ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್

Public TV
2 Min Read

ಬೆಳಗಾವಿ (Belgaum) ಮೂಲದ ಕನ್ನಡತಿ ಲಕ್ಷ್ಮೀ ರೈ (Lakshmi Rai) ಮತ್ತೊಂದು ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದಾರೆ. ರಾಣಿಯ ಕಾನ್ಸೆಪ್ಟ್ ರೀತಿಯಲ್ಲಿ ಫೋಟೋಶೂಟ್ (Photoshoot) ಆಗಿದ್ದು, ಸಖತ್ ಹಾಟ್ ಹಾಟ್ ಆಗಿಯೇ ಲಕ್ಷ್ಮಿ ಕಂಡಿದ್ದಾರೆ.

ಲಕ್ಷ್ಮೀ ರೈ ಈ ರೀತಿಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಇದೇ ಮೊದಲೇನೂ ಅಲ್ಲ. ಅವರು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಆಗಾಗ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಪ್ರವಾಸ ಹೋಗಿದ್ದ ಫೋಟೋಗಳನ್ನೂ ಅವರು ಹಂಚಿಕೊಳ್ಳುತ್ತಾರೆ.  ಮೊನ್ನೆಯಷ್ಟೇ ತಮ್ಮ ಹಾಟ್ ಫೋಟೋಶೂಟ್‌ನಿಂದಾಗಿ ಗಮನ ಸೆಳೆದಿದ್ದರು.

ಕನ್ನಡದ ವಾಲ್ಮೀಕಿ, ಸ್ನೇಹನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ (Kanchana) ಸೇರಿದಂತೆ ಹಲವರು ಚಿತ್ರದಲ್ಲಿ ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕಿಯಾಗಿ ಅವಕಾಶಗಳು ಸಿಗದೇ ಇದ್ದಾಗ ಐಟಂ ಡ್ಯಾನ್ಸ್‌ಗೆ ಬೆಳಗಾವಿ ಸುಂದರಿ ಸೊಂಟ ಬಳುಕಿಸಿದ್ದರು.

ಈ ವರ್ಷ ಆನಂದ ಭೈರವಿ, ಗ್ಯಾಂಗ್‌ಸ್ಟಾರ್ 21 ಸೇರಿದಂತೆ ಹಲವು ಸಿನಿಮಾಗಳು ನಟಿ ಲಕ್ಷ್ಮಿ ರೈ ಕೈಯಲ್ಲಿದೆ. ಹೊಸ ಕಥೆ, ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಸಿನಿಮಾರಂಗದಲ್ಲಿ ಅವರು ಆಕ್ಟೀವ್ ಆಗಿದ್ದಾರೆ. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಲಕ್ಷ್ಮಿ ರೈ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಪಿಂಕ್ ಬಣ್ಣದ ಬಿಕಿನಿ ತೊಟ್ಟು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬೀಚ್ ಮುಂದೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋವನ್ನು ಲಕ್ಷ್ಮೀ ರೈ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ನೀವು ಅದನ್ನು ಹೇಗೆ ಮಾಡುತ್ತೀರಿ ನನಗೆ ತಿಳಿದಿಲ್ಲ ಎಂದು ಯಾರೋ ಒಬ್ಬರು ನನಗೆ ಹೇಳಿದ್ದರು. ನನಗೆ ಆಯ್ಕೆ ನೀಡಲಾಗಿಲ್ಲ ಎಂದು ಅವನಿಗೆ ಹೇಳುತ್ತೇನೆ ಅಂತ ಬರೆದುಕೊಂಡಿದ್ದಾರೆ.

32 ವರ್ಷದ ಲಕ್ಷ್ಮಿ ರೈ ಸಿನಿ ರಂಗಕ್ಕೆ ಬಂದು 14 ವರ್ಷ ಕಳೆದರೂ ಇನ್ನೂ ಹಾಟ್ ಹಾಗೂ ಬೋಲ್ಡ್ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಮೂಲತಃ ಕನ್ನಡಿಗಳಾಗಿರುವ ಲಕ್ಷ್ಮೀ ರೈ ಹುಟ್ಟಿದ್ದು, ಬೆಳಗಾವಿಯಲ್ಲಿ. ಹೀಗಾಗಿ ಅವರನ್ನು ಕುಂದಾನಗರಿ ಸುಂದರಿ ಎಂದು ಕರೆಯಲಾಗುತ್ತದೆ.

 

ಲಕ್ಷ್ಮಿ ರೈ 2005ರಲ್ಲಿ ತಮಿಳು ಭಾಷೆಯ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಕನ್ನಡದಲ್ಲಿ ‘ಸ್ನೇಹನಾ ಪ್ರೀತಿನಾ’ ಮತ್ತು ‘ಕಲ್ಪನಾ’ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಲಕ್ಷ್ಮಿ ರೈ ಅವರು ‘ಜೂಲಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಪ್ರವೇಶಿಸಿದ್ದರು. ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ಪಿ.ವಿ.ಎಸ್ ಗುರುಪ್ರಸಾದ್ ನಿರ್ದೇಶನದ ‘ಝಾನ್ಸಿ’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Share This Article