ಜೂನ್‌ 21ರಿಂದ ಶುರುವಾಗಲಿದೆ ಅನಿಲ್ ಕಪೂರ್ ನಿರೂಪಣೆಯ ಬಿಗ್ ಬಾಸ್ ಒಟಿಟಿ

Public TV
1 Min Read

ಭಾರತದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಕಾರ್ಯಕ್ರಮಕ್ಕೆ ನೋಡುಗರ ವರ್ಗ ದೊಡ್ಡದಿದೆ. ಎಲ್ಲಾ ಭಾಷೆಯಲ್ಲೂ ದೊಡ್ಮನೆ ಆಟಕ್ಕೆ ಸ್ಕೋಪ್ ಇದೆ. ಅದರಲ್ಲೂ ನಟ ಸಲ್ಮಾನ್ ಖಾನ್ (Salman Khan) ನಿರೂಪಣೆಯ ಬಿಗ್ ಬಾಸ್ ಟಿವಿ ಮತ್ತು ಒಟಿಟಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಇದೀಗ ಈ ಶೋ ಇಷ್ಟಪಡುವ ಪ್ರೇಕ್ಷಕರಿಗೆ ನಿರಾಸೆಯ ಸುದ್ದಿ ಸಿಕ್ಕಿದೆ. ಈ ಬಾರಿ ದೊಡ್ಮನೆ ಒಟಿಟಿ ಶೋಗೆ ಸಲ್ಮಾನ್ ಖಾನ್ ಬದಲು ಆ್ಯಂಕರ್ ಅನಿಲ್ ಕಪೂರ್ (Anil Kapoor) ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಹಿಂದಿ ಒಟಿಟಿ 3 ಪ್ರಸಾರಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಇದನ್ನೂ ಓದಿ:4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ

ಸ್ಟಾರ್ ನಟ ಸಲ್ಮಾನ್ ನಿರೂಪಣೆಯ ಕಾರ್ಯಕ್ರಮಕ್ಕೆ ಮತ್ತೊಬ್ಬ ಸ್ಟಾರ್ ನಟ ನಿರೂಪಣೆಯ ಹೊಣೆ ವಹಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಯೇ ಕಾರ್ಯಕ್ರಮದ ಪ್ರೋಮೋ ಕೂಡ ರಿವೀಲ್ ಆಗಿದ್ದು, ಸಲ್ಮಾನ್ ಖಾನ್ ಬದಲು ಅನಿಲ್ ಎಂಟ್ರಿ ಕೊಟ್ಟಿರುವ ಸುಳಿವು ನೀಡಿದ್ದರು. ಈಗ ಅನಿಲ್ ಕಪೂರ್ ನಿರೂಪಕ ಎಂದು ತಿಳಿಸಿದ್ದು, ಜೂನ್ 21ರಿಂದ ಬಿಗ್ ಬಾಸ್ ಒಟಿಟಿ 3 ಶೋ ಜಿಯೋ ಸಿನಿಮಾ ಒಟಿಟಿ ಫ್ಲಾರ್ಟ್‌ ಫಾರಂನಲ್ಲಿ ಪ್ರಸಾರವಾಗಲಿದೆ ಎಂದು ಬಿಗ್ ಬಾಸ್ ಟೀಮ್ ಅಧಿಕೃತ ಘೋಷಣೆ ಮಾಡಿದೆ.

ಇತ್ತೀಚೆಗೆ ಬಿಗ್ ಬಾಸ್ ಒಟಿಟಿ ತಂಡ ಬಿಡುಗಡೆ ಮಾಡಿರುವ ಈ ಪ್ರೋಮೋದಲ್ಲಿ ಅನಿಲ್ ಕಪೂರ್ ಅವರ ಮುಖ ಕಾಣಿಸಿಲ್ಲ. ಆದರೆ ಧ್ವನಿ ಕೇಳಿಸಿತ್ತು. ಹಾಗಾಗಿ ಇದು ಪಕ್ಕಾ ಅನಿಲ್ ಎಂಬುದು ಖಚಿತವಾಗಿತ್ತು. ನಟ ಅನಿಲ್ ಮಗಳು ಸೋನಮ್ ಕಪೂರ್ ಅವರು ಪ್ರೋಮೋ ಶೇರ್ ಮಾಡಿ, ಪ್ರತಿಭಾವಂತ, ಪರಿಶ್ರಮಿ ಮತ್ತು ಹ್ಯಾಂಡ್ಸಮ್ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಡಿಬರಹ ನೀಡಿ ಹಾಡಿಹೊಗಳಿದ್ದರು.

ಅಂದಹಾಗೆ, ಮೊದಲ ಬಾರಿಗೆ ಬಿಗ್ ಬಾಸ್ ಕಾರ್ಯಕ್ರಮದ ರೂವಾರಿ ಆಗಿ ಕಾಣಿಸಿಕೊಳ್ಳುತ್ತಿರುವ ಅನಿಲ್ ನಿರೂಪಣೆಯ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಜೊತೆಗೆ ಯಾರೆಲ್ಲಾ ಕಾರ್ಯಕ್ರಮಕ್ಕೆ ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

Share This Article