ಬೆಂಗಳೂರು: ಜಿಎಸ್‍ಟಿ ತೆರಿಗೆ ಇಳಿಕೆಯಾಗಿದ್ರೂ ಹೋಟೆಲ್ ತಿಂಡಿ ತಿನ್ನಂಗಿಲ್ಲ. ಹೋಟೆಲ್ ಆಹಾರಗಳ ಮೇಲಿದ್ದ ಶೇಕಡಾ 12 ಮತ್ತು 18ರಷ್ಟು ತೆರಿಗೆ ಶೇಕಡಾ 5ಕ್ಕೆ ಇಳಿಕೆಯಾಗಿದೆ. ಆದರೆ ಹೋಟೆಲ್ ಮಾಲೀಕರು ಹೊಸ ರಾಗ ತೆಗೆದಿದ್ದಾರೆ.
ಹೋಟೆಲ್ ನವರಿಗೆ ಇಲ್ಲಿಯವರೆಗೆ ತೆರಿಗೆ ವಿನಾಯಿತಿ ಸಿಗುತ್ತಿದ್ದ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ಮೋದಿ ಸರ್ಕಾರ ಕೊಕ್ಕೆ ಹಾಕಿದೆ. ಇನ್ ಪುಟ್ ಟ್ಯಾಕ್ಸ್ ಲಾಭವನ್ನು ಹೋಟೆಲ್ ನವರು ಗ್ರಾಹಕರಿಗೆ ವರ್ಗಾಯಿಸಲ್ಲ ಅಂತಾ ತೆಗೆದು ಹಾಕಾಲಾಗಿದೆ. ಇದು ಹೋಟೆಲ್ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೇ ಹೋಟೆಲ್ ನಡೆಸೋದಕ್ಕೆ ಸಾಧ್ಯವಿಲ್ಲ ಅನ್ನೋದು ಹೋಟೆಲ್ ಮಾಲೀಕರ ವಾದವಾಗಿದೆ. ಜೊತೆಗೆ ತಿಂಡಿ ದರ ಏರಿಕೆ ಮಾಡಬೇಕಾ ಅಥವಾ ಇಳಿಕೆ ಮಾಡಬೇಕಾ ಅಂತಾ ಅವರು ಗೊಂದಲದಲ್ಲಿದ್ದಾರೆ. ದರ ಹೆಚ್ಚು ಮಾಡಿದ್ರೆ ಗ್ರಾಹಕರಿಗೆ ಜಿಎಸ್ ಟಿ ತೆರಿಗೆ ಇಳಿಕೆಯ ಲಾಭ ಸಿಗಲ್ಲ ಎಂಬುದಾಗಿ ಹೊಟೇಲ್ ಮಾಲೀಕರು ಇದೀಗ ಹೇಳುತ್ತಿದ್ದಾರೆ.