥವಾ ಪ್ಯಾನ್‌ ತೆಗೆದುಕೊಂಡು ಅದರ ಮೇಲೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಕಡಿಮೆ ಉರಿಯಲ್ಲಿ ಇಟ್ಟುಕೊಂಡು ತವೆಯ ಮೇಲೆ ಪೇಸ್ಟ್‌ ಹಚ್ಚಿಕೊಂಡ ಮೀನನ್ನು ಹಾಕಿ ಗೋಲ್ಡನ್ ಬ್ರೌನ್ ಬಣ್ಣವರುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ.

Share This Article