ರಾಜ್ಯದಲ್ಲಿ ನಡೆದಿರೋ ಮರ್ಯಾದಾ ಹತ್ಯೆ ಕೇಸ್ ಸುಮೋಟೊ ಕೇಸ್ ಹಾಕಿ ತನಿಖೆ: ಪರಮೇಶ್ವರ್

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಮರ್ಯಾದಾ ಹತ್ಯೆ ಕುರಿತು ಸುಮೋಟೊ ಕೇಸ್ (Sumoto Case) ದಾಖಲು ಮಾಡುವ ಬಗ್ಗೆ ಗೃಹ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr G.Parameshwar) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಪ್ರಕರಣದ ಕುರಿತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ಪ್ರಕಾರ ಯಾರಾದರೂ ದೂರು ಕೊಡಬೇಕು. ದೂರು ಕೊಡದೇ ಹೋದರೂ ಸುಮೋಟೊ ಕೇಸ್ ದಾಖಲು ಮಾಡಲು ಅವಕಾಶ ಇದೆ. ಸುಮೋಟೊ ಕೇಸ್ ಪೊಲೀಸರು ತೆಗೆದುಕೊಳ್ಳುತ್ತಾರೆ. ಕೇಸ್‌ನ ಪ್ರಾಮುಖ್ಯತೆ ನೋಡಿ ಪೊಲೀಸರೇ ಸುಮೋಟೊ ಕೇಸ್ ತೆಗೆದುಕೊಳ್ಳುವ ಪ್ರಕ್ರಿಯೆ ನಮ್ಮಲ್ಲಿ ಇದೆ ಎಂದು ಹೇಳಿದರು. ಇದನ್ನೂ ಓದಿ: ನಾಡದೇವತೆಗೆ ರೇಷ್ಮೆ ಸೀರೆ ಕೊಟ್ಟು ಹರಕೆ ತೀರಿಸಿದ ಸಿಎಂ, ಡಿಸಿಎಂ!

ಸಮಾಜದಲ್ಲಿ ಇಂತಹ ಘಟನೆ ಆಗಬಾರದು. ಸಮಾಜದಲ್ಲಿ ಇದೊಂದು ದೊಡ್ಡ ಪಿಡುಗು ತರಹ ಆಗುತ್ತಿದೆ. ನಾನು ಕಾನೂನು ಪ್ರಕಾರ ನಿಲ್ಲಿಸಬಹುದು. ಆದರೆ ಜನರು ಇದನ್ನು ಇನ್ನೂ ಹೆಚ್ಚು ಅರ್ಥ ಮಾಡಿಕೊಳ್ಳಬೇಕು. ಗೃಹ ಇಲಾಖೆಯೇ ಕೆಲವು ಸಂದರ್ಭಗಳಲ್ಲಿ ಸುಮೋಟೊ ಕೇಸ್ ಹಾಕಿಕೊಂಡು ತನಿಖೆ ಮಾಡುತ್ತದೆ. ಈ ಪ್ರಕರಣದಲ್ಲಿ ಏನೇನಾಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಇದರ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಟ್ಟರೆ ಬೆಂಗಳೂರಿಗೆ ಸಂಕಷ್ಟ

ಕೆಲವು ಸಮಯದಲ್ಲಿ ಪೋಷಕರೇ ದೂರು ಕೊಡುತ್ತಾರೆ. ಆಗ ಕಾನೂನು ಪ್ರಕಾರ ಕ್ರಮ ಆಗಿ ಶಿಕ್ಷೆ ಆಗುತ್ತದೆ. ಈ ಕೇಸ್‌ನಲ್ಲಿ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನಾಡಹಬ್ಬ ದಸರಾಗೆ ಹಂಸಲೇಖರಿಂದ ಚಾಲನೆ: ಸಿಎಂ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್