ಕನ್ನಂಬಾಡಿ ಶಿಲಾನ್ಯಾಸಲ್ಲಿ ಟಿಪ್ಪು ಹೆಸರು ಬಂದಿದ್ದು ಹೇಗೆ – ಸಂಶೋಧಕರ ಚಿಕ್ಕರಂಗೇಗೌಡ ಹೇಳಿದ್ದು ಏನು?

Public TV
1 Min Read

ಬೆಂಗಳೂರು: ಕನ್ನಂಬಾಡಿ (Kannambadi Dam) ಕಟ್ಟಲು ಟಿಪ್ಪು ಸುಲ್ತಾನ್ (Tipu Sultan) ಅಡಿಗಲ್ಲು ಹಾಕಿದ್ದರು ಎಂಬ ಸಚಿವ ಮಹದೇವಪ್ಪ (Mahadevappa) ಹೇಳಿಕೆಗೆ ಇತಿಹಾಸ ತಜ್ಞ, ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ (Talakadu Chikkarangegowda) ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವರ ಅಕ್ಕಪಕ್ಕ ಇದ್ದವರು ಸರಿಯಾದ ಮಾಹಿತಿ ನೀಡಿಲ್ಲ. ಸಚಿವರಿಗೆ ಇತಿಹಾಸದ ಬಗ್ಗೆ ಚೆನ್ನಾಗಿ ಗೊತ್ತಿದೆ. ಕನ್ನಂಬಾಡಿಯ ಸಂಪೂರ್ಣ ಕ್ರೆಡಿಟ್ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲಬೇಕು ಎಂದು ಹೇಳಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ (Nalwadi Krishnaraja Wadiyar) ಅಣೆಕಟ್ಟು ಕಟ್ಟಲು ಆರ್ಥಿಕ ಸಮಸ್ಯೆ ಬಂದಾಗ ಅವರ ತಾಯಿ, ಪತ್ನಿ ಒಡೆವೆಗಳನ್ನು ಮಾರಿ ನೀರಾವರಿ ಯೋಜನೆಗೆ ಸಹಕರಿಸಿದ್ದರು ಎಂದು ತಿಳಿಸಿದರು.  ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಸಚಿವ ಮಹದೇವಪ್ಪ

 

ಶಿಲಾನ್ಯಾಸದಲ್ಲಿ ಟಿಪ್ಪು ಹೆಸರು ಯಾಕೆ ಇದೆ ಅಂದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಕ್ಕಿಂತ ಹಿಂದೆ ಟಿಪ್ಪು ಸುಲ್ತಾಲ್‌ಗೆ ಅಣೆಕಟ್ಟು ಕಟ್ಟುವ ಕನಸಿತ್ತು. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಉದಾರತೆಯಿಂದ ಶಿಲಾನ್ಯಾಸದ ಬೋರ್ಡ್‌ಗೆ ಟಿಪ್ಪು ಹೆಸರು ಹಾಕಿಸಿದ್ದರು. ಇದನ್ನೇ ನೋಡಿ ಕೆಲವರು ಕನ್ನಂಬಾಡಿ ಕಟ್ಟಿಸಿದ್ದು ಟಿಪ್ಪು ಅಂದು ಕೊಂಡಿದ್ದಾರೆ ಎಂದು ವಿವರಣೆ ನೀಡಿದರು.

  

Share This Article