ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಮರಕ್ಕೆ ಕಾರು ಡಿಕ್ಕಿ ಹೊಡೆದು ಯುವಕ ಸಾವು

Public TV
1 Min Read

ರಾಮನಗರ: ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಕನಕಪುರ (Kanakapura) ತಾಲೂಕಿನ ದೊಡ್ಡಮುದವಾಡಿ ಗ್ರಾಮದ ಬಳಿ ಇಂದು (ಸೋಮವಾರ) ಮುಂಜಾನೆ ನಡೆದಿದೆ.

ಇಂದು ಬೆಳ್ಳಂಬೆಳಗ್ಗೆ ನಿದ್ರೆ ಮಂಪರಿನಲ್ಲಿದ್ದ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿದ್ದಾನೆ. ಡಿಕ್ಕಿಯಾಗಿರುವ ರಭಸಕ್ಕೆ ವಿನಯ್ (24) ಎಂಬ ಯುವಕ ಸ್ಥಳದಲ್ಲೇ ಮೃತ ಪಟ್ಟಿದ್ದು, ಅನಿಕೇತ್ ಎಂಬವನಿಗೆ ಗಂಭೀರ ಗಾಯವಾಗಿದೆ. ಇದನ್ನೂ ಓದಿ: ಬೆಂಗಳೂರು| ಉತ್ತರ ಭಾರತ ಮೂಲದ ಯುವಕನ ಮೇಲೆ ಆಸಿಡ್ ದಾಳಿ

ಕಾರಿನಲ್ಲಿದ್ದವರು ಬೆಂಗಳೂರಿನ (Bengaluru) ಇಟ್ಟಮಡು ನಿವಾಸಿಗಳಾಗಿದ್ದು, ವೀಕೆಂಡ್ ಹಿನ್ನೆಲೆ ರೆಸಾರ್ಟ್‌ಗೆ ಬಂದಿದ್ದರು. ಹಿಂತಿರುಗಿ ಹೋಗುವಾಗ ಅಪಘಾತ ಸಂಭವಿಸಿದೆ. ಸ್ಥಳೀಯರು ಗಾಯಾಳುವನ್ನ ಹಾರೋಹಳ್ಳಿಯ ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಿಸ್ ಯೂನಿವರ್ಸ್ ಇಂಡಿಯಾ-2024 ಕಿರೀಟ ಗೆದ್ದ ಗುಜರಾತಿ ಸುಂದರಿ

Share This Article