ದೂರದ ಸಂಬಂಧಕ್ಕೆ ಬಯಸುತ್ತಿದೆ ಮನ – ಜನರೇಶನ್‌-Zನಲ್ಲಿ ಆಗ್ತಿರೋ ಬದಲಾವಣೆಗೆ ಕಾರಣ ಏನು?

Public TV
5 Min Read

ಸರ್ಕಾರಿ ಹುದ್ದೆ ಅಥವಾ ಇನ್ಯಾವುದೋ ಉದ್ಯೋಗದಿಂದಾಗಿ ದಂಪತಿ, ಜೋಡಿ ಬೇರೆ ಬೇರೆ ಊರುಗಳಲ್ಲಿ ತುಂಬಾ ದೂರ, ಒಬ್ಬರನ್ನೊಬ್ಬರು ಬಿಟ್ಟು ಇರಬೇಕಾಗುತ್ತದೆ. ಇದು ಸಂಗಾತಿಗಳಿಬ್ಬರಿಗೆ ವಿರಹ ವೇದನೆ ನೀಡುವುದು. ದೈಹಿಕವಾಗಿ ದೂರವಿರುವ ಪರಿಣಾಮವು ಮಾನಸಿಕವಾಗಿಯೂ ಬೀಳುವುದು. ಇಂತಹ ಸಮಯವು ದಂಪತಿಗೆ ಒಂದು ಅಗ್ನಿಪರೀಕ್ಷೆಯಾಗುತ್ತದೆ. ಈ ವೇಳೆ ಕೆಲವೊಂದು ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಗುತ್ತದೆ. ಕೆಲವೊಮ್ಮೆ ಸಂಬಂಧಗಳೇ ಮುರಿದುಬೀಳುತ್ತವೆ. ಈ ಎಲ್ಲ ಘಟನೆಗಳು ಜನರೇಷನ್‌-ಝಡ್‌ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಝೆನ್‌-ಝೆಡ್‌ ಡೇಟಿಂಗ್‌ ಜೀವನ ಶೈಲಿಗೆ ಮುಂದಾಗುತ್ತಿದ್ದು, ದೂರ ಸಂಬಂಧಗಳನ್ನೇ ಅಂದ್ರೆ ವಿದೇಶಿ ಮಹಿಳೆಯರು ಅಥವಾ ಪುರುಷರ ಮೇಲೆ ಹೆಚ್ಚು ಅವಲಂಭಿಸುತ್ತಿವೆ.

ಡೇಟಿಂಗ್ ಸ್ವಲ್ಪ ಅಸ್ಪಷ್ಟವಾದ ಸಂಗತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಡೇಟಿಂಗ್ ಮಾಡುವ ಮೊದಲು ಆತ ಅಥವಾ ಆಕೆ ತಮ್ಮ ಮನಸ್ಸು ಮತ್ತು ಹೃದಯವನ್ನು ಅಣಿಗೊಳಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಡೇಟಿಂಗ್ ಅಂದ ಮೇಲೆ ಅಲ್ಲಿ ನಿರಾಕರಣೆಗಳು ಸಂಭವಿಸುತ್ತವೆ. ಪ್ರೀತಿ ನಿಜವಾಗಿದ್ದರೆ ಮತ್ತು ಸರಿಯಾದ ದೃಷ್ಟಿಕೋನದಿಂದ ಈ ಸಂಬಂಧವಿದ್ದರೆ ಆಗ ನೀವು ಖಂಡಿತವಾಗಿಯೂ ಗೆದ್ದು ಬರಬಹುದು.

ನವಯುಗದ ಜನರೇಷನ್‌ನಲ್ಲಿ ಅರ್ಧದಷ್ಟು ಯುವ ಸಮೂಹ ತಾವಿರುವ ಸ್ಥಳವನ್ನು ಬಿಟ್ಟು ದೂರದ ಸ್ಥಳಗಳಲ್ಲಿ ಅವನ ಅಥವಾ ಅವಳೊಂದಿಗೆ ಡೇಟಿಂಗ್‌ ಮಾಡಲು ಆಸಕ್ತಿ ವಹಿಸುತ್ತಿದ್ದಾರೆ. 3/1 ಭಾಗದಷ್ಟು ಜನ ದೇಶದ ಗಡಿಯಾಚೆಗಿನ ಸಂಪರ್ಕ ಬೆಳೆಸಲು ಮುಂದಾಗುತ್ತಿದ್ದಾರೆ. ವಿದೇಶಿ ಪ್ರಯಾಣಗಳು ಹಾಗೂ ಡೇಟಿಂಗ್‌ ಆಪ್‌ಗಳು ಹಾಗೂ ಸೋಷಿಯಲ್‌ ಮೀಡಿಯಾಗಳು ಇದಕ್ಕೆ ಹೇಗೆ ವೇದಿಕೆಗಳಾಗ್ತಿವೆ ಅನ್ನೋದನ್ನ ತಿಳಿಯೋಣ….

ವಿದೇಶಿ ಪ್ರೀತಿ ಹುಡುಕಲು ಪಾಸ್‌ಪೋರ್ಟ್‌ ಕನೆಕ್ಷನ್‌
ಇಂದಿನ ಜನರೇಷನ್‌ Zಗೆ ವಿದೇಶಿ ಪ್ರಯಾಣ ಕೈಗೊಳ್ಳೋದು ಕೇವಲ ಮನೋಲ್ಲಾಸಕ್ಕಲ್ಲ, ಹೊಸ ಹೊಸ ಸಂಬಂಧಗಳನ್ನ ಅನ್ವೇಶಿಸೋದಕ್ಕಾಗಿಯೂ ಮಾಡ್ತಿದ್ದಾರೆ. ಇದ್ದಕ್ಕಾಗಿ ಹೆಚ್ಚು ಹೆಚ್ಚು ದೇಶಗಳಿಗೆ ಪ್ರಯಾಣಿಸಲು ಶೀಘ್ರ ಪಾಸ್‌ಪೋರ್ಟ್‌ ಮಾಡಿಸಿಕೊಳ್ತಿದ್ದಾರೆ. ಆದ್ರೆ ಕೆಲವರು ಡೇಟಿಂಗ್‌ ಆಪ್‌ಗಳನ್ನ ಬಳಸಿಕೊಂಡು ತಮ್ಮ ನಗರ ವ್ಯಾಪ್ತಿಗಳನ್ನ ಹೊರತುಪಡಿಸಿ, ವಿಶ್ವದಾದ್ಯಂತ ಇರುವ ಜನರೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತಿದ್ದಾರೆ.

ಭಾರತಲ್ಲಿ ಎಲ್ಲೆಲ್ಲಿ ಡೇಟಿಂಗ್‌ ಬಳಕೆ ಹೆಚ್ಚಾಗಿದೆ?
ದೆಹಲಿಯ ಎನ್‌ಸಿಆರ್‌, ಮಹಾರಾಷ್ಟ್ರದ ಮುಂಬೈ, ಪುಣೆ, ಕರ್ನಾಟಕದ ಬೆಂಗಳೂರು, ಬಂಗಾಳದ ಕೋಲ್ಕತ್ತಾ ನಗರಗಳು ಡೇಟಿಂಗ್‌ ಆಪ್‌ಗಳ ಮೂಲಕ ಹೆಚ್ಚಾಗಿ ವಿದೇಶಿ ಸಂಬಂಧಗಳನ್ನು ಬಯಸುತ್ತಿವೆ. ಇತ್ತೀಚಿನ ಸಮೀಕ್ಷೆ ಪ್ರಕಾರ, ಗ್ಲೀಡನ್‌ ಬಳಕೆದಾರರ ಸಂಖ್ಯೆಯಲ್ಲಿ ಬೆಂಗಳೂರು 20% ಬಳಕೆದಾರರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಂಬೈ(19%), ಕೋಲ್ಕತ್ತಾ (18%), ದೆಹಲಿ (15%) ಇದೆ. ಬಳಕೆದಾರರ ಪೈಕಿ 58% ರಷ್ಟು ಮಂದಿ ಮಹಿಳೆಯರಿದ್ದಾರೆ. ಇವರು ಸುಮಾರು 45 ನಿಮಿಷಗಳ ಕಾಲ ಈ ಆ್ಯಪ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ.

