ಮನೆಯ ಎರಡನೇ ಮಹಡಿಯಿಂದ ಬಿದ್ದು ಗೃಹಿಣಿ ಅನುಮಾನಾಸ್ಪದ ಸಾವು – ಪತಿ ಪರಾರಿ

Public TV
1 Min Read

ರಾಯಚೂರು: ಮನೆಯ ಎರಡನೇ ಮಹಡಿಯಿಂದ ಬಿದ್ದು ಗೃಹಿಣಿಯೊಬ್ಬಳು (House Wife) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ರಾಯಚೂರು (Raichur) ಜಿಲ್ಲೆಯ ಬದ್ರಿನಾಥ ಕಾಲೋನಿಯಲ್ಲಿ ನಡೆದಿದೆ.

ಶಿಲ್ಪಾ (28) ಮೃತ ಮಹಿಳೆ. ಈಕೆ ಮನೆಯ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತಳ ಪತಿ ಶರತ್ ಹಾಗೂ ಅತ್ತೆ-ಮಾವ ಸೇರಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಶಿಲ್ಪಾ ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಕೂದಲು ವ್ಯಾಪಾರಕ್ಕೆ ತೆರಳಿದ್ದ ಬಾಲಕನ ಬರ್ಬರ ಹತ್ಯೆ

ಘಟನೆ ಹಿನ್ನೆಲೆ ಆಕ್ರೋಶದಲ್ಲಿ ಶರತ್ ತಂದೆಗೆ ಶಿಲ್ಪಾ ಸಂಬಂಧಿಕರು ಥಳಿಸಿದ್ದಾರೆ. ಮಂಗಳವಾರ ರಾತ್ರಿ ಜಗಳ ಮಾಡಿ ಎರಡನೇ ಮಹಡಿಯಿಂದ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. 2022ರ ಜೂನ್‌ನಲ್ಲಿ ಆಂಧ್ರಪ್ರದೇಶ ಆದೋನಿಯಲ್ಲಿ ಶಿಲ್ಪಾ ಹಾಗೂ ಶರತ್ ಮದುವೆಯಾಗಿತ್ತು. ಮದುವೆಯಾದಾಗಿನಿಂದಲೂ ಪತಿ-ಪತ್ನಿ ನಡುವೆ ಹೊಂದಾಣಿಕೆಯಾಗದೇ ಆಗಾಗ ಜಗಳಗಳು ನಡೆಯುತ್ತಿದ್ದವು. ಈ ಕುರಿತು ಕುಟುಂಬದ ಹಿರಿಯರು ಸಂಧಾನ ಮಾಡಿದ್ದರು. ಆದರೂ ಕೂಡ ಸಮಸ್ಯೆಗಳು ಬಗೆಹರಿದಿರಲಿಲ್ಲ ಎಂದು ಆಂಧ್ರ ಮೂಲದ ಶಿಲ್ಪಾ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಂತರಗಂಗೆ ಬೆಟ್ಟದಲ್ಲಿ ಪಾಕ್ ಬಾವುಟ ಹೋಲುವ ಪೇಂಟಿಂಗ್ – ಆರೋಪಿ ಅರೆಸ್ಟ್

ಘಟನೆಯ ಬಳಿಕ ಶಿಲ್ಪಾ ಪತಿ ಶರತ್ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಪತಿ ಬರುವವರೆಗೂ ಆಕೆಯ ಮೃತದೇಹ ಎತ್ತಲು ಬಿಡಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ. ಇದನ್ನೂ ಓದಿ: ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್