ಭಾನುವಾರವೂ ಹೌಸ್‌ಫುಲ್‌ – ಬೆಂಗಳೂರಿನಲ್ಲಿ ದಾಖಲೆ ಬರೆದ ಕಾಂತಾರ

Public TV
1 Min Read

ಬೆಂಗಳೂರು: ರಿಷಭ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಕಾಂತಾರ: ಚಾಪ್ಟರ್‌ ಒನ್‌ (Kantara: Chapter 1) ಬೆಂಗಳೂರಿನಲ್ಲಿ (Bengaluru) ದಾಖಲೆ (Record) ಬರೆದಿದೆ.

ಬಿಡುಗಡೆಯಾದ 4ನೇ ದಿನ ಒಟ್ಟು 1,178 ಪ್ರದರ್ಶನ ಕಾಣುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ತನ್ನದೇ ದಾಖಲೆಯನ್ನು ಹಿಂದಿಕ್ಕಿದೆ. ಬಿಡುಗಡೆಯಾದ ಮೂರನೇ ದಿನ ಬೆಂಗಳೂರಿನಲ್ಲಿ 1052 ಪ್ರದರ್ಶನ ಕಂಡಿತ್ತು.

ಅಕ್ಟೋಬರ್‌ 2 ರಂದು ಕಾಂತಾರ ಬಿಡುಗಡೆಯಾಗಿದ್ದು ದಿನದಿಂದ ದಿನಕ್ಕೆ ತನ್ನ ಪ್ರದರ್ಶನವನ್ನು ಏರಿಸುತ್ತಾ ಸಾಗಿದೆ. ಇದನ್ನೂ ಓದಿ: ದೇಶದ ಎಲ್ಲಾ ನಿರ್ಮಾಪಕರು ಈ ಪ್ರಯತ್ನ ನೋಡಿ ನಾಚಿಕೆಪಡಬೇಕು; ರಿಷಬ್ ಕೊಂಡಾಡಿದ ವರ್ಮಾ

 

ಯಾವ ದಿನ ಎಷ್ಟು ಪ್ರದರ್ಶನ?
ಮೊದಲ ದಿನ – 1022
ಮೂರನೇ ದಿನ – 1052
ನಾಲ್ಕನೇ ದಿನ – 1178

ಈ ವರ್ಷ ಬಿಡುಗಡೆಯಾದ ರಜನಿಕಾಂತ್‌ ಅಭಿನಯದ ಕೂಲಿ ಮೊದಲ ದಿನ 905 ಪ್ರದರ್ಶನ ಕಂಡಿದ್ದರೆ, ಯಶ್‌ ನಟಿಸಿದ ಕೆಜಿಎಫ್‌ ಚಾಪ್ಟರ್‌ 2 ಬಿಡುಗಡೆಯಾದ ಮೊದಲ ದಿನ 885 ಪ್ರದರ್ಶನ ಕಂಡಿತ್ತು. ಇದನ್ನೂ ಓದಿ:  ಕೇರಳದಲ್ಲಿ ‌ಕಾಂತಾರ ಭರ್ಜರಿ ಪ್ರದರ್ಶನ – ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಕನ್ನಡ ಸಿನಿಮಾ ದಾಖಲೆ

ಬೆಂಗಳೂರಿನಲ್ಲಿ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗೆ ಡಬ್ಬಿಂಗ್‌ ಆಗಿರುವ ಕಾಂತಾರ ಸಿನಿಮಾ ಬಿಡುಗಡೆಯಾಗಿರುವ ಕಾರಣ ಪ್ರದರ್ಶನ ಏರಿಕೆ ಕಂಡಿದೆ.

ದಸರಾ ದೀರ್ಘ ರಜೆ ಇದ್ದ ಕಾರಣ ಹಲವು ಸಿನಿಮಾ ಅಭಿಮಾನಿಗಳು ಬೆಂಗಳೂರನ್ನು ತೊರೆದಿದ್ದರು. ಈಗ ಮರಳಿ ನಗರಕ್ಕೆ ಬಂದ ಕಾರಣ ಪ್ರದರ್ಶನವೂ ಹೆಚ್ಚಾಗಿದೆ. ಬೆಳಗ್ಗಿನ ಆರಂಭಿಕ ಶೋದಿಂದ ಹಿಡಿದು ರಾತ್ರಿಯ ಕೊನೆಯ ಶೋ ಸಹ ಭರ್ತಿಯಾಗಿರುವ ಕಾರಣ ಭಾನುವಾರ ಬೆಂಗಳೂರಿನಲ್ಲಿ ಕಾಂತಾರ ಭರ್ಜರಿ ಕಲೆಕ್ಷನ್‌ ಮಾಡಲಿದೆ.

Share This Article