ಈ ಸಮಸ್ಯೆ ತಪ್ಪಿಸಲು ಏನು ಮಾಡಬೇಕು?
ಪ್ರೀತಿ ಅನ್ನೋದೇ ಮಾಯೆ ಎನ್ನುವಂತೆ ಬೆಳಗ್ಗೆ ಪ್ರಪೋಸ್‌ ಮಾಡಿದ್ರೆ ಮಧ್ಯಾಹ್ನ ಮಜಾ ಮಾಡಿ ಸಂಜೆ ಬೇರೆಯಾಗುವ ಕಾಲ ಇದು. ಹೀಗಾಗಿ ಹಿರಿಯರು ಸಂಬಂಧಗಳ ನೈಜ ಬೆಲೆ ತಿಳಿಸಿಕೊಡಬೇಕಾಗಿದೆ. ತಾವು ದೂರವಿದ್ದರೂ ಸಂಬಂಧಗಳನ್ನ ಗಟ್ಟಿಯಾಗಿಟ್ಟುಕೊಳ್ಳುವ ಮೂಲಕ ಇಂದಿನ ಜನರೇಷನ್‌ಗೆ ಮಾದರಿಯಾಗಬೇಕಿದೆ. ಅದಕ್ಕಾಗಿ ಒಂದಿಷ್ಟು ಸಲಹೆಗಳೂ ಇಲ್ಲಿವೆ. ʼ

ಪ್ರೀತಿಗೆ ಡಿಜಿಟಲ್‌ ಟಚ್‌ ಇರಲಿ
ಇದು ಅಂಗೈಯಲ್ಲೇ ವಿಶ್ವವನ್ನೇ ಆಡಿಸುವಂತಹ ಸಮಯ. ಹೀಗಾಗಿ ನೀವು ದೂವಿದ್ದೀರಿ ಎಂದು ಖಂಡಿತವಾಗಿಯೂ ಚಿಂತೆ ಮಾಡಬೇಡಿ. ಇಲ್ಲಿ ನೀವು ಡಿಜಿಟಲ್ ಮಾಧ್ಯಮದ ಸಂಪೂರ್ಣ ಸಹಕಾರ ಪಡೆಯಿರಿ. ವೀಡಿಯೋ ಕಾಲ್ ನಿಂದ ಹಿಡಿದು ಪ್ರತಿನಿತ್ಯವೂ ಕರೆ ಮಾಡಿದರೆ ಸಂಬಂಧವು ಹಾಗೆ ಮುಂದುವರಿಯುವುದು. ಈಗ ಮೊಬೈಲ್ ಕರೆಯು ಅಷ್ಟು ದುಬಾರಿಯೇನಿಲ್ಲ. ಡಿಜಿಟಲ್ ಮಾಧ್ಯಮದ ನೆರವಿನಿಂದ ಸಂಗಾತಿಗೆ ನೀವು ಹತ್ತಿರದಲ್ಲೇ ಇರುವಂತಹ ಭಾವನೆ ಮೂಡಿಸಬಹುದು. ಇದರಿಂದ ಸಂಬಂಧಕ್ಕೂ ಬಲ ಬರುವುದು. ಹೀಗಾಗಿ ಜನರೇಷನ್‌ ಡಿಜಿಟಲ್‌ ಮಾಧ್ಯಮಗಳನ್ನೇ ದೂರ ಸಂಬಂಧಕ್ಕೆ ವೇದಿಕೆಯಾಗಿ ಮಾಡಿಕೊಂಡಿವೆ.

