ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

Public TV
2 Min Read

ಆನೇಕಲ್: ನೂರಾರು ಕುಟುಂಬಗಳು ವಾಸಿಸುತ್ತಿರುವ ಪ್ರತಿಷ್ಠಿತ ಲೇಔಟ್‌ನಲ್ಲಿ ಕಳೆದ(ಶನಿವಾರ) ರಾತ್ರಿ ಕಳ್ಳತನ ಮಾಡಲು ದರೋಡೆಕೋರ ಬಂದಿದ್ದಾನೆ. ಲೇಔಟ್ ಕಾಂಪೌಂಡ್ ಹಾರಿ ಒಳನುಗ್ಗಿದ ಕಳ್ಳ ಮನೆಯ ಬಾಗಿಲು ಒಡೆದು ರಾಬರಿ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಎಚ್ಚರಗೊಂಡ ಮನೆಯವರು ಸಿನಿಮೀಯ ರೀತಿಯಲ್ಲಿ ದರೋಡೆಕೋರನ ಬಳಿ ಇದ್ದ ಲಾಂಗು, ಮಚ್ಚುಗಳನ್ನ ಕಸಿದು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಏನಾಯಿತು?
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಖಾಸಗಿ ಬಡಾವಣೆಯಲ್ಲಿ ಬೃಹತ್ ಗಾತ್ರದ ಕಾಂಪೌಂಡ್ ಹಾಕಲಾಗಿತ್ತು. ಸೆಕ್ಯುರಿಟಿ ಗಾರ್ಡ್‍ಗಳ ಭದ್ರತೆ ಸಹ ಹೆಚ್ಚಾಗಿತ್ತು. ಈ ಬಡಾವಣೆಯೊಳಗೆ 3:45 ರ ಸಮಯದಲ್ಲಿ ಕಾಂಪೌಂಡ್ ಹಾರಿ ಕಳ್ಳನೊಬ್ಬ ಒಳಗೆ ಬಂದಿದ್ದಾನೆ. ಒಳಗಿನ ʼವಿಲ್ಲಾʼ ಒಂದರ ಮೆಟ್ಟಿಲು ಹತ್ತಿ ಮೇಲೆ ಮಹಡಿಯಲ್ಲಿದ್ದ ಬಾಗಿಲನ್ನು ಕಬ್ಬಿಣದ ಸರಳಿನಿಂದ ಒಡೆದು ಒಳಗೆ ನುಗ್ಗಲು ಯತ್ನಿಸಿದ್ದಾನೆ. ಇದನ್ನೂ ಓದಿ: ಹನುಮಾನ್ ಮೆರವಣಿಗೆಗೆ ಪುಷ್ಪವೃಷ್ಟಿ ಸುರಿಸಿದ ಮುಸ್ಲಿಮರು

ಬಾಗಿಲು ಒಡೆದು ಒಳ ಬರುತ್ತಿದ್ದ ಶಬ್ದ ಕೇಳುತ್ತಿದ್ದಂತೆ ಮನೆಯಲ್ಲಿದ್ದ ಮಹಿಳೆ ಬಾಗಿಲ ಬಳಿ ಬಂದು ಆತನ ಬಳಿಯಿದ್ದ ಕಬ್ಬಿಣ ಗಮನಿಸಿದ್ದಾಳೆ. ಈ ವೇಳೆ ಆಕೆಯನ್ನು ಗಮನಿಸಿದ ಕಳ್ಳ ಆಕೆ ಮೇಲೆ ದಾಳಿ ಮಾಡಲು ಮುಂದಾಗುತ್ತಾನೆ. ಮನೆಯ ಕೆಳಮಹಡಿಯಲ್ಲಿ ಮಲಗಿದ್ದ ವಾಮದೇವ್ ಶರ್ಮಾ ಮೇಲೆ ಓಡಿ ಬಂದಿದ್ದು, ಕೈಯಲ್ಲಿ ಲಾಂಗು ಹಿಡಿದು ಕಬ್ಬಿಣದ ರಾಡ್ ಮೂಲಕ ಸೊಸೆಗೆ ಹಲ್ಲೆ ಮಾಡುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ಬಲಗೈಯಲ್ಲಿ ಆತ ಹಿಡಿದಿದ್ದ ಲಾಂಗ್ ಕಸಿದುಕೊಳ್ಳಲು ಯತ್ನಿಸಿದ್ದಾರೆ.

ಬೆರಳು ಕತ್ತರಿಸು ಹಂತದಲ್ಲಿತ್ತು
ಈ ವೇಳೆ ಶರ್ಮಾ ಅವರ ಬಲಗೈ ಬೆರಳುಗಳು ಲಾಂಗ್‍ನಿಂದ ಕತ್ತರಿಸುವ ಹಂತಕ್ಕೆ ಬಂದಿದ್ದರೂ ಸಹ ಮನೆಯಲ್ಲಿ ಮಗು, ಸೊಸೆ ಹಾಗೂ ಮಗನಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಕಳ್ಳನ ಜೊತೆ ಹೋರಾಟ ನಡೆಸಿದ್ದಾರೆ. ತಮ್ಮ ಮನೆಯ ಅಕ್ಕಪಕ್ಕದಲ್ಲಿ ಇದ್ದವರು ಶರ್ಮ ಅವರು ಕೂಗಾಡಿ ಕೊಳ್ಳುತ್ತಿರುವ ಶಬ್ದ ಕೇಳಿ ಓಡಿ ಬಂದಿದ್ದಾರೆ. ಬಳಿಕ ಸ್ಥಳೀಯರು ಸೇರಿ ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಲು ಮುಂದಾದಾಗ ಕಿರಾತಕ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ. ಇದನ್ನೂ ಓದಿ: ಅಗೌರವ ತೋರಿದ ಅಧಿಕಾರಿಗಳಿಗೆ ನಡುರಸ್ತೆಯಲ್ಲೇ ತರಾಟೆ ತೆಗೆದುಕೊಂಡ ಮೇಯರ್ 

ಬಡಾವಣೆಯಲ್ಲಿದ್ದ ಕಾವಲುಗಾರ ಹಾಗೂ ಸ್ಥಳೀಯರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸರ್ಜಾಪುರ ಇನ್‍ಸ್ಪೆಕ್ಟರ್ ರಾಘವೇಂದ್ರ ಹಾಗೂ ಸಿಬ್ಬಂದಿಗಳನ್ನು ಬಂಧಿಸಲು ತೆರಳಿದಾಗಲು ಪೊಲೀಸರಿಂದಲೂ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಬೆನ್ನು ಹತ್ತಿ ಬಂಧಿಸಿ ಠಾಣೆಗೆ ಕರೆತಂದಿದ್ದು, ದೂರು ದಾಖಲಿಸಿಕೊಂಡು ವಿಚಾರಣೆಯನ್ನ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *