Tumakuru | ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

Public TV
1 Min Read

ತುಮಕೂರು: ಗಂಡನ ಕಿರುಕುಳಕ್ಕೆ (Harassment) ಬೇಸತ್ತ ಗೃಹಿಣಿ ನೇಣಿಗೆ ಶರಣಾದ ಘಟನೆ ತುಮಕೂರು (Tumakuru) ನಗರದಲ್ಲಿ ನಡೆದಿದೆ.

23 ವರ್ಷದ ಸುಷ್ಮಿತಾ ಮೃತ ದುರ್ದೈವಿ. ರಾಮನಗರ ಜಿಲ್ಲೆಯ ಮಾಗಡಿಯ ಸುಷ್ಮಿತಾ ಕೊರಟಗೆರೆ (Koratagere) ಮೂಲದ ಮೋಹನ್‌ನನ್ನು ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ತುಮಕೂರಿನ ಮಹೇಂದ್ರ ಶೋ ರೂಂನಲ್ಲಿ ಕೆಲಸ ಮಾಡುತ್ತಿರುವ ಮೋಹನ್ ಹಣ ಮತ್ತು ಸೈಟ್‌ಗಾಗಿ ಪತ್ನಿಯನ್ನು ಪೀಡಿಸುತಿದ್ದ ಎನ್ನಲಾಗಿದೆ. ಗಂಡ ಮೋಹನ್, ಅತ್ತೆ ಮತ್ತು ಮಾವನ ಜೊತೆ ಸೇರಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ಗಂಟೆಗಟ್ಟಲೆ ಕಾದು ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ

ಘಟನಾ ಸಂಬಂಧ ಮಹಿಳಾ ಠಾಣಾ ಪೊಲೀಸರು ಪತಿ ಮೋಹನ್ ಸೇರಿ ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವಿಲ್ಸನ್ ಗಾರ್ಡನ್ ನಿಗೂಢ ಬ್ಲಾಸ್ಟ್ – ಗಾಯಗೊಂಡಿದ್ದ ತಾಯಿ, ಮಗಳು ಸಾವು

Share This Article