ನಾನ್ ವೆಜ್ ತಿನ್ನದವರು ಕಬಾಬ್ ಟೇಸ್ಟ್ ನೋಡ್ಬೇಕಾ? ಹಾಗಾದ್ರೆ ಮನೆಯಲ್ಲೇ ಆಲೋ ಕಬಾಬ್ ಮಾಡಿ ತಿನ್ನಿ! ಮನೆಯಲ್ಲೇ ರುಚಿ ರುಚಿಯಾದ ವೆಜ್ ಕಬಾಬ್ ಮಾಡೋದನ್ನ ಇಲ್ಲಿ ವಿವರಿಸಲಾಗಿದೆ.
ಆಲೂ ಕಬಾಬ್‌ಗೆ ಏನೆಲ್ಲ ಬೇಕು?
* ಆಲೂಗಡ್ಡೆ- 3
*ಖಾರದ ಪುಡಿ- 2 ಚಮಚ
* ಕಬಾಬ್ ಪೌಡರ್ – 1 ಚಮಚ
* ಮೈದಾ ಹಿಟ್ಟು- 4 ಚಮಚ
* ಅಕ್ಕಿ ಹಿಟ್ಟು- 2 ಚಮಚ
* ಕಾರ್ನ್ ಫ್ಲೋರ್- 1 ಚಮಚ
* ಅರಿಶಿಣದ ಪುಡಿ- ಸ್ವಲ್ಪ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ
* ಉಪ್ಪು-ರುಚಿಗೆ ತಕ್ಕಷ್ಟು
* ಎಣ್ಣೆ
ಆಲೂ ಕಬಾಬ್ ಮಾಡೋದು ಹೇಗೆ?
ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಹೋಳುಗಳಾಗಿ ಕತ್ತರಿಸಿಕೊಳ್ಳಿ, ಬಳಿಕ ಸ್ಟೌ ಮೇಲೆ ಪಾತ್ರೆ ಇಟ್ಟು ನೀರು ಹಾಕಿ ಆಲೂಗಡ್ಡೆಗಳನ್ನು ಹಾಕಿ 2-3 ನಿಮಿಷ ಬೇಯಿಸಿ, ನಂತರ ಆಲೂಗಡ್ಡೆಯನ್ನು ತೆಗೆದಿಟ್ಟುಕೊಳ್ಳಿ.
ಮತ್ತೊಂದು ಪಾತ್ರೆಯಲ್ಲಿ ಮೈದಾ ಹಿಟ್ಟು. ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಖಾರದ ಪುಡಿ, ಕಬಾಬ್ ಪೌಡರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಇದೆಲ್ಲ ಹಾಕಿ ಮಿಕ್ಸ್ ಮಾಡಬೇಕು. ಬಳಿಕ ಆಲೂಗಡ್ಡೆಯನ್ನು ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಟ್ಟಿಗೆ ಕಲಸಿಕೊಳ್ಳಬೇಕು. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಬೇಕು. ಕಾದ ನಂತರ ಮಸಾಲೆ ಭರಿತ ಆಲೂವನ್ನು ಒಂದಾದಾಗಿ ಹಾಕಿ, ಕೆಂಪಾಗುವ ಹಾಗೆ ಕರಿದರೆ ರುಚಿಕರವಾದ ಆಲೂ ಕಬಾಬ್ ಸಿದ್ಧ.