ಕನ್ನಡಿಗರಿಗೆ ಅಪಮಾನ – ಜಿಎಸ್‌ ಸೂಟ್ಸ್‌ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ

Public TV
1 Min Read

ಬೆಂಗಳೂರು: ಕನ್ನಡಿಗರನ್ನು ಅವಮಾನಿಸಿದ ಆರೋಪದಲ್ಲಿ ಬೆಂಗಳೂರಿನ ಕೋರಮಂಗಲದ ಜಿ.ಎಸ್‌ ಸೂಟ್‌ ಹೋಟೆಲ್‌ (Hotel Gs Suites) ಅನ್ನು ಸೀಜ್‌ ಮಾಡಲಾಗಿದೆ. ಪ್ರಕರಣದಲ್ಲಿ ಮ್ಯಾನೇಜರ್‌ ಬಂಧಿಸಲಾಗಿದೆ.

ಮ್ಯಾನೇಜರ್ ಸರ್ಫಜ್ ಬಂಧನವಾಗಿದೆ. ಮ್ಯಾನೇಜರ್ ಅರೆಸ್ಟ್ ಮಾಡಿ ಜಿ.ಎಸ್ ಸೂಟ್ ಹೋಟೆಲ್‌ಗೆ ಮಡಿವಾಳ ಪೊಲೀಸರು ಬೀಗ ಹಾಕಿದ್ದಾರೆ. ಹೊಟೇಲ್ ಮಾಲೀಕ ಜಮ್‌ಶದ್‌ ಮೇಲೂ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಹೋಟೆಲ್‌ ಮಾಲೀಕ ಕೇರಳದಲ್ಲಿದ್ದಾರೆ. ಇದನ್ನೂ ಓದಿ: ಪೂರ್ವ ಮುಂಗಾರು ಮಳೆಗೆ ಬೆಂಗಳೂರು ತತ್ತರ – ಒಂದೇ ಒಂದು ಮಳೆಗೆ ಕೆರೆಯಂತಾದ ರಸ್ತೆಗಳು

ಜಿ.ಎಸ್‌ ಸೂಟ್‌ ಹೋಟೆಲ್‌ನ ಹೊರಭಾಗದ ಎಲ್‌ಇಡಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಅವಹೇಳನಕಾರಿ ಬರಹ ಪ್ರದರ್ಶಿಸಲಾಗಿತ್ತು. ಸ್ಥಳೀಯರು ಅದನ್ನು ಗಮನಿಸಿ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದರು. ಹೋಟೆಲ್‌ನ ಈ ನಡೆಗೆ ಕನ್ನಡಿಗರು ಅಸಮಾಧಾನ ಹೊರಹಾಕಿದ್ದರು.‌

ಈ ಸಂಬಂಧ ಮಡಿವಾಳ ಪೊಲೀಸ್‌ ಠಾಣೆ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಪಿಎಸ್‌ಐ ರಮೇಶ್‌ ಹೂಗಾರ್‌ ಅವರು ಹೋಟೆಲ್‌ ಮಾಲೀಕ ಜಮ್‌ಶದ್‌ ಮತ್ತು ಸರ್ಫರಾಜ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಹಾಲಿನ ದರ ಏರಿಕೆ ಸಾಧ್ಯತೆ – ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಕೆಗೆ ಚರ್ಚೆ?

Share This Article