ಮಕ್ಕಳೂ ಇಷ್ಟಪಟ್ಟು ತಿಂತಾರೆ ಈ ಟೇಸ್ಟಿ ಆಲೂ ಚಂಗೇಜಿ..

Public TV
1 Min Read

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ತರಕಾರಿಗಳೆಂದರೆ ಅಲರ್ಜಿ. ಹೀಗಿರುವಾಗ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವುದೇ ತಲೆ ಬಿಸಿಯಾಗಿರುತ್ತದೆ. ಇಂಥ ಸಂದರ್ಭದಲ್ಲಿ ತರಕಾರಿಗಳನ್ನು ಉಪಯೋಗಿಸಿ ವಿಭಿನ್ನವಾಗಿ ಆಹಾರ ತಯಾರಿಸುವ ಕಲೆ ತಾಯಂದಿರಿಗೆ ಗೊತ್ತಿರಬೇಕು. ಅದಕ್ಕೆ ಸುಲಭವಾಗಿ ಮಕ್ಕಳು ಇಷ್ಟಪಡುವಂತಹ ಆಲೂಗಡ್ಡೆಯ ಚಂಗೇಜಿಯನ್ನು ಈ ರೀತಿಯಾಗಿ ಮಾಡಿ.

ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ
ಅರಿಶಿಣ
ಕೆಂಪು ಮೆಣಸಿನ ಪುಡಿ
ಉಪ್ಪು
ಈರುಳ್ಳಿ
ಗೋಡಂಬಿ
ಮೊಸರು
ಕರಿಮೆಣಸು
ಲವಂಗ
ಜಾಕಾಯಿ
ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್
ಟೊಮ್ಯಾಟೋ
ಧನಿಯಾ ಪುಡಿ
ಸಕ್ಕರೆ
ಗರಂ ಮಸಾಲ
ಕಸೂರಿ ಮೇತಿ

ಮಾಡುವ ವಿಧಾನ:
ಮೊದಲಿಗೆ ಆಲೂಗಡ್ಡೆಯನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ.ಬಳಿಕ ಅದಕ್ಕೆ ಸ್ವಲ್ಪ ಅರಿಶಿಣ, ಕೆಂಪು ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಅದಕ್ಕೆ ಕಲಸಿ ಇಟ್ಟುಕೊಂಡಿರುವ ಆಲೂಗಡ್ಡೆಯನ್ನು ಚೆನ್ನಾಗಿ ಕರೆದುಕೊಳ್ಳಿ. ಬಳಿಕ ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಈರುಳ್ಳಿಯನ್ನು ಹಾಕಿ ಕೆಂಪು ಬಣ್ಣ ಬರುವವರೆಗೂ ಕರಿದುಕೊಳ್ಳಿ. ಕರೆದ ಈರುಳ್ಳಿಗೆ ಗೋಡಂಬಿ, ಮೊಸರು ಹಾಕಿ ಮೂರನ್ನು ಸೇರಿಸಿ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಗೆ ಒಗ್ಗರಣೆಗೆ ಸ್ವಲ್ಪ ಎಣ್ಣೆ ಬಿರಿಯಾನಿ ಎಲೆ, ಲವಂಗ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಅದಕ್ಕೆ ರುಬ್ಬಿದ ಟೊಮ್ಯಾಟೋ ಮಿಶ್ರಣವನ್ನು ಹಾಕಿ. ಬಳಿಕ ರುಬ್ಬಿಟ್ಟ ಈರುಳ್ಳಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿಕೊಂಡು ಅದಕ್ಕೆ ಅರಿಶಿಣ, ಕೆಂಪು ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಿಸಿ. ಆನಂತರ ಅದಕ್ಕೆ ಕರಿದಿಟ್ಟುಕೊಂಡ ಆಲೂಗಡ್ಡೆಯನ್ನು ಹಾಕಿಕೊಳ್ಳಿ. ಸ್ವಲ್ಪ ಬೇಯಿಸಿದ ನಂತರ ಕಸೂರಿ ಮೇತಿ ಹಾಕಿ ಅಲಂಕರಿಸಿದರೆ ಆಲೂ ಚಂಗೇಜಿ ತಯಾರಾಗುತ್ತದೆ.

Share This Article