ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

Public TV
2 Min Read

– ಪತಿಯೇ ಕ್ರಿಮಿನಾಶಕ ಕುಡಿಸಿ ಕೊಲೆ ಮಾಡಿರುವ ಆರೋಪ

ಆನೇಕಲ್: 12 ವರ್ಷಗಳ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ಆ ಜೋಡಿ ಮದ್ವೆಯಾಗಿತ್ತು (Marriage). ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದರು. ಸಂಸಾರ ಸುಃಖವಾಗಿತ್ತು ಅನ್ನುವಾಗಲೇ ದುರಂತ ನಡೆದುಬಿಟ್ಟಿದೆ. ಅದೊಂದು ವಿಚಾರ ಆ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿ, ಒಬ್ಬರ ಸಾವಿಗೂ ಕಾರಣವಾಗಿದೆ.

ದುರಂತದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ ದೀಪು, ಹಲ್ಲೆ ಮಾಡಿದ ಪತಿ ಉದಯ್‌. ಮೂಲತಃ ಪಿರಿಯಾಪಟ್ಟಣದ (Piriyapatna) ನಿವಾಸಿಯಾದ ದೀಪು 12 ವರ್ಷಗಳ ಹಿಂದೆ ಗುರು ಹಿರಿಯರ ಸಮ್ಮುಖದಲ್ಲಿ ಉದಯ್‌ ಎಂಬಾತನನ್ನ ವಿವಾಹವಾಗಿದ್ದಳು. ದಂಪತಿಗೆ ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದರು. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದ್ರೆ ಇತ್ತೀಚೆಗೆ ಉದಯ್-ದೀಪಾ ದಂಪತಿ ನಡುವೆ ಬ್ಯೂಟಿ ಪಾರ್ಲರ್ ಆಂಟಿ ಎಂಟ್ರಿ ಕೊಟ್ಟಿದ್ದು, ಸಂಸಾರಕ್ಕೆ ಹುಳಿ ಹಿಂಡಿತ್ತು. ಇದನ್ನೂ ಓದಿ: Ramanagara | ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ – ಇಬ್ಬರ ಮೇಲೆ ಪ್ರಕರಣ ದಾಖಲು

ಚಾಮುಂಡಿಬೆಟ್ಟದಲ್ಲಿ ಮಾತುಕತೆ ನಡೆದು ಗಂಡ ಉದಯ್ ಬ್ಯೂಟಿ ಪಾರ್ಲರ್ ಆಂಟಿಗೆ (Beauty Parlour Aunty) ಕಟ್ಟಿದ ತಾಳಿ ತೆಗೆಸಿದ್ರು. ಆದರೂ ಸಂಸಾರದ ತಾಳ ಮೇಳ ಸರಿಯಾಗಲಿಲ್ಲ. ನಿತ್ಯ ಮನೆಯಲ್ಲಿ ಆಂಟಿ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ ಹೊಡೆದಾಟ ಕಾಮನ್ ಆಗಿತ್ತು. ಇದೇ ತಿಂಗಳು 6ನೇ ತಾರೀಖು ಆಂಟಿ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಗಂಡ ಉದಯ್ ಹಲ್ಲೆ ನಡೆಸಿ ನೀನು ಎಲ್ಲಾದರೂ ಹೋಗಿ ಸಾಯಿ ಎಂದು ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಪತ್ನಿ ದೀಪಾ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಚಿಕಿತ್ಸೆ ಫಲಕಾರಿಯಾಗದೇ 9ನೇ ತಾರೀಖು ನಗರದ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಗಂಡು ಹುಟ್ಟಲಿಲ್ಲ ಅಂತ ಬೇಸರಗೊಂಡು ಹೆಣ್ಣುಮಗಳಿಗೆ ವಿಷವಿಕ್ಕಿ ಕೊಂದ ಸೇನಾ ಸಿಬ್ಬಂದಿ

ಇತ್ತ ದೀಪಾಳ ಪೋಷಕರು ಕ್ರಿಮಿ ನಾಶಕ ಕುಡಿಸಿ ಮಗಳನ್ನ ಉದಯ್ ಕೊಂದಿರುವುದಾಗಿ ಆರೋಪಿಸಿದ್ದಾತೆ. ಮಹಿಳೆಯೊಬ್ಬಳ ಅಕ್ರಮ ಸಂಬಂಧ ವಿಚಾರಕ್ಕೆ ಪದೇ ಪದೇ ಹಲ್ಲೆ ನಡೆಸುತ್ತಿದ್ದ ಉದಯ್‌. ಕಿವಿ ಓಲೆ ಕೂಡ ಹಲ್ಲೆ ವೇಳೆ ಮುರಿದು ಹೋಗಿತ್ತು. ಬದುಕಲು ಸಾಧ್ಯವಿಲ್ಲ ಎಂದಾಗ ಬುದ್ಧಿ ಮಾತು ಹೇಳಿದ್ದೆವು. ಆದರೂ ಮನೆಯ ವಿಚಾರ ನಿಮ್ಮ ಕುಟುಂಬದವರಿಗೆ ತಿಳಿಸುತ್ತಿಯಾ ಎಂದು ಹಲ್ಲೆ ನಡೆಸಿದ್ದಾನೆ. ಹಣಕ್ಕಾಗಿಯು ಸಾಕಷ್ಟು ಪೀಡಿಸಿದ್ದಾನೆ. ಕೊನೆಗೆ ಕ್ರಿಮಿನಾಶಕ ಕುಡಿದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಕೊನೆ ಕ್ಷಣದಲ್ಲಿ ನಮಗೆ ತಿಳಿಸಿದ್ರು ಮಗಳ ಗಂಡ ಉದಯ್ ವಿಶ ಕುಡಿಸಿ ಕೊಂದಿರುವ ಸಾಧ್ಯತೆ ಇದೆ. ಪೊಲೀಸರು ನ್ಯಾಯ ಕೊಡಿಸಬೇಕು ಎಂದು ಮೃತ ದೀಪಾ ಕುಟುಂಬದವರು ಆಗ್ರಹಿಸಿದ್ದಾರೆ.

ಸದ್ಯ ಮೃತ ದೀಪಾ ತಾಯಿ ಸುಗುಣಮ್ಮ ದೂರು ಆಧರಿಸಿ ಆತ್ಮಹತ್ಯೆ ಪ್ರಚೋದನೆ ಸೇರಿದಂತೆ ಜಾಮೀಜು ರಹಿತ ಸೆಕ್ಷನ್ ಅಡಿಯಲ್ಲಿ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ರು. ಆರೋಪಿ ಉದಯ್‌ನನ್ನ ವಶಕ್ಕೆ ಪಡೆದು ಬಳಿಕ ಬಿಟ್ಟು ಕಳುಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ನಾಗ್ಪುರ | ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನ ಬೈಕ್‌ನಲ್ಲೇ ಸಾಗಿಸಿದ ಪತಿ

Share This Article