ಇಂದು ಕೋರ್ಟ್‌ಗೆ ಹಾಜರಾಗಲಿದ್ದಾರೆ ರಮ್ಯಾ

Public TV
1 Min Read

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekaddare) ಚಿತ್ರತಂಡ ವಿವಾದದ ಸಂಬಂಧ ಇಂದು (ಜ.15) ನ್ಯಾಯಾಲಯಕ್ಕೆ ನಟಿ ರಮ್ಯಾ (Ramya) ಹಾಜರಾಗಲಿದ್ದಾರೆ. ಇದನ್ನೂ ಓದಿ:ಅಪ್ಪ, ಚಿಕ್ಕಪ್ಪನ ಜೊತೆ ವಿನೀಶ್ ಸಂಕ್ರಾಂತಿ ವೈಬ್ಸ್

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು. 1 ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿ ಈ ಪ್ರಕರಣದ ಸಂಬಂಧ ಜ.7ರಂದು ರಮ್ಯಾ ವಿಚಾರಣೆಗೆ ಬೆಂಗಳೂರಿನ ಕಮರ್ಷಿಯಲ್‌ ಕೋರ್ಟ್‌ಗೆ ಹಾಜರಾಗಿದ್ದರು. ಆಗ ಜನವರಿ 15ರಂದು ಒರಿಜಿನಲ್ ಅಗ್ರಿಮೆಂಟ್ ಕಾಪಿ ಜೊತೆಗೆ ಕೋರ್ಟ್‌ಗೆ ಬರಲು ರಮ್ಯಾಗೆ ಸೂಚನೆ ನೀಡಲಾಗಿತ್ತು. ಅದರಂತೆ ಇಂದು ದಾಖಲೆಗಳನ್ನು ಸಲ್ಲಿಸಲು ನಟಿ ಕೋರ್ಟ್‌ಗೆ ಹಾಜರಾಗಲಿದ್ದಾರೆ.

ಇನ್ನೂ 2024ರಲ್ಲಿ ರಿಲೀಸ್ ಆಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

Share This Article