ಗ್ಯಾರಂಟಿ ಭಾರದ ನಡುವೆ ಅನುದಾನ ಹಂಚಿಕೆ – ಯಾವ ಇಲಾಖೆಗೆ ಎಷ್ಟು?

By
1 Min Read

ಬೆಂಗಳೂರು: 2024-25ನೇ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಅತಿಹೆಚ್ಚು 44,422 ಕೋಟಿ ರೂ. ಘೋಷಣೆ ಮಾಡಲಾಗಿದೆ. ಇದರೊಂದಿಗೆ ಇತರೇ ಇಲಾಖೆಗಳಿಗೆ 1,24,593 ಕೋಟಿ ರೂ. ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದನ್ನೂ ಓದಿ: Karnataka Budget 2024 – ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್‍ಗಳನ್ನು ಐಐಟಿಯಂತೆ ಅಭಿವೃದ್ಧಿ

ಸಿಎಂ ಸಿದ್ದರಾಮಯ್ಯ ಅವರಿಂದು ತಮ್ಮ ಬಜೆಟ್‌ನಲ್ಲಿ, ಗ್ಯಾರಂಟಿ ಭಾರದ ನಡುವೆಯೂ ಇಂಧನ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿಗೆ ಅನುದಾನ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Karnataka Budget 2024- ರಶ್ಮಿಕಾ ನೋವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ: ಡೀಪ್‍ ಫೇಕ್ ವಿರುದ್ಧ ಕ್ರಮಕ್ಕೆ ನಿರ್ಧಾರ

2024-25 ಸಾಲಿನ ಬಜೆಟ್ ಹಂಚಿಕೆ – ಯಾವ ಇಲಾಖೆಗೆ ಎಷ್ಟು ಅನುದಾನ? (ಕೋಟಿ ರೂ.ಗಳಲ್ಲಿ)

* ಶಿಕ್ಷಣ- 44,422 ಕೋಟಿ ರೂ.
* ಮಹಿಳಾ ಮತ್ತು ಮಕ್ಕಳ ಕಲ್ಯಾಣ- 34,406 ಕೋಟಿ ರೂ.
* ಇಂಧನ- 23,159 ಕೋಟಿ ರೂ.
* ಗ್ರಾಮೀಣಾಭಿವೃದ್ಧಿ- ಪಂಚಾಯತ್ ರಾಜ್- 21,160 ಕೋಟಿ ರೂ.
* ಒಳಾಡಳಿತ ಮತ್ತು ಸಾರಿಗೆ- 19,777 ಕೋಟಿ ರೂ.
* ನೀರಾವರಿ- 19,179 ಕೋಟಿ ರೂ.
* ನಗರಾಭಿವೃದ್ಧಿ-ವಸತಿ- 18,155 ಕೋಟಿ ರೂ.
* ಕಂದಾಯ- 16,170 ಕೋಟಿ ರೂ.
* ಆರೋಗ್ಯ- 15,145 ಕೋಟಿ ರೂ.
* ಸಮಾಜ ಕಲ್ಯಾಣ- 13,334 ಕೋಟಿ ರೂ.
* ಆಹಾರ ಮತ್ತು ನಾಗರೀಕ ಸರಬರಾಜು- 9,963 ಕೋಟಿ ರೂ.
* ಲೋಕೋಪಯೋಗಿ- 10,424 ಕೋಟಿ ರೂ.
* ಕೃಷಿ ಮತ್ತು ತೋಟಗಾರಿಕೆ- 6,688 ಕೋಟಿ ರೂ.
* ಪಶು ಸಂಗೋಪನೆ ಮತ್ತು ಮೀನುಗಾರಿಕೆ- 3,307 ಕೋಟಿ ರೂ.
* ಇತರೆ- 1,24,593 ಕೋಟಿ ರೂ.

Share This Article