ನನ್ನ ತಂದೆಗಾಗಿ ಪ್ರಾರ್ಥನೆ ಮಾಡಿ ಎಂದ ಆರ್‌ಸಿಬಿ ಆಟಗಾರ ಪಾರ್ಥಿವ್ ಪಟೇಲ್

Public TV
2 Min Read

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥಿವ್ ಪಟೇಲ್ ತಮ್ಮ ತಂದೆಯ ಆರೋಗ್ಯ ಗುಣಮುಖವಾಗಲು ಪ್ರಾರ್ಥನೆ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಪಾರ್ಥಿವ್ ಅವರ ತಂದೆ ಫೆಬ್ರವರಿ ತಿಂಗಳಿನಿಂದ ಮೆದುಳಿನ ರಕ್ತಸ್ರಾವ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ ತೀವ್ರ ಅನಾರೋಗ್ಯನಿಂದ ಬಳುತ್ತಿದ್ದರೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಪಾರ್ಥಿವ್ ಭಾವನಾತ್ಮಕವಾಗಿ ಸಂದೇಶ ನೀಡಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿ ಮಾತನಾಡಿರುವ ಪಾರ್ಥಿವ್, ನನ್ನ ದಿನಚರಿ ಮನೆಗೆ ಫೋನ್ ಮಾಡಿ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವ ಮೂಲಕ ಆರಂಭವಾಗುತ್ತಿದೆ. ಪಂದ್ಯದ ವೇಳೆ ನನಗೆ ಕುಟುಂಬದೊಂದಿಗೆ ಯಾವುದೇ ಸಂಪರ್ಕ ಇರುವುದಿಲ್ಲ. ನನ್ನ ಯೋಚನೆ ಕೂಡ ಪಂದ್ಯದ ಬಗ್ಗೆಯೇ ಕೇಂದ್ರಿಕರಿಸುತ್ತೇನೆ. ಆದರೆ ಪಂದ್ಯ ಮುಗಿಯುತ್ತಿದಂತೆ ನನ್ನ ಹೃದಯ ಸಂಪೂರ್ಣ ಮನೆಯ ಕಡೆ ಇರುತ್ತದೆ ಎಂದಿದ್ದಾರೆ.

ತಂದೆಯ ಅನಾರೋಗ್ಯ ಕಾರಣ ನಿರಂತರವಾಗಿ ವೈದ್ಯರಿಂದ ಮಾಹಿತಿ ಪಡೆಯುವುದರೊಂದಿಗೆ ಕೆಲ ಮುಖ್ಯ ನಿರ್ಣಯಗಳನ್ನು ನಾನು ಕೈಗೊಳ್ಳಬೇಕಾಗುತ್ತದೆ. ಪತ್ನಿ ಹಾಗೂ ಅಮ್ಮ, ತಂದೆಯ ಜೊತೆಗಿದ್ದರೂ ನನ್ನ ಅಭಿಪ್ರಾಯವನ್ನೇ ಅಂತಿಮವಾಗಿ ತೆಗೆದುಕೊಳ್ಳುತ್ತಾರೆ. ತಂದೆಗೆ ನೀಡಲಾಗುತ್ತಿರುವ ಕೃತಕ ಉಸಿರಾಟವನ್ನ ಕೆಲ ದಿನಗಳ ಮಟ್ಟಿಗೆ ತೆಗೆಯುವಂತಹ ನಿರ್ಧಾರಗಳನ್ನು ವೈದ್ಯರ ಸಲಹೆ ಮೇರೆಗೆ ನಾನು ತೆಗೆದುಕೊಳ್ಳಬೇಕಾಗುತ್ತದೆ. ಅದ್ದರಿಂದ ಇದು ನನಗೆ ಬಹುಮುಖ್ಯ ಸಮಯ ಎಂದು ತಿಳಿಸಿದ್ದಾರೆ.

ಇದ್ದಕ್ಕಿದ್ದಂತೆ ಮನೆಯಲ್ಲಿ ಪಾರ್ಥಿವ್ ಅವರ ತಂದೆ ಮನೆಯಲ್ಲಿ ಕುಸಿದ ಬಿದ್ದ ಬಳಿಕ ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿತ್ತು. ಪರಿಣಾಮ ಪಾರ್ಥಿವ್ ಮುಷ್ತಾಕ್ ಅಲಿ ಟ್ರೋಫಿಯಿಂದ ಹೊರ ನಡೆದಿದ್ದರು. ಆದರೆ ಐಪಿಎಲ್ ಟೂರ್ನಿಯಲ್ಲಿ ಆಡುವಂತೆ ಕುಟುಂಬ ಸದಸ್ಯರು ಪಾರ್ಥಿವ್‍ರ ಮನವೊಲಿಸಿದ್ದರು. 34 ವರ್ಷ ವಯಸ್ಸಿನ ಪಾರ್ಥಿವ್ ಪಾಟೇಲ್ ಕಳೆದ 6 ಪಂದ್ಯದಲ್ಲಿ 172 ರನ್ ಸಿಡಿಸಿದ್ದಾರೆ. ಇದರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಸಿಡಿಸಿದ ಅರ್ಧ ಶತಕವೂ ಸೇರಿದೆ. ಆರ್ ಸಿಬಿ ತಂಡ ಪ್ರತಿ ಪಂದ್ಯದ ಬಳಿಕ ತಂದೆಯನ್ನ ಭೇಟಿ ಮಾಡಲು ಅವಕಾಶವನ್ನು ನೀಡುತ್ತಿದೆ.

ನನ್ನ ಕುಟುಂಬ ಈ ವಿಚಾರದಲ್ಲಿ ನನಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದ್ದು ನನಗೆ ಪಂದ್ಯದ ವೇಳೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಪಂದ್ಯ ಮುಗಿದ ಬಳಿಕಷ್ಟೇ ಈ ಬಗ್ಗೆ ಮಾತನಾಡುತ್ತಾರೆ. ಸದ್ಯ ನಾನು ಕಠಿಣ ಸಂದರ್ಭಗಳನ್ನು ಎದುರಿಸಲು ಸಿದ್ಧನಾಗುತ್ತಿದ್ದೇನೆ ಎಂದು ಪಾರ್ಥಿವ್ ಹೇಳಿದ್ದಾರೆ. ಅಂದಹಾಗೇ  ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಶನಿವಾರ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿದೆ.

Share This Article
Leave a Comment

Leave a Reply

Your email address will not be published. Required fields are marked *