ಒಳ ಮೀಸಲಾತಿ ಗೊಂದಲ ಇತ್ಯರ್ಥ ಮಾಡೋಕೆ ಎಷ್ಟು ವರ್ಷ ಬೇಕು – ಸಿದ್ದರಾಮಯ್ಯಗೆ ಹೆಚ್‌ಡಿಕೆ ಪ್ರಶ್ನೆ

2 Min Read

ಬೆಂಗಳೂರು: ಒಳ ಮೀಸಲಾತಿ (Internal Reservation) ಗೊಂದಲ ಇತ್ಯರ್ಥ ಮಾಡೋಕೆ ಎಷ್ಟು ವರ್ಷ ಬೇಕು ಸಿದ್ದರಾಮಯ್ಯನವರೇ (Siddaramaiah) ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (H.D Kumaraswamy) ಸಿಎಂಗೆ ಪ್ರಶ್ನೆ ಮಾಡಿದ್ದಾರೆ.

ಮಾಲೂರಿನ ಹೂಡಿ ವಿಜಯ್ ಕುಮಾರ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್ ‌ನಾಯಕರಿಗೆ ಹೇಳ್ತೀನಿ‌, ರಾಜ್ಯದಲ್ಲಿ 8-10 ವರ್ಷಗಳಿಂದ ಮೀಸಲಾತಿ ವಿಚಾರ ಕೆದಕಿ ಎಲ್ಲಾ ಪಕ್ಷಗಳು ಸಮಾಜಗಳ ಸಂಘರ್ಷಗಳು, ಅವಿಶ್ವಾಸ ಮೂಡಿಸೋ ಕೆಲಸ ಆಗ್ತಿದೆ. ಧಾರವಾಡದಲ್ಲಿ ಉದ್ಯೋಗಿಗಳು ಹೋರಾಟ ಮಾಡಿದ್ರು. ಅದಕ್ಕೆ ಸರ್ಕಾರ 56 ಸಾವಿರ ಹುದ್ದೆ ಕೊಡ್ತೀನಿ ಅಂದರು. ಈಗ ನೇಮಕಾತಿಗೆ ಒಳ ಮೀಸಲಾತಿ ‌ಸಮಸ್ಯೆ ಅಂತ ಮಾತಾಡ್ತಾ ಇದ್ದಾರೆ. ಇವತ್ತು ಕ್ಯಾಬಿನೆಟ್ ‌ಏನ್ ಆಗುತ್ತೋ ಗೊತ್ತಿಲ್ಲ. ಒಳ ಮೀಸಲಾತಿ ವಿಷಯದಲ್ಲಿ ಇವತ್ತಿನ ಕ್ಯಾಬಿನೆಟ್ ‌ನಲ್ಲಿ 2-3 ಸಚಿವರ ಗುಂಪು ಆಗಿದೆ. ಇವತ್ತು ಏನ್ ಆಗುತ್ತೋ ಗೊತ್ತಿಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ಮಾ.9 ರಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ ಲೋಕಸಭೆ – ಸದಸ್ಯರ ನಡುವೆ ಕುಳಿತುಕೊಳ್ಳಲಿದ್ದಾರೆ ಓಂ ಬಿರ್ಲಾ

ಎಲ್ಲಾ ಸಮುದಾಯಕ್ಕೆ ಕರೆ ಕೊಡ್ತೀನಿ ಒಂದು ಅವಕಾಶ ಕೊಡಿ. ರಾಜ್ಯದಲ್ಲಿ ಜನಪರ, ಜನರ ಭರವಸೆ ಈಡೇರಿಸುವ ಸರ್ಕಾರ ಬರಲು ಜಾತಿ ಬಿಟ್ಟು ಒಂದು ಅವಕಾಶ ಕೊಡಿ ಅಂತ ಮನವಿ ಮಾಡಿದರು. ಅಹಿಂದ ನಾಯಕ ಅಂತಾರೆ‌. ಯಾವ ಜಾತಿಗೆ ಏನ್ ಕೊಟ್ರಿ ಅಂತ ಪಟ್ಟಿ ಬಿಟ್ಟರೆ ಅವರ ಬಂಡವಾಳ ಗೊತ್ತಾಗುತ್ತದೆ. ನಮ್ಮ ಪಕ್ಷಕ್ಕೆ ಜಾತಿ ಇಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಅನ್ನೋದು ನಮ್ಮ ಆಸೆ ಎಂದರು.

ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ತಂದೆಯವರ ಮನಸು ನೋಯಿಸಿ, ಅವರ ಮಾತು ಕೇಳಲಿಲ್ಲ. ಎರಡು ಬಾರಿ ಸಿಎಂ ಆದೆ ನಾನು ಅಂತ ಇತಿಹಾಸ ಮೆಲುಕು ಹಾಕಿದ್ರು. ಯಾರೋ ಮಾಗಡಿಯಲ್ಲಿ ಕುಮಾರಸ್ವಾಮಿ ಸಾಕ್ಷಿ ‌ಗುಡ್ಡೆ ಕೊಡಿ ಅಂತ ಕೇಳ್ತಾರೆ. ನಾನು ಎಲ್ಲಿಂದ ಸಾಕ್ಷಿ ಗುಡ್ಡೆ ತರಲಿ. ಆರೂವರೆ ಕೋಟಿ ಜನರೇ ನನ್ನ ಸಾಕ್ಷಿ ಗುಡ್ಡೆ. ನಾನು ಯಾವುದೇ ದೊಡ್ಡ ಬಿಲ್ಡಿಂಗ್ ಕಟ್ಟಿಲ್ಲ ಎಂದರು.

ಒಳ ಮೀಸಲಾತಿ ಬಗ್ಗೆ ನಿರ್ಧಾರ ಮಾಡದೇ 8 ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ದೇವರಾಜ್ ಅರಸ್ ದಾಖಲೆ ಮುರಿದೆ ಅಂತಾರೆ‌.‌ ಒಳ ಮೀಸಲಾತಿ ಗೊಂದಲ ಕ್ಲಿಯರ್ ಮಾಡೋಕೆ ಎಷ್ಟು ವರ್ಷ ಬೇಕು ಸಿದ್ದರಾಮಯ್ಯ ಅವರೇ. ಕುರ್ಚಿ ವಿಷಯ ಬಂದಾಗ ಮಾತ್ರ ಅಹಿಂದ ಅಂತ ಹೇಳ್ತಾರೆ. ಅಮೇಲೆ ಅವರು ಅಲ್ಲೇ ಇವರು ‌ಇಲ್ಲೆ ಅಂತ ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ‌ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಈ ಬಾರಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡಿಸಲಿದ್ದಾರೆ: ಅಶೋಕ್ ಟೀಕೆ

Share This Article