ಮಳೆಗೆ ಮನೆಯ ಮೇಲ್ಛಾವಣಿ ಕುಸಿತ – ವೃದ್ಧ ದಂಪತಿಗೆ ಗಂಭೀರ ಗಾಯ

Public TV
1 Min Read

ದಾವಣಗೆರೆ: ನಿರಂತರ ಮಳೆಯಿಂದ (Rain) ಮನೆಯ ಮೇಲ್ಛಾವಣಿ ಕುಸಿದು (House Collapse) ವೃದ್ಧ ದಂಪತಿ ಗಾಯಗೊಂಡ ಘಟನೆ ದಾವಣಗೆರೆಯ (Davanagere) ಮೆಹಬೂಬ್ ನಗರದಲ್ಲಿ ನಡೆದಿದೆ.

ಗಾಯಗೊಂಡವರನ್ನು ಶೇಕ್ ಬುಡೇನ್ ಸಾಬ್ (86), ನೂರ್ ಜಹಾನ್ (76) ಎಂದು ಗುರುತಿಸಲಾಗಿದೆ. ವೃದ್ಧ ದಂಪತಿ ಮನೆಯ ಒಳಗೆ ಇದ್ದಾಗಲೇ ಮನೆಯ ಮೇಲ್ಛಾವಣಿ ಕುಸಿದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ವೃದ್ಧರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಕಾರವಾರ| ಕೂಲಿ ಹಣ ಕೊಡಲಿಲ್ಲ ಅಂತ ಸಲಾಕೆಯಿಂದ ಹೊಡೆದು ವ್ಯಕ್ತಿ ಕೊಲೆ

ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಬೆಂಗಳೂರು | ನಿಗೂಢ ಸ್ಫೋಟ – ಬಾಲಕ ಸಾವು, 8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

Share This Article