ಸಾಂದರ್ಭಿಕ ಚಿತ್ರ

ಅವರ ವೈಯಕ್ತಿಕ ಬದುಕಿಗೂ ಗೌರವ ನೀಡಿ
ನೀವು ಕೆಲವೊಂದು ಸಲ ಕರೆ ಸ್ವೀಕರಿಸದೆ ಇರಬಹುದು ಅಥವಾ ನಿಮ್ಮ ಸಂಗಾತಿಗೆ ಕರೆ ಸ್ವೀಕರಿಸಲು ಸಾಧ್ಯವಾಗದೆ ಇರಬಹುದು. ಇಂತಹ ಸಮಯದಲ್ಲಿ ನೀವು ಸಂಶಯಪಡಬಾರದು. ಸಂಗಾತಿಯು ನಿಮ್ಮನ್ನು ಎಷ್ಟು ಪ್ರೀತಿಸುವರು ಎಂದು ಗಮನಿಸುವುದು ಅತೀ ಅಗತ್ಯ. ನೀವು ಅವರ ಬದುಕಿಗೆ ಬೇಲಿ ಹಾಕಲು ಹೋಗಬಾರದು. ಸಂಬಂಧದಲ್ಲಿ ಆತ್ಮವಿಶ್ವಾಸದಿಂದ ಇರಬೇಕು ಮತ್ತು ಅವರಲ್ಲೂ ಇಂತಹ ಆತ್ಮವಿಶ್ವಾಸ ತುಂಬಬೇಕು.

ಉಡುಗೊರೆಗಳನ್ನು ಕಳುಹಿಸಿ
ನೀವು ಹಾಗೆ ಯಾವುದಾದರೂ ಒಳ್ಳೆಯ ಉಡುಗೊರೆ ಕಳುಹಿಸಿ ಅವರಿಗೆ ಸಪ್ರೈಸ್ ನೀಡಬಹುದು. ಇದು ಅದ್ಭುತವಾಗಿ ಕೆಲಸ ಮಾಡುವುದು. ನೀವು ಸಣ್ಣ ಉಡುಗೊರೆ ಅಥವಾ ಹೂವಿನ ಬೊಕ್ಕೆ ನೀಡಿದರೂ ಅದು ಅದ್ಭುತವಾಗಿ ಕೆಲಸ ಮಾಡುವುದು. ನಿಮ್ಮ ಪ್ರಯತ್ನ ಹಾಗೂ ಪ್ರೀತಿಗೆ ಅವರು ಸೋಲುವರು.

ಭವಿಷ್ಯಕ್ಕಾಗಿ ಯೋಜನೆ ರೂಪಿಸಿ
ಭವಿಷ್ಯಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳುವುದು ಸಂಬಂಧದಲ್ಲೇ ಇದ್ದೇ ಇರುವುದು. ಸಂಗಾತಿಯು ನಿಮ್ಮಿಂದ ದೂರವಿರುವರು ಎಂದು ಭಾವಿಸದೆ, ಅವರೊಂದಿಗೆ ಮಾತಿನಾಡುವ ವೇಳೆ ಭವಿಷ್ಯದ ಯೋಜನೆ ಹಾಕಿಕೊಳ್ಳಿ. ನೀವು ಹೋಗಬಹುದಾದ ಜಾಗ ಮತ್ತು ಇತರ ಸಾಹಸಗಳ ಬಗ್ಗೆ ಚರ್ಚೆ ಮಾಡಿ. ಇದರಿಂದ ನಿಮ್ಮ ಸಂಬಂಧಕ್ಕೆ ಬಲ ಬರುವುದು.

ಲೈಂಗಿಕತೆ ಏಕೆ ಮುಖ್ಯ?
* ಇದು ಹೆಣ್ಣು-ಗಂಡಿನ ನಡುವೆ ಬಾಂಧವ್ಯ ಬೆಸೆಯುತ್ತದೆ
* ಸಂಗಾತಿಯೆಡೆಗೆ ನಿಮ್ಮ ಪ್ರೀತಿ ಹಾಗೂ ಸೆಳೆತ ಎಷ್ಟಿದೆ ಎಂದು ನಿರ್ಧರಿಸುತ್ತದೆ.
* ಲೈಂಗಿಕ ಅತೃಪ್ತಿಯಿಂದ ದಾಂಪತ್ಯದಲ್ಲಿ ಬಿರುಕುಂಟಾಗುವುದನ್ನು ತಡೆಯುತ್ತದೆ.
* ಸಂಬಂಧದಲ್ಲಿ ಭದ್ರತೆ ಭಾವನೆ ಮೂಡಿಸುತ್ತದೆ
* ಇದು ಮನಸ್ಸು ಹಾಗೂ ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ
* ಅಲ್ಲದೆ ಮಗುವನ್ನು ಪಡೆಯಬೇಕೆಂದರೆ ಸೆಕ್ಸ್ ಅತ್ಯವಶ್ಯಕ.

ದಂಪತಿಗಳು ಸಕ್ರೀಯವಾಗಿದ್ದರೆ ದೊರೆಯುವ ಪ್ರಯೋಜನಗಳೇನು?
* ಮನಸ್ಸಿಗೆ ಖುಷಿ ಸಿಗುವುದು ಲೈಂಗಿಕ ಕ್ರಿಯೆ ನಡೆಸಿದಾಗ. ದೇಹದಲ್ಲಿ ಹಲವು ಬಗೆಯ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತದೆ
* ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
* ನಿಮ್ಮ ದೇಹವನ್ನು ನೀವು ಹೆಚ್ಚಾಗಿ ಪ್ರೀತಿಸುವಂತೆ ಮಾಡುತ್ತದೆ.
* ನಿಮ್ಮ ಸಂಗಾತಿಯ ಆರೈಕೆ ಮಾಡುವಿರಿ.
* ಇದು ಮಾನಸಿಕ ಒತ್ತಡವನ್ನು ಹೊರ ಹಾಕುತ್ತದೆ.

ಯಾವಾಗ ಸೆಕ್ಸ್ ಬೇಡ?
ಕೆಲವು ಸಂದರ್ಭಗಳಲ್ಲಿ, ನೀವು ಕೆಲವು ಚಟುವಟಿಕೆಗಳನ್ನು ಬಿಟ್ಟುಬಿಡಬೇಕಾಗಬಹುದು, ಅಥವಾ ಲೈಂಗಿಕತೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಬಹುದು.
* ಗರ್ಭಾವಸ್ಥೆಯಲ್ಲಿ ರಕ್ತಸ್ರಾವವನ್ನು ಅನುಭವಿಸಿದಾಗ.
* ಗರ್ಭಪಾತದ ಅಪಾಯವನ್ನು ಹೊಂದಿದ್ದಾಗ.
* ಗರ್ಭಕಂಠದ ದೌರ್ಬಲ್ಯದ ಹಿನ್ನೆಲೆ ಹೊಂದಿದ್ದರೆ ಅಥವಾ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ್ದರೆ.
* ಹೆಚ್ಚಿನ ಬಿಪಿ ಅಥವಾ ಡಯಾಬಿಟಿಸ್ ಹೊಂದಿದ್ದರೆ.
* ನೀವು ಫಲವತ್ತತೆ ಚಿಕಿತ್ಸೆಗಳಿಗೆ ಒಳಗಾಗಿದ್ದರೆ, ಅಥವಾ ಹೊಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಶಿಶುಗಳಿದ್ದರೆ.
* ನೀವು ಅಥವಾ ನಿಮ್ಮ ಪತಿ ಯಾವುದಾದರೂ ಲೈಂಗಿಕವಾಗಿ ಹರಡುವ ಸೋಂಕು ಹೊಂದಿದ್ದರೆ.

Share This Article