ಅಯೋಧ್ಯೆಯಲ್ಲಿ ಭೀಕರ ಅಪಘಾತ – ಕಲಬುರಗಿಯ ಮೂವರು ದುರ್ಮರಣ

By
1 Min Read

ಕಲಬುರಗಿ: ಯಾತ್ರೆಗೆ ತೆರಳಿದ್ದ ವೇಳೆ ಟಿಟಿ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ (Accident) ನಗರದ ಮೂವರು ಮೃತಪಟ್ಟ ಘಟನೆ ಅಯೋಧ್ಯೆಯಲ್ಲಿ (Ayodhya) ನಡೆದಿದೆ.

ಮೃತರನ್ನು ಕಲಬುರಗಿಯ (Kalaburagi) ಶಿವರಾಜ್, ಕಾಶಿನಾಥ್ ಮತ್ತು ತಂಗೆಮ್ಮ ಎಂದು ಗುರುತಿಸಲಾಗಿದೆ. ನಗರದ 22 ಜನರು ಕುಟುಂಬ ಸಮೇತರಾಗಿ ಯಾತ್ರೆಗೆ ತೆರಳಿದ್ದರು. ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಅಯೋಧ್ಯೆಗೆ ಹೊರಟಿದ್ದರು. ಈ ವೇಳೆ ಅಯೋಧ್ಯೆಯ ಪ್ರಯಾಗ್‍ರಾಜ್ ಹೈವೇಯಲ್ಲಿ (Prayagraj Highway) ಲಾರಿ ಹಾಗೂ ಟಿಟಿ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ನಿಮ್ಮ ಮಗ ವಿದೇಶಕ್ಕೆ ಹೋಗುವಾಗ ನಿಮ್ಮ ಅನುಮತಿ ಪಡೆದಿದ್ದರೇ – ಸಿಎಂಗೆ ಹೆಚ್‍ಡಿಕೆ ಪ್ರಶ್ನೆ

ವಾಹನದಲ್ಲಿದ್ದ ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಯೋಧ್ಯೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸಿಎಂ, ಡಿಸಿಎಂ ಧರ್ಮಸ್ಥಳ ಪ್ರವೇಶಿಸ್ತಿದ್ದಂತೆಯೇ ಜೈ ಶ್ರೀರಾಮ್ ಘೋಷಣೆ ಕೂಗಿದ ಭಕ್ತರು!

Share This Article